ಕನ್ನಡ ವಾರ್ತೆಗಳು

ಗ್ಯಾಸ್ ಸಿಲಿಂಡರ್ ಸ್ಫೋಟ – ಮನೆ ಸಂಪೂರ್ಣ ಭಸ್ಮ : ರೂ.20ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತು ನಾಶ

Pinterest LinkedIn Tumblr

gasblast_husburn_1

ಮಂಗಳೂರು / ಉಳ್ಳಾಲ,ಎ.26 : ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮನೆ ಸಂಪೂರ್ಣ ಭಸ್ಮಗೊಂಡ ಘಟನೆ ನಿನ್ನೆ ರಾತ್ರಿ ಮಂಗಳೂರು ಹೊರವಲಯದ ತಲಪಾಡಿ ಸಮೀಪದ ಕಿನ್ಯ ಸಾಂತ್ಯಗುತ್ತಿನಲ್ಲಿ ನಡೆದಿದೆ.

ಈ ಮನೆ ಕೃಷಿಕ ಗಣೇಶ್ ಶೆಟ್ಟಿ ಎಂಬವರಿಗೆ ಸೇರಿದೆ ಎಂದು ಹೇಳಲಾಗಿದ್ದು, ಈ ಅವಘಡದಿಂದ ರೂ. 20 ಲಕ್ಷಕ್ಕೂ ಅಧಿಕ ಮೌಲ್ಯದ ಸೋತ್ತುಗಳು ನಾಶವಾಗಿದೆ ಎನ್ನಲಾಗಿದೆ.

gasblast_husburn_2 gasblast_husburn_3 gasblast_husburn_4 gasblast_husburn_5

ಗಣೇಶ್ ಶೆಟ್ಟಿಯವರು ನಿನ್ನೆ ರಾತ್ರಿ ಮನೆಮಂದಿಯೊಂದಿಗೆ ಊರ ಜಾತ್ರೆಗೆ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಚಿನ್ನಾಭರಣ, ಅಡಿಕೆ,ತೆಂಗು, ಮನೆ ದಾಖಲೆ ಪತ್ರಗಳು, ವಸ್ತ್ರಗಳೆಲ್ಲವು ಬೆಂಕಿಗಾಹುತಿಯಾಗಿವೆ. ಕಿನ್ಯಾ ಪಂಚಾಯತ್ ಗ್ರಾಮಕರಣಿಕರು ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Write A Comment