ಕನ್ನಡ ವಾರ್ತೆಗಳು

ಉಳ್ಳಾಲ ಸಯ್ಯದ್ ಮದನಿ ಸುನ್ನಿ ಸೆಂಟ್ರಲ್ ಕಮಿಟಿ ವತಿಯಿಂದ ಉಚಿತ ಸಾಮೂಹಿಕ ವಿವಾಹ

Pinterest LinkedIn Tumblr

Ullal_Central_Vivaha_1

ಉಳ್ಳಾಲ. ಎ, 04: ಯುವ ಸಮೂಹ ಇಂತಹ ಉಚಿತ ಸಮೂಹಿಕ ವಿವಾಹಕ್ಕೆ ಮುಂದಾದರೆ ವರದಕ್ಷಿಣೆ ತಡೆಯಲು ಸಾಧ್ಯ ಎಂದು ರಾಜ್ಯ ಅರೋಗ್ಯ ಸಚಿವ ಯು.ಟಿ ಖಾದರ್ ಅಭಿಪ್ರಾಯಪಟ್ಟರು.ಅವರು ಉಳ್ಳಾಲ ಸಯ್ಯದ್ ಮದನಿ ಸುನ್ನಿ ಸೆಂಟ್ರಲ್ ಕಮಿಟಿ ವತಿಯಿಂದ ಉಳ್ಳಾಲದ ಖಾಸಗಿ ಹಾಲ್‌ನಲ್ಲಿ ನಡೆದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಹೆಚ್ಚಿನ ಕುಟುಂಬದ ಸಂಬಂಧಗಳು ದೂರವಾಗಳು ವರದಕ್ಷಿಣೆ ಒಂದು ಕಾರಣವಾಗಿರುವ ಉದಾರಣೆಗಳು ನಮ್ಮ ಪರಿಸರದಲ್ಲಿ ಕಾಣಬಹುದು. ಅದರೆ ಪರಸ್ಪರ ಪ್ರೀತಿ ವಿಶ್ವಾಸದಿಂದ ಬದುಕಿದರೆ ವರದಕ್ಷಿಣೆಗಿಂತಾ ಶೇಷ್ಟವಾದ ಜೀವನ ನಮ್ಮದಾಗುವುದು ಎಂದರು.

Ullal_Central_Vivaha_2

ಉದ್ಯಮಿ ಎಚ್.ಎಚ್ ಉಂಞ ಹಾಜಿ, ಹೈದರ್ ಪರ್ತಿಪ್ಪಾಡಿ, ಮಂಗಳೂರು ಅಝಾದ್ ಹಾರ್ಡ್‌ವೇರ್‌ನ ಮಾಲಕ ಹಾಜಿ ಮನ್ಸೂರು, ಹೈಸಂ ಸ್ಟೀಲ್‌ನ ಶಾಕೀರ್ ಹಾಜಿ, ಇಸ್ಲಾಮಿಕ್ ಕಲ್ಚರಲ್ ಸೆಂಟರ್‌ನ ಹಾಜಿ ಮಮ್ತಾಝ್ ಅಲಿ, ದಾರುಲ್ ಮುಸ್ತಾಫ ಅಕಾಡೆಮಿಯ ಅಧ್ಯಕ್ಷ ಮುಹೀಯುದ್ದೀನ್ ಕಾಮಿಲ್ ಸಖಾಫಿ ತೋಕೆ, ಬಿ.ಜೆ ಹನೀಫ್ ಹಾಜಿ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್ ಉಳ್ಳಾಲ್, ಉಳ್ಳಾಲ ಸೆಯ್ಯದ್ ಮದನಿ ದರ್ಗಾ ಸಮಿತಿಯ ಅಂಗಾಮಿ ಅಧ್ಯಕ್ಷ ಅಬ್ದುಲ್ ಬುಖಾರಿ ಕಲ್ಲಾಪು, ತ್ವಾಹೀರ್ ಹಾಜಿ ಮುಕ್ಕಚೇರಿ, ಉಳ್ಳಾಲ ನಗರ ಸಭೆ ಅಧ್ಯಕ್ಷ ಹುಸೈನ್ ಕುಂಞಮೋನು, ಸದಸ್ಯ ಶೌಕತ್ ಅಲಿ, ತೊಕ್ಕೊಟ್ಟು ರೀಲಿಸ್ ಸವಿರ್ಸ್ ಚ್ಯೇಯರ್‌ಮ್ಯಾನ್ ಅಲ್ತಾಫ್ ಕುಂಪಲ, ಉಳ್ಳಾಲ ಸಯ್ಯದ್ ಮದನಿ ಸೆಂಟ್ರಲ್ ಕಮಿಟಿ ಮಾಜಿ ಅಧ್ಯಕ್ಷ ಕರೀಂ ಹಾಜಿ ಮುಂತಾದವರು ಈ ಸಂದರ್ಭ ಉಪಸ್ಥಿತರಿದರು.

ಮಂಜನಾಡಿ ಅಲ್-ಮದೀನಾ ಸಂಸ್ಥೆಯ ಮುನೀರ್ ಅಹ್ಮದ್ ಸಖಾಫಿ ಉಳ್ಳಾಲ ಕಾರ್ಯಕ್ರಮ ನಿರೂಪಿಸಿದರು. ಇಬ್ರಾಹೀಂ ಅಹ್ಸನಿ ಸ್ವಾಗತಿಸಿದರು. ಪ್ರ.ಕಾರ್ಯದರ್ಶಿ ಅಬ್ದುಲ್ ಸತ್ತಾರ್ ವಂದಿಸಿದರು.

Write A Comment