ರಾಷ್ಟ್ರೀಯ

ಬ್ರಿಟನ್ ರಾಣಿ ಎಲಿಜೆಬಿತ್ ಗಿಂತ ಸೋನಿಯಾ ಗಾಂಧಿ ಶ್ರೀಮಂತೆ! ಸೆಲೆಬ್ರೆಟಿ ನೆಟವರ್ಥ್.ಕಾಮ್ ಬಿಡುಗಡೆಗೊಳಿಸಿದ ಪಟ್ಟಿಯಲ್ಲಿ ಕಾಂಗ್ರೆಸ್ ಅಧಿನಾಯಕಿಗೆ 26ನೇ ಸ್ಥಾನ

Pinterest LinkedIn Tumblr

Sonia Gandhi is richer than British Queen Elizabeth II

ನವದೆಹಲಿ: ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾಗಾಂಧಿ ಬ್ರಿಟನ್ ರಾಣಿ ಎಲಿಜೆಬೆತ್ ಗಿಂತಲೂ ಅಧಿಕ ಮೌಲ್ದ ಆಸ್ತಿ ಹೊಂದಿದ್ದಾರೆ ಎಂದು ಸೆಲೆಬ್ರೆಟಿ ನೆಟವರ್ಥ್.ಕಾಮ್ ಸಂಸ್ಥೆ ಹೇಳಿದೆ.

ವಿಶ್ವದ ಖ್ಯಾತನಾಮರ ಆಸ್ತಿ ವಿವರಗಳ ಆಧಾರದ ಮೇಲೆ ಸೆಲೆಬ್ರೆಟಿ ನೆಟವರ್ಥ್.ಕಾಮ್ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಸೋನಿಯಾಗಾಂಧಿ 26ನೇ ಸ್ಥಾನ ಪಡೆದಿದ್ದಾರೆ. ಸೆಲೆಬ್ರೆಟಿ ನೆಟವರ್ಥ್.ಕಾಮ್ ನೀಡಿರುವ ಮಾಹಿತಿಯಂತೆ ಸೋನಿಯಾಗಾಂಧಿ ಅವರು ಸುಮಾರು 13335 ಕೋಟಿ ರು. ಆಸ್ತಿ ಹೊಂದುವ ಮೂಲಕ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿಶ್ವದ ಶ್ರೀಮಂತ ರಾಜಕಾರಣಿಗಳ ಪೈಕಿ 26ನೇ ಸ್ಥಾನ ಪಡೆದುಕೊಂಡಿದ್ದಾರೆ.

ಸಂಸ್ಥೆಯ ಪ್ರಕಾರ ಸೋನಿಯಾ ಗಾಂಧಿ ಆಸ್ತಿ ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಮತ್ತು ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್ ಗಿಂತಲೂ ಹೆಚ್ಚಾಗಿದೆ. 1.4 ಬಿಲಿಯನ್ ಆಸ್ತಿ ಹೊಂದಿರುವ ನವಾಜ್ ಶರೀಫ್ ಪಟ್ಟಿಯಲ್ಲಿ ಸೋನಿಯಾ ನಂತರದ ಸ್ಥಾನದಲ್ಲಿದ್ದಾರೆ.

ಪಟ್ಟಿಯಲ್ಲಿ ಸೋನಿಯಾಗಾಂಧಿ ಅವರ ಅವರ ನಿಖರ ಆಸ್ತಿ ಎಷ್ಟು? ಅವರ ಸ್ಥಿರಾಸ್ತಿ ಹಾಗೂ ಚರಾಸ್ತಿಗಳ ವಿವರವನ್ನು ನೆಟ್‌ವರ್ತ್ ಡಾಟ್‌ಕಾಮ್ ಬಹಿರಂಗ ಪಡೆಸಿಲ್ಲ. ಸೆಲೆಬ್ರಿಟಿ ನೆಟ್‌ವರ್ತ್ ಡಾಟ್‌ಕಾಮ್ ಬಿಡುಗಡೆ ಮಾಡಿರುವ 50 ಶ್ರೀಮಂತ ರಾಜಕಾರಣಿಗಳ ಪಟ್ಟಿಯಲ್ಲಿ ಭಾರತದ ಬೇರಾವ ರಾಜಕಾರಣಿ ಕೂಡಾ ಇದರಲ್ಲಿ ಸ್ಥಾನ ಪಡೆದುಕೊಂಡಿಲ್ಲ.

ಇನ್ನು ಸೆಲೆಬ್ರೆಟಿ ನೆಟವರ್ಥ್.ಕಾಮ್ ನ ಪಟ್ಟಿಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಗ್ರ ಸ್ಥಾನ ಪಡೆದಿದ್ದು, ಅವರ ಆಸ್ತಿ ಮೌಲ್ಯ 7000 ಕೋಟಿ ಡಾಲರ್ ಎಂದು ಹೇಳಲಾಗಿದೆ. ಉಳಿದಂತೆ ಸೌದಿ ಅರೇಬಿಯಾದ ರಾಜ ಅಲ್‌ವಲೀದ್ ಬಿನ್ ತಲಾಲ್ ಅಲ್ ಸೌದ್( 1.33 ಲಕ್ಷ ಕೋಟಿ ರೂ.) ಮತ್ತು ಬ್ರುನೈ ರಾಜ ಹುಸೇನಯಿ ಮುಜಾದ್ದೀನ್ ವಾದುಲ್ಲಾ (1.32 ಲಕ್ಷ ಕೋಟಿ ರೂ.) ಕ್ರಮವಾಗಿ 3, 4 ಮತ್ತು 5ನೇ ಸ್ಥಾನದಲ್ಲಿದ್ದಾರೆ. ಅಣ್ವಸ್ತ್ರ ಪರೀಕ್ಷೆ ಮೂಲಕ ಇಡೀ ವಿಶ್ವದ ಕೆಂಗಣ್ಣಿಗೆ ಗುರಿಯಾಗಿರುವ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಕೂಡ ಪಟ್ಟಿಯಲ್ಲಿದ್ದು, 5 ಬಿಲಿಯನ್ ಆಸ್ತಿ ಮೂಲಕ ಉನ್ ಪಟ್ಟಿಯಲ್ಲಿ 15 ಸ್ಥಾನದಲ್ಲಿದ್ದಾರೆ.

ಉಳಿದಂತೆ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ 1 ಮಿಲಿಯನ್ ಆಸ್ತಿ ಹೊಂದಿದ್ದರೆ, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ 12.5 ಮಿಲಿಯನ್ ಡಾಲರ್ ಆಸ್ತಿ ಹೊಂದಿದ್ದಾರೆ ಎಂದು ಸೆಲೆಬ್ರಿಟಿ ನೆಟ್ ವರ್ಥ್.ಕಾಮ್ ಹೇಳಿದೆ.

Write A Comment