ಕನ್ನಡ ವಾರ್ತೆಗಳು

ಝಯೋಪಿನ್ ಡಾಟ್.ಕಾಂ ಸಮೀಕ್ಷೆಯಂತೆ ಚೀನಾದ ಮಹಿಳೆಯರಿಗೆ ಒಂದೇ ಮಗು ಸಾಕಂತೆ

Pinterest LinkedIn Tumblr

china_baby_pic

ಬೀಜಿಂಗ್ ,ಮೇ.11 : ವಿಶ್ವದಲ್ಲೇ ಅತ್ಯಂತ ಹೆಚ್ಚಿನ ಜನಸಂಖ್ಯೆಯಿರುವ ಚೀನಾ ಇತ್ತೀಚಿಗಷ್ಟೇ ಮುವತ್ತು ವರ್ಷಗಳ ನಂತರ ಒಂದು ಕುಟುಂಬಕ್ಕೆ ಒಂದು ಮಗು ನೀತಿಯನ್ನು ಸಡಿಸಿಗೊಳಿಸಿ ಎರಡು ಮಕ್ಕಳು ಹೊಂದಲು ಅವಕಾಶ ನೀಡಿತ್ತು. ಆದರೆ ಅಲ್ಲಿನ ಶೇ.60 ರಷ್ಟು ಕೆಲಸ ಮಾಡುವ ಮಹಿಳೆಯರಿಗೆ ಒಂದೇ ಮಗು ಸಾಕಂತೆ ಎಂಬ ವಿಚಾರವನ್ನು ಅಧ್ಯಯನವೊಂದು ವರದಿ ಮಾಡಿದೆ.

ಝಯೋಪಿನ್ ಡಾಟ್.ಕಾಂ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಬಹಿರಂಗಗೊಂಡಿದ್ದು, ಐದನೇ ಒಂದು ಮಹಿಳೆಯರು ಎರಡನೇ ಮಗು ಹೊಂದಲು ನಿರಾಸಕ್ತಿವಹಿಸಿದ್ದಾರೆ. ಅಲ್ಲದೆ ಕೆಲಸ ಮಾಡುವ ವಿವಾಹಿತ ಶೇ.30 ರಷ್ಟು ಮಹಿಳೆಯರಿಗೆ ಮಕ್ಕಳೆ ಬೇಡವಂತೆ, ಅದರಲ್ಲೂ ಶೇ.20.5 ಮಹಿಳೆಯರಿಗೆ ಹೆಣ್ಣು ಮಗು ಬೇಕಿಲ್ವಂತೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಶೇ. 70 ರಷ್ಟು ಮಹಿಳೆಯರು ಉದ್ಯೋಗದ ಕಾರಣದಿಂದ ತಾಯಿಯಾಗಲು ಇಷ್ಟಪಡುತ್ತಿಲ್ಲ. ಶೇ.18 ರಷ್ಟು ಮಹಿಳೆಯರು ಮಾತ್ರ ಮಕ್ಕಳು ಹೊಂದಲು ಆಸಕ್ತಿ ಹೊಂದಿದ್ದಾರೆ. ಸಮೀಕ್ಷೆಯಲ್ಲಿ ದೇಶಾದ್ಯಂತ ಕೆಲಸ ಮಾಡುವ 14,290 ಮಹಿಳೆಯರನ್ನು ಒಳಪಡಿಸಿಕೊಳ್ಳಲಾಗಿತ್ತು.

ಒಂದು ಮಗು ನೀತಿಯಿಂದಾಗಿ ಚೀನಾ ಸರ್ಕಾರವು ಯುವಕರ ಸಂಖ್ಯೆ ಕ್ಷೀಣಿಸಿ ವೃದ್ದರ ಸಂಖ್ಯೆ ಹೆಚ್ಚಾಗುವಿಕೆ, ಕಾರ್ಮಿಕರ ಕೊರತೆ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಕಾರಣ ಒಂದು ವರ್ಷದ ಹಿಂದಷ್ಟೇ ಈ ನೀತಿ ಕೈಬಿಟ್ಟು ಎರಡು ಮಕ್ಕಳು ಹೊಂದುವುದಕ್ಕೆ ಕೆಲವು ನಿಯಮಗಳನ್ನು ಸಡಿಲಿಸಿತ್ತು.

Write A Comment