ಕನ್ನಡ ವಾರ್ತೆಗಳು

ಪನಾಮಾ ಪೇಪರ್ಸ್ ಹೊಸಪಟ್ಟಿ: ತೆರಿಗೆ ಸ್ವರ್ಗಗಳೊಂದಿಗೆ ಕರ್ನಾಟಕಕ್ಕೂ ಭಾರೀ ನಂಟು

Pinterest LinkedIn Tumblr

Panama_papers_pic

ಬೆಂಗಳೂರು,ಮೇ.10 : ತೆರಿಗೆ ಸ್ವರ್ಗಗಳೆಂದು ಕರೆಯಲ್ಪಡುವ ದೇಶಗಳಲ್ಲಿರುವ ಉದ್ಯಮಸಂಸ್ಥೆಗಳೊಂದಿಗೆ ಸಂಬಂಧ ಹೊಂದಿರುವರ ಹೊಸಪಟ್ಟಿಯನ್ನು ಅಂತರಾಷ್ಟ್ರೀಯ ತನಿಖಾ ಪತ್ರಕರ್ತರ ಸಂಘಟನೆಯು ಬಿಡುಗಡೆ ಮಾಡಿದ್ದು, ದಾಖಲೆಗಳಲ್ಲಿ ಕರ್ನಾಟಕದ ಸುಮಾರು 40 ವಿಳಾಸಗಳು ಸೇರಿದಂತೆ ಎರಡು ಸಾವಿರ ಭಾರತೀಯರ ಹೆಸರುಗಳು ಬಹಿರಂಗವಾಗಿದೆ.

ಮೊಸ್ಯಾಕ್ ಫೋನ್ಸೆಕ ಕಾನೂನು ವ್ಯವಹಾರ ಸಂಸ್ಥೆಯಿಂದ ಸೋರಿಕೆಯಾಗಿರುವ ಈ ದಾಖಲೆಗಳಲ್ಲಿ ಭಾರತದ ಪ್ರಮುಖ ಉದ್ಯಮಿಗಳು ಮತ್ತು ತಾರೆಯರು ಹೆಸರುಗಳನ್ನು ಕಳೆದ ತಿಂಗಳು ಇಂಡಿಯನ್ ಎಕ್ಸ್’ಪ್ರೆಸ್ ಬಹಿರಂಗಪಡಿಸಿತ್ತು.

ಬಹಿರಂಗವಾಗಿರುವ ದಾಖಲೆಗಳ ಪ್ರಕಾರ ಬ್ರಿಟಿಷ್ ವರ್ಜಿನಿಯಾ ದ್ವೀಪದಲ್ಲಿ ಕರ್ನಾಟಕ ಲಿಮಿಟೆಡ್, ಬೆಂಗಳೂರು ಎಂಟರ್‍’ಪ್ರೈಸಸ್ ಲಿಮಿಟೆಡ್, ಬಳ್ಳಾರಿ ಕಾರಪೊರೇಶನ್ ಎಂಬ ಹೆಸರಿನ ಕಂಪನಿಗಳು ಸ್ಥಾಪಿಸಲಾಗಿದ್ದರೆ, ಬ್ರಿಟಿಷ್ ಆಂಗ್ವಿಲಾದಲ್ಲಿ ಪ್ರೈಮುಲರ್ ಬೆಂಗಳೂರು ಎಂಬ ಕಂಪನಿ ಕಾರ್ಯಾಚರಿಸುತ್ತಿದೆ. ಪನಾಮದಲ್ಲಿದ್ದ ಬೆಂಗಳೂರು ಬಿಸ್’ನೆಸ್ ಎಂಬ ಕಂಪನಿಯು ಮುಚ್ಚಿಹೋಗಿದೆ.

ಈ ಎಲ್ಲಾ ಕಂಪನಿಗಳಿಗೆ ಜೆರ್ಸಿ, ಲಕ್ಸಂಬರ್ಗ್, ಹಾಂಕಾಂಗ್, ಹಾಗೂ ಸ್ವಿಝರ್’ಲ್ಯಾಂಡ್ ಮುಂತಾದ ದೇಶಗಳೊಂದಿಗೆ ವ್ಯವಹಾರ ಸಂಬಂಧ ಹೊಂದಿತ್ತು ಅಥವಾ ಹೊಂದಿದೆ.
ತೆರಿಗೆ ಸ್ವರ್ಗಗಳಲ್ಲಿರುವ ಕಂಪನಿಗಳೊಂದಿಗೆ ಸುಮಾರು ಎರಡು ಸಾವಿರ ಭಾರತೀಯರು ಸಂಬಂಧ ಹೊಂದಿದ್ದಾರೆ, ಅದರಲ್ಲಿ ಸುಮಾರು 40 ವಿಳಾಸಗಳು ಕರ್ನಾಟಕ ರಾಜ್ಯದ ಬೆಂಗಳೂರು, ಮೈಸೂರು ಹಾಗೂ ಬಳ್ಳಾರಿ ನಗರಗಳದ್ದಾಗಿವೆ.

Write A Comment