ಕನ್ನಡ ವಾರ್ತೆಗಳು

ಮಂಗಳೂರಿನಲ್ಲಿ ದ.ಕ.ಜಿಲ್ಲೆಯ ವಿವಿಧ ಪ್ರದೇಶಗಳ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಚಾಲನೆ

Pinterest LinkedIn Tumblr

CM_Townhall_Pro_1

ಮಂಗಳೂರು, ಎಪ್ರಿಲ್.21 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ದ.ಕ. ಜಿಲ್ಲೆಗೆ ಭೇಟಿ ನೀಡಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು.ಬಜ್ಪೆ ವಿಮಾನ ನಿಲ್ದಾಣದ ಬಳಿ ಸುಮಾರು 11 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ “ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಗಮನ ರಸ್ತೆ ಕಾಮಗಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು. ಬಳಿಕ ಮಂಗಳೂರು ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಪ್ರದೇಶಗಳ 41 ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಸಾಂಕೇತಿಕವಾಗಿ ಅವರು ಚಾಲನೆ ನೀಡಿದರು.

ಇಂದು ಸಂಜೆ ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೂ. 41 ಕೋಟಿ ವೆಚ್ಚದ ಜಿಲ್ಲಾ ಆಡಳಿತ ಭವನ ಸಂಕೀರ್ಣ ಕಟ್ಟಡಕ್ಕೆ ಶಿಲಾನ್ಯಾಸ, ಜಿಲ್ಲಾ ವೆನ್ಲಾಕ್ ಹೊಸ ಬ್ಲಾಕ್ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ, ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ ನಿರ್ಮಾಣಕ್ಕೆ ಶಿಲಾನ್ಯಾಸ ಹಾಗೂ ಪೊಲೀಸ್ ವಸತಿಗೃಹ ಸಂಕೀರ್ಣಗಳ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದರು.

CM_Townhall_Pro_2 CM_Townhall_Pro_3 CM_Townhall_Pro_4 CM_Townhall_Pro_5 CM_Townhall_Pro_6 CM_Townhall_Pro_7 CM_Townhall_Pro_8 CM_Townhall_Pro_9 CM_Townhall_Pro_10 CM_Townhall_Pro_11 CM_Townhall_Pro_12 CM_Townhall_Pro_13 CM_Townhall_Pro_14 CM_Townhall_Pro_15 CM_Townhall_Pro_16 CM_Townhall_Pro_17 CM_Townhall_Pro_18 CM_Townhall_Pro_19 CM_Townhall_Pro_20 CM_Townhall_Pro_21 CM_Townhall_Pro_22 CM_Townhall_Pro_23

ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಆರೋಗ್ಯ ಸಚಿವ ಯು.ಟಿ.ಖಾದರ್, ಮೀನುಗಾರಿಕಾ ಸಚಿವ ಕೆ.ಅಭಯಚಂದ್ರ ಜೈನ್, ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ, ಶಾಸಕರಾದ ಬಿ.ಎ.ಮೊಯ್ದಿನ್ ಬಾವ, ಜೆ.ಆರ್.ಲೋಬೊ, ಪ್ರಮೋದ್ ಮಧ್ವರಾಜ್, ಐವನ್ ಡಿಸೋಜ, ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಪಶ್ಚಿಮ ವಲಯ ಐಜಿಪಿ ಅಮೃತ್ ಪಾಲ್, ಮಂಗಳೂರು ನಗರ ಪೊಲೀಸ್ ಕಮಿಷನರ್ ಎಂ.ಚಂದ್ರಶೇಖರ್, ದ.ಕ. ಜಿಲ್ಲಾ ಎಸ್ಪಿ ಡಾ.ಶರಣಪ್ಪ ಎಸ್.ಡಿ. ಮೊದಲಾದವರು ಉಪಸ್ಥಿತರಿದ್ದರು.

Updated News:

ನಗರದಲ್ಲಿ ಸರಕಾರಿ ವೈದ್ಯ ಕೀಯ ಕಾಲೇಜು ಆರಂಭಿಸುವ ಕುರಿತು ಮುಂದಿನ ಬಜೆಟ್‌ನಲ್ಲಿ ಪರಿಗಣಿಸಲಾಗುವುದು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ನಗರದ ಪುರಭವನದಲ್ಲಿ ಇಂದು ನಡೆದ ಕಾರ್ಯ ಕ್ರಮದಲ್ಲಿ ಪಡೀಲ್‌ನಲ್ಲಿ ನಿರ್ಮಿಸಲು ಉದ್ದೇಶಿ ಸಿರುವ 41 ಕೋಟಿ ರೂ.ಗಳ ನೂತನ ಜಿಲ್ಲಾ ಕಚೇರಿ ಗಳ ಸಂಕೀರ್ಣಕ್ಕೆ ಶಿಲಾನ್ಯಾಸ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿ ಸಲ್ಲಿಸಿದ ಬೇಡಿಕೆಗೆ ಸ್ಪಂದಿಸಿದ ಮುಖ್ಯಮಂತ್ರಿ, ಇಲ್ಲಿಯ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಚೆಕ್ ಡ್ಯಾಮ್‌ಗಳನ್ನು ನಿರ್ಮಿಸುವ ಪಶ್ಚಿಮ ವಾಹಿನಿ ಯೋಜನೆ ಕುರಿತು ಸಮೀಕ್ಷೆಗೆ ಸೂಚನೆ ನೀಡಲಾಗು ವುದು ಎಂದರು.

9/11 ಬಗ್ಗೆ ಖುದ್ದು ಸಭೆ ನಡೆಸಿ ಪರಿಹಾರ

9/11 ಸಮಸ್ಯೆ ಪರಿಹಾರಕ್ಕಾಗಿ ಈಗಾಗಲೇ ಸಭೆ ನಡೆಸಿ, ಗ್ರಾಮೀಣಾಭಿವೃದ್ಧಿ ಸಚಿವರಿಗೆ ಅಧಿ ಕಾರ ನೀಡಿದ್ದೆ. ಇನ್ನೂ ಸಮಸ್ಯೆ ಪರಿಹಾರ ಆಗಿಲ್ಲ ಎಂದಾದರೆ, ನಾನೇ ಖುದ್ದು ಸಭೆ ನಡೆಸಿ ಪರಿಹರಿಸು ತ್ತೇನೆ. ಈ ವಿಷಯದಲ್ಲಿ ಆತಂಕ ಬೇಡ. ಏಕ ನಿವೇಶನ ಸಮಸ್ಯೆ, ನೀರಿನ ಕೊಳವೆ ಜಿಪಂಗೆ ಹಸ್ತಾಂತರ ಮಾಡ ಲಾಗುವುದು ಎಂದು ಸಿದ್ದರಾಮಯ್ಯ ನುಡಿದರು.

ಸರಕಾರ ಕೇವಲ ಅಹಿಂದ ಪರವಾಗಿದೆ ಎಂಬ ಆರೋಪ ಸುಳ್ಳು. ಹಾಲಿಗೆ ನೀಡುವ ಬೆಂಬಲ, ಉಚಿತ ಅಕ್ಕಿ, ಸಾಲಮನ್ನಾ ಎಲ್ಲ ಜಾತಿಯವರಿಗೂ ಅನ್ವಯ ವಾಗುತ್ತದೆ. ಮೀಸಲಾತಿ ವಿರೋಧಿಗಳು ಮತ್ತು ಸಾಮಾಜಿಕ ಸಮಾನತೆಯ ವಿರೋಧಿಗಳು ಮಾಡುವ ಅಪಪ್ರಚಾರದಿಂದ ಜನರು ಮೋಸ ಹೋಗಬಾರದು ಎಂದು ಅವರು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಎತ್ತಿನಹೊಳೆ ಯೋಜನೆ ಕುರಿತು ಜನರ ತಪ್ಪು ಕಲ್ಪನೆ ನಿವಾರಿಸಬೇಕು. ಜಿಲ್ಲೆಯ ನೀರಿನ ಸಮಸ್ಯೆ ಪರಿಹಾರಕ್ಕೆ ಪಶ್ಚಿಮ ವಾಹಿನಿ ಯೋಜನೆ ಜಾರಿಗೆ ತರಬೇಕು. ರಬ್ಬರ್ ಬೆಳೆಗಾರರಿಗೆ ಕೇರಳ ಮಾದರಿ ಯಲ್ಲಿ ಬೆಂಬಲ ಬೆಲೆ ಘೋಷಿಸಬೇಕು ಎಂದು ಆಗ್ರಹಿ ಸಿದರು.

ಆರೋಗ್ಯ ಸಚಿವ ಯು.ಟಿ.ಖಾದರ್ ಮಾತನಾಡಿ, ಜಿಲ್ಲೆಯಲ್ಲಿ ಸಾಕಷ್ಟು ಖಾಸಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿವೆ. ಇದೇ ಮಾದರಿಯಲ್ಲಿ ಬಡವರ ಅನು ಕೂಲಕ್ಕಾಗಿ ಸರಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಆಗಬೇಕಿದೆ. ಸ್ಮಾರ್ಟ್ ಸಿಟಿ ಜತೆಗೆ ಸ್ೇ ಸಿಟಿಯನ್ನಾಗಿಸಲು ಪೊಲೀಸ್ ಇಲಾಖೆಗೆ ಸಿಬ್ಬಂದಿ, ಅತ್ಯಾಧುನಿಕ ಶಸಾಸ ಸಹಿತ ವ್ಯವಸ್ಥೆ ಕಲ್ಪಿಸಬೇಕು ಎಂದರು.

ಶಾಸಕ ಜೆ.ಆರ್.ಲೋಬೊ ಮಾತನಾಡಿ, ಜಿಲ್ಲೆಯ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ಕೊಡಬೇಕು. ವೆನ್ಲಾಕ್‌ನಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ, ಮೀನುಗಾರಿಕೆ ಬಂದರು ಅಭಿವೃದ್ಧಿ, ಡಿಪ್ಲೊಮಾ ಮಾಡುವವರ ಅನುಕೂಲಕ್ಕಾಗಿ ಸರಕಾರಿ ಸಂಜೆ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆ, 9/11, ಸಿಂಗಲ್ ಸೈಟ್, ಮೂಲಗೇಣಿ, ಮರಳಿನ ಅಭಾವ ಸಮಸ್ಯೆ ಪರಿಹಾರ ಮಾಡಬೇಕು ಎಂದು ವಿನಂತಿಸಿದರು.

ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್, ಶಾಸಕರಾದ ಜೆ.ಆರ್.ಲೋಬೊ, ಬಿ.ಎ.ಮೊಯ್ದಿನ್ ಬಾವ, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಗಳಾದ ಪ್ರಮೋದ್ ಮಧ್ವರಾಜ್, ಶಕುಂತಳಾ ಶೆಟ್ಟಿ, ಮೇಯರ್ ಹರಿನಾಥ್, ಉಸ್ತುವಾರಿ ಕಾರ್ಯದರ್ಶಿ ಭರತ್‌ಲಾಲ್ ಮೀನಾ, ಎಡಿಜಿಪಿ (ಗುಪ್ತಚರ)ಎ.ಎಂ.ಪ್ರಸಾದ್, ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಪ್ರಭಾ, ಪಶ್ಚಿಮ ವಲಯ ಐಜಿಪಿ ಅಮೃತ್‌ಪಾಲ್, ನಗರ ಪೊಲೀಸ್ ಆಯುಕ್ತ ಚಂದ್ರಶೇಖರ್, ಜಿಪಂ ಸಿಇಒ ಪಿ.ಐ.ಶ್ರೀವಿದ್ಯಾ, ಎಸ್ಪಿ ಡಾ.ಶರಣಪ್ಪ ಎಸ್.ಡಿ., ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷೆ ಜಾನಕಿ ಬ್ರಹ್ಮಾವರ, ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಮುಹಮ್ಮದ್ ಹನೀಫ್, ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ರಾಯ್ ಕ್ಯಾಸ್ತಲಿನೊ, ಮುಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಹೆಚ್ಚು ವರಿ ಜಿಲ್ಲಾಧಿಕಾರಿ ಕುಮಾರ್ ಮತ್ತಿತರರು ಉಪಸ್ಥಿತ ರಿದ್ದರು. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಸ್ವಾಗತಿಸಿದರು. ಶಾಸಕ ಐವನ್ ಡಿಸೋಜ ವಂದಿಸಿದರು. ಪತ್ರಕರ್ತ ಮನೋಹರ ಪ್ರಸಾದ್ ಕಾರ್ಯಕ್ರಮ ನಿರೂಪಿಸಿ ದರು.

ಬೇಡಿಕೆಗಳ ಪರಿಗಣನೆ :

ದ.ಕ. ಜಿಲ್ಲೆಯ ಕುರಿತಾದ ಹಲವು ಬೇಡಿಕೆಗಳಿಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಮಾನ ನಿಲ್ದಾಣ ರನ್‌ವೇ ವಿಸ್ತರಣೆ, ಮರವೂರು ಸೇತುವೆಯಿಂದ ವಿಮಾನ ನಿಲ್ದಾಣ ತನಕ ದ್ವಿಪಥ ರಸ್ತೆ ನಿರ್ಮಾಣ, ಮಂಗಳೂರು ಸುತ್ತ ರಿಂಗ್ ರೋಡ್ ನಿರ್ಮಾಣ, ಹಳೆ ಬಂದರು ಅಭಿವೃದ್ಧಿ ಹಾಗೂ ಸರಕಾರಿ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆ ಬಗ್ಗೆ ಪರಿಗಣಿಸಲಾಗುವುದು ಎಂದರು.

ನಮ್ಮ ಸರಕಾರ ಅಧಿಕಾರಕ್ಕೆ ಬಂದುಮೇ ತಿಂಗಳಿಗೆ 3 ವರ್ಷಗಳಾಗಲಿವೆ. ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ್ದ 165 ಭರವಸೆಗಳಲ್ಲಿ 100ಕ್ಕೂ ಅಧಿಕ ಈಡೇರಿವೆ. ಉಳಿದ ಭರವಸೆಗಳು 2 ವರ್ಷಗಳಲ್ಲಿ ಈಡೇರ ಲಿವೆ. ಮತ್ತೆ ನಾವು ಅಧಿಕಾರಕ್ಕೆ ಬರುವುದು ಖಚಿತ. ಆದರೆ ರಾಜ್ಯದಲ್ಲಿ ಕೆಲವರು ಅಧಿಕಾರದ ಕನಸು ಕಾಣಲಾರಂಭಿಸಿದ್ದಾರೆ. ಖಾತೆಗಳನ್ನೂ ಹಂಚಿಕೊಂಡಿದ್ದಾರೆ. ಆದರೆ ಅವರಿಗೆಲ್ಲಾ ಭ್ರಮ ನಿರಸವಾಗಲಿದೆ.
– ಸಿದ್ದರಾಮಯ್ಯ, ಮುಖ್ಯಮಂತ್ರಿ

ಶಿಲಾನ್ಯಾಸಗೊಂಡ ಯೋಜನೆಗಳು

ಪಡೀಲ್‌ನಲ್ಲಿ 41 ಕೋ.ರೂ. ವೆಚ್ಚದಲ್ಲಿ ದ.ಕ. ಜಿಲ್ಲಾ ಕಚೇರಿಗಳ ಸಂಕೀರ್ಣ ನಿರ್ಮಾಣ. / ವೆನ್ಲಾಕ್ ಆಸ್ಪತ್ರೆ ಆವರಣದಲ್ಲಿ 18 ಕೋ.ರೂ. ವೆಚ್ಚದಲ್ಲಿ 176 ಹಾಸಿಗೆ ಸಾಮರ್ಥ್ಯದ ನೂತನ ಕಟ್ಟಡ ನಿರ್ಮಾಣ. /ಎಮ್ಮೆಕೆರೆಯಲ್ಲಿ 5 ಕೋ.ರೂ. ವೆಚ್ಚದ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ ನಿರ್ಮಾಣ.3 ಕೋ.ರೂ. ವೆಚ್ಚದಲ್ಲಿ 160 ಮಂದಿಯ ಪೊಲೀಸ್ ವಸತಿ ಗೃಹ ನಿರ್ಮಾಣ.

Write A Comment