ಕನ್ನಡ ವಾರ್ತೆಗಳು

ತಣ್ಣಿರಿಗಾಗಿ ಬಿಸಿಯಾದ ಸ್ಥಳೀಯರು : ಮನಪಾ ಸದಸ್ಯೆ ಮೇಲೆ ಹಲ್ಲೆ.

Pinterest LinkedIn Tumblr

Prathibha_Kulai_corpo

ಮಂಗಳೂರು, ಮೇ 10: ಮನಪಾ ಸದಸ್ಯೆ ಪ್ರತಿಭಾ ಕುಳಾಯಿಯವರ ಮೇಲೆ ಹಲ್ಲೆ ನಡೆದಿರುವ ಬಗ್ಗೆ ಮಾಹಿತಿ ಲಭಿಸಿದ್ದು, ಈ ಮೂಲಕ ಕುಳಾಯಿ ವಾರ್ಡಿನ ಮನಪಾ ಸದಸ್ಯೆ ಪ್ರತಿಭಾ ಕುಳಾಯಿ (ಕಾಂಗ್ರೆಸ್ ಪ್ರತಿನಿಧಿ) ಅವರು ಮತ್ತೊಮ್ಮೆ ಸುದ್ಧಿಯಾಗಿದ್ದಾರೆ.

ನೀರಿನ ವಿಚಾರಕ್ಕೆ ಸಂಬಂಧಪಟ್ಟಂತೆ ಸ್ಥಳಿಯರು ವಾಗ್ವಾದ ನಡೆಸುತ್ತಿದ್ದ ಸಂದರ್ಭ ಸ್ಥಳದಲ್ಲಿದ್ದ ಸುನಂದ ಎಂಬ ಮಹಿಳೆಯೊಬ್ಬರು ಪ್ರತಿಭಾ ಕುಳಾಯಿಯವರ ಮೇಲೆ ನಡೆಸಿದ್ದಾರೆ ಎನ್ನಲಾಗಿದೆ. ಇದರಿಂದ ಗಾಯಗೊಂಡ ಪ್ರತಿಭಾ ಕುಳಾಯಿಯವರನ್ನು ಖಾಸಗಿ ಆಸ್ಪತ್ರೆಗೆ ದಾಖಲಾಗಿಸಲಾಗಿದೆ ಎಂದು ತಿಳಿದು ಬಂದಿದೆ.

ಇಂದು ಬೆಳಿಗ್ಗೆ ಕೋಡಿಕೆರೆ ಭಾಗದ ಜನರು ನೀರಿಗಾಗಿ ಪ್ರತಿಭಟನೆ ನಡೆಸಿದ್ದು, ಈ ಸಂದರ್ಭ ಬೇರೆಡೆ ಸಾಗುತ್ತಿದ್ದ ನೀರಿನ ಟ್ಯಾಂಕರನ್ನು ಕುಳಾಯಿ ಪಂಪ್ ಹೌಸ್ ಬಳಿ ತಡೆದು ನಿಲ್ಲಿಸಿದ್ದರು. ನೀರಿನ ಟ್ಯಾಂಕರ್ ಅನ್ನು ಕೆಲವರು ತಡೆದು ನಿಲ್ಲಿಸಿರುವ ಬಗ್ಗೆ ಮಾಹಿತಿ ಪಡೆದ ಪ್ರತಿಭಾ ಕುಳಾಯಿ ಅವರು ಅಲ್ಲಿಗೆ ತೆರಳಿದ್ದರು. ಸಂದರ್ಭ ಸ್ಥಳಕ್ಕೆ ಬಂದ ಪ್ರತಿಭಾ ಕುಳಾಯಿ ಅವರು ಕೋಡಿಕೆರೆ ಭಾಗದ ಎಲ್ಲಾ ಪ್ರದೇಶಗಳಿಗೆ ಹೋಗುವಂತೆ ನೀರಿನ ಟ್ಯಾಂಕರ್ ಅನ್ನು ಕಳುಹಿಸಲಾಗುತ್ತಿದ್ದು, ತಡೆದು ನಿಲ್ಲಿಸಿರುವ ಟ್ಯಾಂಕರ್ ಅನ್ನು ಕೋಡಿಕೆರೆಗೆ ಕೊಂಡು ಹೋಗುವಂತೆ ಸೂಚಿಸಿದರು.

ಆದರೆ ಈ ಸಂದರ್ಭದಲ್ಲಿ ಸಾರ್ವಜನಿಕರಲ್ಲಿ ಕೆಲವರು ಮತ್ತು ಸುನಂದ ಎಂಬ ಮಹಿಳೆಯೊಬ್ಬರು ಅವಾಚ್ಯ ಪದಗಳಿಂದ ನಿಂದಿಸಿ, ಪ್ರತಿಭಾ ಕುಳಾಯಿ ಅವರ ತಲೆಗೆ ತಮ್ಮ ಕೈಯಿಂದ ಹೊಡೆದಿದ್ದಾರೆ. ಈ ಸಂದರ್ಭ ಪ್ರತಿಭಾ ಅವರ ಸಹಾಯಕ್ಕೆ ಬಂದ ಕೆಲವರನ್ನು ವಸಂತ ಸುರತ್ಕಲ್ ಎಂಬಾತ ಅಲ್ಲಿಂದ ಓಡಿಸಿದ್ದಾನೆ ಎನ್ನಲಾಗಿದೆ. ಮಾತ್ರವಲ್ಲದೇ ಅಲ್ಲಿ ನಡೆಯುತ್ತಿದ್ದ ಎಲ್ಲಾ ಘಟನೆಯನ್ನು ಆತ ಚಿತ್ರೀಕರಣ ಮಾಡುತ್ತಿದ್ದ ಎಂದು ಪ್ರತಿಭಾ ಕುಳಾಯಿ ದೂರಿದ್ದಾರೆ. ಹಲ್ಲೆಗೊಳಗಾದ ಪ್ರತಿಭಾ ಕುಳಾಯಿ ಅವರು ಮುಕ್ಕದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮರುಕಳಿಸಿದ ಘಟನೆ:

ಈ ಹಿಂದೆ ಕೂಡ ಪ್ರತಿಭಾ ಕುಳಾಯಿ ಅವರ ಮೇಲೆ ಕೋಡಿಕೆರೆಯಲ್ಲಿ ಕೆಲವರು ಹಲ್ಲೆಗೆ ಯತ್ನಿಸಿದ್ದರು. ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರಕ್ಕೆ ತೆರಳಿದ ಪ್ರತಿಭಾ ಕುಳಾಯಿಯನ್ನು ತಡೆದು ಅವರು ಪ್ರಚಾರ ಮಾಡದಂತೆ ತಡೆಯೊಡ್ಡಿದ್ದರು. ಇದೀಗ ಅದೇ ಪ್ರದೇಶದ ಕೆಲವರು ಪ್ರತಿಭಟನೆ ನಡೆಸಿ ಪ್ರತಿಭಾ ಕುಳಾಯಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

Write A Comment