ಕನ್ನಡ ವಾರ್ತೆಗಳು

ಪ್ಲೀಸ್ ನನ್ನ ನಂಬಿ, ಖಂಡಿತಾ ನಾನು ಮದುವೆಯಾಗಿಲ್ಲ

Pinterest LinkedIn Tumblr

malika_seravath_pic

ಬಾಲಿವುಡ್ ಹಾಟ್ ಹಾಟ್ ಬೆಡಗಿ ಮಲ್ಲಿಕಾ ಶೆರಾವತ್ ಮದುವೆ ಆಗಿಬಿಟ್ಟಳು… ಹೌದು ಅವಳ ಫ್ರಾನ್ಸ್ನ ಲವರ್ ಆಕ್ಸನ್ ಫ್ಯಾನ್ಸ್ ಜತೆ ಶೆರಾವತ್ ವಿವಾಹ ಬಂಧನಕ್ಕೆ ಒಳಗಾದಳು.. ಎಸ್… ಯಾರೂ ಅರಿಯದಂತೆ. ಮರ್ಡರ್ ಸಿನಿಮಾ ಖ್ಯಾತಿಯ ಸೆಕ್ಸಿ ಸುಂದರಿ ಅತ್ಯಂತ ರಹಸ್ಯವಾಗಿ ಪ್ಯಾರಿಸ್ನಲ್ಲಿ ಭಾರತೀಯ ಸಂಪ್ರದಾಯದಂತೆ ಮದುವೆ ಮಾಡಿಕೊಂಡಿದ್ದಾಳೆ.

ನಮಗೆ ಚೆನ್ನಾಗಿ ಗೊತ್ತು. ಮಲ್ಲಿಕಾ ಎಂಬ ಬೆಡಗಿ ಖಂಡಿತಾ ಮದುವೆ ಮಾಡಿಕೊಂಡಿದ್ದಾಳೆ. ಹೀಗೆ ಬಾಲಿವುಡ್ ಬೀದಿಗಳಲ್ಲಿ ಸ್ವತಃ ಕಣ್ಣಾರೆ ಕಂಡವರಂತೆ ಈ ಬೃಹಸ್ಪತಿಗಳೆಲ್ಲ ತಾವು ಹೇಳುತ್ತಿರೋದೇ ಸತ್ಯ ಎಂಬಂತೆ ಹೇಳುತ್ತಾ ಗುಲ್ಲೆಬ್ಬಿಸುತ್ತಿರುವಾಗಲೇ ಸ್ವತಃ ಖುದ್ದಾಗಿ ಅಯ್ಯಾ ಖಂಡಿತಾ ನಾನು ಮದುವೆಯಾಗಿಲ್ಲ.

ನಾನು ವಿವಾಹ ಮಾಡಿಕೊಂಡಿದ್ದೇನೆಂಬುದು ಅನ್ಯಥಾ ಸುಳ್ಳು ವಂದತಿ. ಅದನ್ನು ನಂಬಬೇಡಿ ಮತ್ತು ಅಂತ ವದಂತಿಗಳನ್ನು ಹಬ್ಬಿಸಬೇಡಿ… ನಾನೀಗ ನನ್ನ ಮುಂಬುರುವ ಸಿನಿಮಾ ಟೈಮ್ ರೈಡರ್ಸ್ೆ ಕೆಲಸದಲ್ಲಿ ನಿರತಳಾಗಿದ್ದೇನೆ ಎಂದು ಬಾಲಿವುಡ್ ಗಯ್ಯಾಳಿಗಳ ಬಾಯಿ ಮುಚ್ಚಿಸಿದ್ದಾಳಂತೆ. ಸದ್ಯ ಮಲ್ಲಿಕಾಳ ಮದುವೆ ಸುದ್ದಿ ಕೇಳಿ ಆಘಾತಕ್ಕೊಳಗಾಗಿದ್ದ ಅವಳ ಅಭಿಮಾನಿಗಳು, ಅವಳ ಈ ಟ್ವೀಟ್ನಿಂದಾಗಿ ಮೆಲ್ಲಗೆ ಚೇತರಿಸಿಕೊಳ್ಳುತ್ತಿದ್ದಾರಂತೆ.

Write A Comment