ಕನ್ನಡ ವಾರ್ತೆಗಳು

ಶೀನಾ ಬೋರಾನನ್ನು ಕತ್ತು ಹಿಸುಕಿ ಕೊಂದೆ ಎಂದು ತಪ್ಪೊಪ್ಪಿಕೊಂಡ ಇಂದ್ರಾಣಿಯ ಚಾಲಕ.

Pinterest LinkedIn Tumblr

sheena-bora

ಮುಂಬೈ,ಮೇ.11: ಶೀನಾ ಬೋರಾ ಕೊಲೆ ಪ್ರಕರಣ ಈಗ ಮತ್ತೊಂದು ತಿರುವು ಪಡೆದುಕೊಂಡಿದ್ದು, ಪ್ರಮುಖ ಆರೋಪಿಯಾಗಿರುವ ಇಂದ್ರಾಣಿ ಮುಖರ್ಜಿಯ ಮಾಜಿ ಚಾಲಕ ಶ್ಯಾಮ್’ವರ್ ರಾಯ್, ವಿಚಾರಣೆ ವೇಳೆ ಪ್ರಮುಖ ಸತ್ಯಗಳನ್ನು ಬಹಿರಂಗಪಡಿಸಿದ್ದು, ಶೀನಾ ಬೋರಾನನ್ನು ನಾನು ಕತ್ತು ಹಿಸುಕಿ ಕೊಂದೆ ಎಂದು ಸಿಬಿಐನ ವಿಶೇಷ ನ್ಯಾಯಾಲಯದಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ.

ಕಳೆದ ವಾರ ರಾಯ್, ನ್ಯಾಯಾಲಯಕ್ಕೆ 2 ಪುಟಗಳಲ್ಲಿ ಪತ್ರವನ್ನು ಬರೆದು ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಸತ್ಯವನ್ನು ತಿಳಿಸುವುದಾಗಿ ತಿಳಿಸಿದ್ದ.

ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಹೆಚ್.ಎಸ್. ಮಹಾಜನ್ ಅವರು ವಿಚಾರಣೆಗೆ ಕರೆದಾಗ ‘ಶೀನಾನನ್ನು ಕೊಲೆ ಮಾಡಲು ಹೇಳುತ್ತಾರೆಂದು ನನಗೆ ಗೊತ್ತಿತ್ತು’. ನನಗೆ ಈ ಸತ್ಯಗಳನ್ನು ಹೇಳಲು ‘ಯಾವುದೇ ಒತ್ತಡ, ಬೆದರಿಕೆ ಅಥವಾ ಒತ್ತಾಯವಿರಲಿಲ್ಲ. ಅಲ್ಲದೆ ಈ ಕೃತ್ಯ ಮಾಡಿದ್ದಕ್ಕೆ ನನಗೆ ಪಶ್ಚಾತ್ತಾಪವಿದೆ’ ಎಂದು ತಿಳಿಸಿದ್ದಾನೆ.

ನ್ಯಾಯಾಲಯವು ಪ್ರಕರಣದ ತಪ್ಪೊಪ್ಪಿಗೆ ಅರ್ಜಿಯ ಬಗ್ಗೆ ಮೇ.17ರೊಳಗೆ ಉತ್ತರ ನೀಡುವಂತೆ ಸಿಬಿಐ’ಗೆ ನಿರ್ದೇಶಿಸಿದೆ. ಶೀನಾ ಬೋರಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿಂತೆ ರಾಯ್’ನನ್ನು 2015 ಆಗಸ್ಟ್’ನಲ್ಲಿ ಬಂಧಿಸಲಾಗಿತ್ತು.

Write A Comment