ಕನ್ನಡ ವಾರ್ತೆಗಳು

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಮೂಡಬಿದಿರೆ ಮಿಶಾಲ್ ಕ್ವೀನಿ ಡಿ’ಕೋಸ್ಟಗೆ 387ನೆ ರ್ಯಾಂಕ್

Pinterest LinkedIn Tumblr

Michelle-Queenie-D'-Costa

ಮೂಡಬಿದಿರೆ, ಮೇ 11: 2015 ಸಾಲಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿ ನಿಡ್ಡೋಡಿ ಗ್ರಾಮದ ನೀರುಡೆ ನಿವಾಸಿ ಮಿಶಾಲ್ ಕ್ವೀನಿ ಡಿ’ಕೋಸ್ಟ ಅವರು 387ನೆ ರ್ಯಾಂಕ್ ಪಡೆದಿದ್ದಾರೆ.

ಮಿಶಾಲ್ ಕ್ವೀನಿ ಡಿ’ಕೋಸ್ಟ ಅವರು ಲಾಜರಸ್ ಡಿ’ಕೋಸ್ಟ -ನ್ಯಾನ್ಸಿ ಡಿ’ಕೋಸ್ಟ ದಂಪತಿಗಳ ದ್ವಿತೀಯ ಪುತ್ರಿ.

ನೀರುಡೆಯ ಸೈಂಟ್ ಫ್ರಾನ್ಸಿಸ್ ಹಿ. ಪ್ರಾ. ಶಾಲೆ, ಕಿನ್ನಿಗೋಳಿಯ ಲಿಟ್ಲ್ ಫ್ಲವರ್ ಪ್ರೌಢಶಾಲೆಯಲ್ಲಿ ಕಲಿತ ಮಿಶಾಲ್ ಮೂಡುಬಿದಿರೆ ಆಳ್ವಾಸ್ ಪ.ಪೂ. ಕಾಲೇಜಿನಲ್ಲಿ 92.6 ಶೇ. ಅಂಕಗಳೊಂದಿಗೆ ಬೆಂಗಳೂರಿನ ಆರ್‌ವಿಸಿಇ ಕಾಲೇಜಿಗೆ ಸೇರಿ ಇನ್‌ಫೋರ್ಮೇಶನ್ ಆ್ಯಂಡ್ ಸೈನ್ಸ್‌ಎಂಜಿನಿಯರಿಂಗ್ ನಲ್ಲಿ 9.45 ಗ್ರೇಡ್‌ನೊಂದಿಗೆ ಎಂಜಿನಿಯರಿಂಗ್ ಪದವಿ ಗಳಿಸಿದ್ದರು.

ಹೊಸದಿಲ್ಲಿಯ ವಾಜಿರಾಂ ಆ್ಯಂಡ್ ರವಿ, ಅನರ್ಘ್ಯ ಐಎಎಸ್ ಅಕಾಡಮಿಯಲ್ಲಿ ಅವರು ತರಬೇತಿ ಪಡೆದಿದ್ದಾರೆ.

Write A Comment