ಕನ್ನಡ ವಾರ್ತೆಗಳು

ಏ.24 :ರಾಮಕೃಷ್ಣ ಮಿಷನ್ ಪ್ರೇರಿತ ಸ್ವಚ್ಚ ಮಂಗಳೂರು ಅಭಿಯಾನ ಉದ್ಘಾಟನೆ.

Pinterest LinkedIn Tumblr

swch_bartha_abhiyan

ಮಂಗಳೂರು,ಎ.23 : ಮಂಗಳೂರಿನ ಜೆಪ್ಪುವಿನಲ್ಲಿರುವ ಅಂಬಾ ಮಹೇಶ್ವರಿ ಭಜನಾ ಮಂಡಳಿ ಯ ಸದಸ್ಯರು ರಾಮಕೃಷ್ಣ ಮಿಷನ್ ಪ್ರೇರಿತ ಸ್ವಚ್ಚ ಮಂಗಳೂರು ಅಭಿಯಾನವನ್ನು ತಮ್ಮ ಸುತ್ತಲಿನ ಪರಿಸರದಲ್ಲಿ ಪ್ರತಿ ತಿಂಗಳ ಕಡೆಯ ಆದಿತ್ಯವಾರದಂದು ನಡೆಸಲಿದ್ದಾರೆ. ಇದರ ಉದ್ಘಾಟನೆಯನ್ನು ಏಪ್ರಿಲ್ .24 ಆದಿತ್ಯವಾರ ಬೆಳಿಗ್ಗೆ 7.30 ಕ್ಕೆ ಜೆಪ್ಪುವಿನಲ್ಲಿರುವ ಅಂಬಾ ಮಹೇಶ್ವರಿ ಭಜನಾ ಮಂಡಳಿಯ ಬಳಿ ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿಯವರ ಸಾನಿಧ್ಯದಲ್ಲಿ ಸ್ಥಳೀಯ ಮನಪಾ ಸದಸ್ಯರಾದ ಶ್ರೀಮತಿ ರತಿಕಲಾ ಹಾಗೂ ಶ್ರೀಮತಿ ಕವಿತಾ ವಾಸು ಅವರು ನೆರವೇರಿಸಲಿದ್ದಾರೆ.

ಆಸಕ್ತರು ಹಾಗೂ ಸ್ಥಳೀಯರು ಈ ಅಭಿಯಾನದಲ್ಲಿ ಕೈಜೋಡಿಸಿ ಅಭಿಯಾನ ಯಶಸ್ವಿಯಾಗುವಂತೆ ಹಾಗೂ ಮಂಗಳೂರನ್ನು ಸ್ವಚ್ಚವಾಗಿಡುವಲ್ಲಿ ತಮ್ಮ ಸಹಕಾರವನ್ನು ನೀಡಬೇಕೆಂದು ಕೋರುತ್ತೇವೆ.

ಕಾರ್ಯಕ್ರಮದ ಆಹ್ವಾನಪತ್ರಿಕೆಯ ಪ್ರತಿಯನ್ನು ಲಗತ್ತಿಸಲಾಗಿದೆ.

Write A Comment