ಕನ್ನಡ ವಾರ್ತೆಗಳು

ಮೇ.22 : ಯಕ್ಷಧ್ರುವ ಪಟ್ಲ ಸಂಭ್ರಮ -2016 – ಆಹ್ವಾನ ಪತ್ರಿಕೆ ಬಿಡುಗಡೆ

Pinterest LinkedIn Tumblr

yaksh_druva_sanga_1

ಮಂಗಳೂರು, ಮೇ 4: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ ಮೇ.22 ರಂದು ನಡೆಯಲಿರುವ ಯಕ್ಷಧ್ರುವ ಪಟ್ಲ ಸಂಭ್ರಮ -2016 ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಮಂಗಳವಾರ ನಗರದ ಪತ್ತುಮುಡಿ ಜನತಾ ಡಿಲಕ್ಸ್ ಹೋಟೆಲ್‌ನಲ್ಲಿಂದು ನಡೆಯಿತು.

ಶಾರದಾ ವಿದ್ಯಾಲಯದ ಸಂಚಾಲಕ ಎಂ.ಬಿ.ಪುರಾಣಿಕ್ ಅವರು, ಆಹ್ವಾನ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು,ಯಕ್ಷರಂಗದಲ್ಲಿ ಪಟ್ಲ ಸತೀಶ್ ಶೆಟ್ಟಿ, ಕಡಿಮೆ ಅವಧಿಯಲ್ಲಿ ದೊಡ್ಡ ಸಾಧನೆ ಮಾಡಿ ಜನಸಾಮಾನ್ಯರ ಮನಸ್ಸನ್ನು ಗೆದ್ದ ವ್ಯಕ್ತಿ. ಪಟ್ಲ ಫೌಂಡೇಶನ್ ಮೂಲಕ ಸಮಾಜ ಸೇವೆಗೈಯುವ ಅವರ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

yaksh_druva_sanga_2 yaksh_druva_sanga_3 yaksh_druva_sanga_4

ಪಟ್ಲ ಸತೀಶ್ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ, ಸಿಎ ಸುದೇಶ್ ರೈ, ಬಲಿಪ ನಾರಯಣ ಭಾಗವತ, ಲಕ್ಷ್ಮೀ ಮಚ್ಚಿನ , ಸವಣೂರು ಸೀತಾರಾಮ ರೈ, ಡಾ.ಪದ್ಮನಾಭ ಕಾಮತ್, ಲಕ್ಷ್ಮೀಶ್ ಭಂಡಾರಿ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Write A Comment