ಕನ್ನಡ ವಾರ್ತೆಗಳು

ಎಸ್.ಎಸ್.ಎಲ್.ಸಿ.ಯಲ್ಲಿ ಉಡುಪಿ ಜಿಲ್ಲೆಯೆಲ್ಲಿಯೇ ಹೆಚ್ಚು ಅಂಕ ಗಳಿಸಿದ ಕುಂದಾಪುರದ ‘ತ್ರಿಮೂರ್ತಿಗಳು’

Pinterest LinkedIn Tumblr

(Exclusive Chit-Chat: Yogish Kumbashi)

ಕುಂದಾಪುರ: ಸೋಮವಾರ ಎಸ್.ಎಸ್.ಎಲ್.ಸಿ. ಫಲಿತಾಂಶ ಹೊರಬಿದ್ದಿದ್ದು ರಾಜ್ಯದಲ್ಲಿ ಉಡುಪಿ ಎರಡನೇ ಸ್ಥಾನದಲ್ಲಿದೆ. ಈ ನಡುವೆಯೇ ಕುಂದಾಪುರ ಭಾಗದ ವಿದ್ಯಾರ್ಥಿಗಳ ಸಾಧನೆ ಅಗ್ರಗಣ್ಯವಾಗಿದೆ. 625 ಅಂಕಗಳಲ್ಲಿ 622 ಅಂಕ ಪಡೆದ ಕುಂದಾಪುರದ ಮೂವರು ವಿದ್ಯಾರ್ಥಿಗಳ ಬಗೆಗಿನ ವರದಿಯಿದು.

Jpeg

ಎಸ್.ಎಸ್.ಎಲ್.ಸಿ. ಪರೀಕ್ಷೆಯ ಪಲಿತಾಂಶದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಬಂದ ಉಡುಪಿ ಜಿಲ್ಲೆಯಲ್ಲಿ ಹೆಚ್ಚು ಅಂಕ ಗಳಿಸಿ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯಲು ಬಹುತೇಕ ಕುಂದಾಪುರ ತಾಲೂಕಿನ ವಿದ್ಯಾರ್ಥಿಗಳು ಮುಂಚೂಣಿಯಲ್ಲಿದ್ದಾರೆ. ಸೋಮವಾರ ಸಂಜೆವರೆಗಿನ ಎಲ್ಲಾ ಮೂಲಗಳ ಮಾಹಿತಿಗಳನ್ನು ಆಧರಿಸಿದರೇ ಕುಂದಾಪುರ ತಾಲೂಕಿನ ವಿವಿದ ಶಾಲೆಗಳ ಮೂವರು ವಿದ್ಯಾರ್ಥಿಗಳು 622 ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಲಿದ್ದಾರೆ ಎನ್ನುವ ಮಾಹಿತಿಗಳಿದೆ. ಈ ಮೂವರ ಪೈಕಿ ಓರ್ವ ಕುಂದಾಪುರದ ಬಸ್ರೂರು ಸರಕಾರಿ ಶಾಲೆ ವಿದ್ಯಾರ್ಥಿ ಎನ್ನುವುದು ಎಲ್ಲರಿಗೊಂದು ಹೆಮ್ಮೆ. ಈ ಮೂವರು ಕೂದ ಯಾವುದೇ ಟ್ಯೂಶನ್ ಇಲ್ಲದೇ ಸಾಧನೆ ಮಾಡಿದವರು.

ಟಾಪ್ಸರ್ರ್ಸ್ ತ್ರಿಮೂರ್ತಿಗಳು..
ಕುಂದಾಪುರ ತಾಲೂಕಿನ ಬಸ್ರೂರು ಸರಕಾರಿ ಪ್ರೌಢಶಾಲೆ (ಬಾಯ್ಸ್ ಹೈಸ್ಕೂಲ್) ವಿದ್ಯಾರ್ಥಿ ವೆಂಕಟೇಶ ಪುರಾಣಿಕ 622 ಅಂಕ, ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆ ಗಂಗೊಳ್ಳಿಯ ವಿದ್ಯಾರ್ಥಿನಿ ಚೈತ್ರಾ ಶಾನುಭಾಗ್ 622 ಅಂಕ, ಕುಂದಾಪುರದ ವಿ.ಕೆ.ಆರ್. ಆಂಗ್ಲ ಮಾಧ್ಯಮ ಶಾಲೆಯ ವಿವೇಕ್ ಗಿರಿಧರ್ ಪೈ 622 ಅಂಕ ಪಡೆದಿದ್ದು ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನಿಯಗುವ ಹಂತದಲ್ಲಿದ್ದಾರೆ ಎನ್ನಲಾಗಿದೆ.

Jpeg

Kundapura_S.S.L.C (4)

ಸರಕಾರಿ ಶಾಲೆಯಲ್ಲಿ ವೆಂಕಟೇಶ ಪುರಾಣಿಕನ ಸಾಧನೆ ಅಪಾರ..
ಈತ ವೆಂಕಟೇಶ ಪುರಾಣಿಕ. ಹತ್ತನೆಯ ತರಗತಿಯನ್ನು ಯಾವುದೇ ಟ್ಯುಶನ್ ಇಲ್ಲದೇ ಮಾಡಿದ ಈತ ಓದಿದ್ದು ಕುಂದಾಪುರದ ಬಸ್ರೂರು ಎಂಬಲ್ಲಿಯ ಸರಕಾರಿ ಪ್ರೌಢಶಾಲೆ ಅಥವಾ ಬಾಯ್ಸ್ ಹೈಸ್ಕೂಲ್ ಎಂಬಲ್ಲಿ. ಈತನ ಈ ಸಾಧನೆಗೆ ಆತನ ಫೋಷಕರು ಹಾಗೂ ಮನೆಯವರು ಕೊಟ್ಟ ಮಾರ್ಗದರ್ಶನ ಹಾಗೂ ಪ್ರೋತ್ಸಾಹವೇ ಕಾರಣವಂತೆ. ಬಸ್ರೂರು ಜಟ್ಟಿಗ ದೇವಸ್ಥಾನದ ರಸ್ತೆಯ ಅನತಿ ದೂರದ ಪುರಾಣಿವಳಾಲ್ ನಿವಾಸಿಯಾಗಿರುವ ಸುಬ್ರಮಣ್ಯ ಪುರಾಣಿಕ ಹಾಗೂ ಅನ್ನಪೂರ್ಣ ದಂಪತಿಗಳ ಮಗ. ಅಜ್ಜ, ಅಜ್ಜಿ, ಅಪ್ಪ-ಅಮ್ಮನ ಹಾಗೂ ಸಹೋದರಿ ಜೊತೆ ಇರುವ ಈತನಿಗೆ ವಾಣಿಜ್ಯ ವಿಭಾದಲ್ಲಿ ಮುಂದುವರಿದು ಸಿ.ಎ. ಆಗಿ ಸಮಾಜ ಸೇವೆ ಮಾಡುವಾಸೆ.

Kundapura_S.S.L.C (2)

ಹಳ್ಳಿ ಹುಡುಗಿ ಚೈತ್ರಾಗೆ ಸ್ಪೇಸ್ ಇಂಜಿನಿಯರ್ ಆಗುವ ಕನಸು…
ಈ ಸಾಧಕಿ ಉಡುಪಿ ಜಿಲ್ಲೆಯ ಕುಂದಾಪುರದ ಗಂಗೊಳ್ಳಿ ಸಮೀಪದ ವಿದ್ಯಾರ್ಥಿನಿ. ಹೆಸರು ಚೈತ್ರಾ ಶಾನುಭಾಗ್. ಒಂದನೇ ತರಗತಿಯಿಂದ ಆರನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ ಗಂಗೊಳ್ಳಿ ಸಮೀಪದ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿನಿ ಈಕೆ. ಗಂಗೊಳ್ಳಿ ಸಮೀಪದ ಗುಜ್ಜಾಡಿ ನಿವಾಸಿಯಾದ ಈಕೆಗೆ ಆಸ್ಟ್ರಾ ಫಿಸಿಕ್ಸ್ ಅಥವಾ ಸ್ಪೇಸ್ ಇಂಜಿನಿಯರಿಂಗ್ ಮಾಡುವಾಸೆ. ಈಕೆ ರವೀಂದ್ರ ಶಾನಭಾಗ್ ಹಾಗೂ ಗಣಿತ ಶಿಕ್ಷಕಿ ಗೀತಾ ಅವರ ಏಕೈಕ ಪುತ್ರಿ.

Kundapura_S.S.L.C (1)

ಮೆಡಿಕಲ್ ಓದುವಾಸೆ ಅಂತಾರೆ ಕುಂದಾಪುರ ವಿ.ಕೆ.ಆರ್. ಶಾಲೆ ವಿವೇಕ
ಕುಂದಾಪುರ ವಿ.ಕೆ.ಆರ್. ಆಗ್ಲಂಮಾಧ್ಯಮ ಶಾಲೆ ವಿದ್ಯಾರ್ಥಿ ವಿವೇಕ ಗಿರಿಧರ್ ಪೈ ಅವರಿಗೆ ಮೆಡಿಕಲ್ ಓದುವಾಸೆ ಇದೆಯಂತೆ. ವಿವೇಕ್ ತಂದೆ ಗಿರಿಧರ್ ಪೈ ಕೆ.ಎಸ್.ಆರ್.ಟಿಸಿ. ಕಛೇರಿಯ ಅಧಿಕಾರಿ. ತಾಯಿ ಗಾಯತ್ರಿ ಕುಂದಾಪುರ ಭಂದಾರಕಾರ್ಸ್ ಕಾಲೇಜಿನಲ್ಲಿ ಬಾಟನಿ ವಿಭಾಗದ ಎಚ್.ಡಿ.ಓ.

Write A Comment