ಮಂಗಳೂರು,ಎ.28: ಗಾಂಜಾ ಮಾರಾಟ ಮಾಡಲೆತ್ನಿಸಿದ ಇಬ್ಬರು ಆರೋಪಿಗಳನ್ನು ಬಂದರು ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಬಂದರಿನ ಅನ್ಸಾರಿ ರಸ್ತೆಯ ನಿವಾಸಿಗಳಾದ ರವೂಫ್ (36) ಹಾಗೂ ಫಾರೂಕ್ (47) ಎಂದು ಗುರುತಿಸಲಾಗಿದೆ.
ಬಂದರಿನ ಅನ್ಸಾರಿ ಕ್ರಾಸ್ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡಿತ್ತಿದ ಬಗ್ಗೆ ಮಾಹಿತಿ ಪಡೆದ ಬಂದರು ಠಾಣಾ ಇನ್ಸ್ಪೆಕ್ಟರ್ ಶಾಂತರಾಮ್ ಅವರು ಸಿಬ್ಬಂದಿಯೊಂದಿಗೆ ದಾಳಿ ನಡೆಸಿದ್ದು, ಈ ಸಂಧರ್ಭದಲ್ಲಿ ಸ್ಥಳದಲ್ಲಿ ಇಬ್ಬರನ್ನು ಬಂಧಿಸಿದ್ದಾರೆ. ಮತ್ತಿತ್ತಬರು ಆರೋಪಿಗಳಾದ ರಹೀಂ ಮತ್ತು ಮುನೀರ್ ಎಂಬವರು ಸ್ಥಳದಿಂದ ಪರಾರಿಯಾಗಿದ್ದಾರೆ.
ಬಂಧಿತರಿಂದ ನಾಲ್ಕು ಸಾವಿರ ರೂ. ಮೌಲ್ಯದ 300 ಗ್ರಾಂ ಗಾಂಜಾ, ಸ್ವಿಫ್ಟ್ ಕಾರು, ಮೊಬೈಲ್ನ್ನು ವಶಪಡಿಸಿಕೊಳ್ಳಲಾಗಿದೆ