ಕನ್ನಡ ವಾರ್ತೆಗಳು

ಕೊನೆಗೂ ಜನರ ಸಮಸ್ಯೆಗೆ ಸ್ಪಂದಿಸಿದ ಚತುಷ್ಪತ ಗುತ್ತಿಗೆ ಕಂಪೆನಿ: ಬಸ್ರೂರು ಮೂರುಕೈ ಪ್ರದೇಶದಲ್ಲಿ ತಾತ್ಕಾಲಿಕ ರಸ್ತೆ

Pinterest LinkedIn Tumblr

ಕುಂದಾಪುರ: ಮೂರ್ನಾಲ್ಕು ದಿನಗಳ ಹಿಂದೆ ನಿರಂತರ ಎರಡು ದಿನಗಳ ಕಾಲ ಟ್ರಾಫಿಕ್ ಜಾಮ್ ಸಮಸ್ಯೆ ಉಂತಾಗಿದ್ದ ಕುಂದಾಪುರದ ಬಸ್ರೂರು ಮೂರುಕೈ ಪ್ರದೇಶದಲಿ ತಾತ್ಕಾಲಿಕ ರಸ್ತೆಯೊಂದನ್ನು ನಿರ್ಮಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

Kundapura_Road_Traffic (2) Kundapura_Road_Traffic (3) Kundapura_Road_Traffic (1)

ಬಸ್ರೂರು ಮೂರುಕೈ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅರೆಬರೆಯಾಗಿ ನಡೆಸಿ ರಸ್ತೆಯನು ಕಿರಿದುಗೊಳಿಸಲಾಗಿತ್ತು. ಈ ಪ್ರದೇಶವು ರಾಜ್ಯ ಹೆದ್ದಾರಿ ಮತ್ತು ರಾಷ್ಟ್ರೀಯ ಹೆದ್ದಾರಿ ಕೂಡುವ ಜಂಕ್ಷನ್ ಆದ ಕಾರಣ ವಾಹನ ದಟ್ಟಣೆ ಅಧಿಕವಿರುವ ಹಿನ್ನೆಲೆ ವಾಹನ ಸವಾರರು ಟ್ರಾಫಿಕ್ ಸಮಸ್ಯೆ ಅನುಭವಿಸುತ್ತಿದ್ದರು. ಕಳೆದ ಬುಧವಾರದಂದು ಶುಭ ಸಮಾರಂಭಗಳು ಅಧಿಕವಿದ್ದು ವಾಹನಗಳ ದಟ್ಟಣೆ ಜಾಸ್ಥಿಯಿದ್ದ ಕಾರಣ ಈ ಭಾಗದಲ್ಲಿ ಉಂಟಾದ ಸಂಚಾರ ಅವ್ಯವಸ್ಥೆ ಕಿಲೋಮೀಟರುಗಟ್ಟಲೇ ವ್ಯಾಪಿಸಿ ನಾಲ್ಕು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಗುರುವಾರವೂ ಕೊಂಚ ಟ್ರಾಫಿಕ್ ಕಿರಿಕಿರಿಯಿದ್ದು ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ ಮತ್ತು ವ್ರತ್ತನಿರೀಕ್ಷಕ ದಿವಾಕರ್ ಖುದ್ದು ಸ್ಥಳದಲ್ಲಿ ಮೂರ್ನಾಲ್ಕು ಗಂಟೆಗಳ ಕಾಲ ಮೊಕ್ಕಾಂ ಹೂಡಿದ್ದಲದೇ ಸಂಚಾರಕ್ಕೆ ಪರ್‍ಯಾಯ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದರು. ಅಲ್ಲದೇ ಈ ಭಾಗದಲ್ಲಿ ಶೀಘ್ರ ರಸ್ತೆಯ ಕಾಮಗಾರಿ ಚುರುಕುಗೊಳಿಸಿ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಡುವ ಬಗ್ಗೆ ಚತುಷ್ಪತ ಕಾಮಗಾರಿ ನಡೆಸುತ್ತಿರುವ ಗುತ್ತಿಗೆ ಕಂಪೆನಿಗೆ ಸಂಬಂದಪಟ್ಟವರಿಗೆ ಸೂಚನೆಯನ್ನು ನೀಡಿದ್ದರು.

ಅಂತೆಯೇ ಗುತ್ತಿಗೆ ಕಂಪೆನಿ ರಾತ್ರಿ ಹಗಲು ಕೆಲಸ ಮಾಡುವ ಮೂಲಕ ಈ ಭಾಗದಲ್ಲಿ ತಾತ್ಕಾಲಿಕ ರಸ್ತೆಯನ್ನು ನಿರ್ಮಿಸಿದೆ. ಅಲ್ಲದೇ ರಸ್ತೆಯನ್ನು ಅಗಲಗೊಳಿಸುವ ಕಾರ್ಯವನ್ನು ಮಾಡಿದೆ.

ಇದನ್ನೂ ಓದಿರಿ:

ಕುಂದಾಪುರದಲ್ಲಿ ಮೂರ್ನಾಲ್ಕು ಗಂಟೆ ಸಂಪೂರ್ಣ ಟ್ರಾಫಿಕ್ ಜಾಮ್: ವಾಹನ ಸವಾರರಿಗೆ ಫುಲ್ ಫ್ರಾಬ್ಲಂ

ಕುಂದಾಪುರದಲ್ಲಿ ಹೆಚ್ಚುತ್ತಿರುವ ಸಂಚಾರಿ ಸಮಸ್ಯೆ: ಪರಿಹಾರಕ್ಕೆ ಪೊಲೀಸರ ಹೊಸಮಾರ್ಗ

Write A Comment