ಕನ್ನಡ ವಾರ್ತೆಗಳು

ಎತ್ತಿನಹೊಳೆ : ಸಿ.ಎಂ ವಿರುದ್ಧ ಪ್ರತಿಭಟನೆಗೆ ತೆರಳುತ್ತಿದ್ದ 6 ಮಂದಿಯನ್ನು ದಾರಿ ಮಧ್ಯೆಯೇ ಬಂಧಿಸಿದ ಪೊಲೀಸರು.

Pinterest LinkedIn Tumblr

Kulai_arest_turave

ಮಂಗಳೂರು / ಸುರತ್ಕಲ್ : ಎತ್ತಿನಹೊಳೆ ತಿರುವು ಯೋಜನೆಯನ್ನು ವಿರೋಧಿಸಿ ಇಂದು ಜಿಲ್ಲೆಗೆ ಭೇಟಿ ನೀಡಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕೈ ಮತ್ತು ಬಾಯಿಗೆ ಕಪ್ಪು ಬಟ್ಟೆ ಕಟ್ಟಿ ಹಾಗೂ ಕೈಯಲ್ಲಿ ಖಾಲಿ ಕೊಡವನ್ನು ಹಿಡಿದು ಪ್ರತಿಭಟನೆ ನಡೆಸಲು ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ತೀರ್ಮಾನಿಸಿದ್ದು, ಈ ಹಿನ್ನೆಲೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಬರುತ್ತಿದ್ದ ಆರು ಮಂದಿಯನ್ನು ದಾರಿ ಮಧ್ಯೆಯೇ ಪೊಲೀಸರು ಬಂಧಿಸಿದ ಘಟನೆ ಇಂದು ಸಂಜೆ ನಡೆದಿದೆ.

ಇಂದು ಸಂಜೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸುರತ್ಕಲ್ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಚಾಲನೆ ನೀಡಲು ಮುಖ್ಯಮಂತ್ರಿಗಳು ಆಗಮಿಸುವ ಬಗ್ಗೆ ಮೊದಲೇ ನಿರ್ಧಾರವಾಗಿತ್ತು. ಈ ಸಂದರ್ಭ ಯೋಜನೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಎಲ್ಲ ಸಂಘಟನೆಗಳ ನಾಯಕರನ್ನು ಒಂದೇ ವೇದಿಕೆಯಲ್ಲಿ ಒಟ್ಟು ಗೂಡಿಸಿಕೊಂಡು (ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ಅಶ್ರಯದಲ್ಲಿ) ಸುರತ್ಕಲ್ ಜಂಕ್ಷನ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕೈ ಮತ್ತು ಬಾಯಿಗೆ ಕಪ್ಪು ಬಟ್ಟೆ ಕಟ್ಟಿ ಹಾಗೂ ಕೈಯಲ್ಲಿ ಖಾಲಿ ಕೊಡವನ್ನು ಹಿಡಿದು ಪ್ರತಿಭಟನೆ ನಡೆಸುವುದಾಗಿ ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ಸಂಚಾಲಕ ಸತ್ಯಜಿತ್ ಸುರತ್ಕಲ್ ಅವರು ಸುದ್ದಿಗೋಷ್ಠಿಯಲ್ಲಿ ಮೊದಲೇ ಪ್ರಕಟಿಸಿದ್ದರು.

ಈ ಹಿನ್ನೆಲೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಸುರತ್ಕಲ್‌ಗೆ ಆಗಮಿಸುತ್ತಿದ್ದ ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿಯ ಕಾರ್ಯಕರ್ತ ಎಂ.ಜಿ.ಹೆಗ್ಡೆ, ತುಳುನಾಡ ರಕ್ಷಾಣ ವೇದಿಕೆಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು, ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿಕ ಜೈನ್, ಕಾರ್ಯಕರ್ತರಾದ ಪ್ರಶಾಂತ್,ಹರೀಶ್ ಹಾಗೂ ಸಿರಾಜ್ ಎಂಬವರನ್ನು ಮೊದಲೇ ಮಾಹಿತಿ ಪಡೆದ ಪಣಂಬೂರು ಪೊಲೀಸರು ಕುಳಾಯಿ ಬಳಿ ವಶಕ್ಕೆ ಪಡಿದುಕೊಂಡು, ಆರು ಮಂದಿಯನ್ನು ಪಣಂಬೂರು ಠಾಣೆಗೆ ಕರೆದೊಯ್ದಿದ್ದಾರೆ.

ಪೊಲೀಸರ ಈ ಕ್ರಮವನ್ನು ಖಂಡಿಸಿರುವ ಸಹ್ಯಾದ್ರಿ ಸಂಚಾಯದ ಮುಖಂಡ ದಿನೇಶ್ ಹೊಳ್ಳ ಅವರು, ಸರ್ಕಾರದಿಂದ ಸಮಸೈ ಎದುರಾದಗ ಪ್ರತಿಯೊಬ್ಬ ವ್ಯಕ್ತಿಯೂ ಸಾಂವಿಧಾನಿಕ ರೀತಿಯಲ್ಲಿ ಪ್ರತಿಭಟನೆ ಮಾಡುವ ಹಕ್ಕನ್ನು ಹೊಂದಿದ್ದಾನೆ.ಆದರೆ ಜಿಲ್ಲೆ ಎದುರಿಸುತ್ತಿರುವ ಬಹುದೊಡ್ಡ ಸಮಸೈಯ ವಿರುದ್ಧ ಶಾಂತಿಯುತ ಪ್ರತಿಭಟನೆಗೆ ತೆರಳುತ್ತಿದ್ದವರನ್ನು ದಾರಿಯಲ್ಲೇ ಬಂಧಿಸುವ ಮೂಲಕ ಜಿಲ್ಲಾಡಳಿತಾ ಗೂಂಡಾಯಿಸಂ ಮಾರ್ಗ ಅನುಸರಿಸುತ್ತಿದೆ. ಇದು ಪ್ರತಿಭಟನೆಯನ್ನು ಹತ್ತಿಕುವ ಯತ್ನವಾಗಿದ್ದು, ಸರ್ಕಾರದ ಯೋಜನೆಯ ವಿರುದ್ಧ ಧ್ವನಿ ಎತ್ತುವ ಕಾರ್ಯಕರ್ತರನ್ನು ನಿಗ್ರಹಿಸಲು ಸರ್ಕಾರ ಮಾಡುತ್ತಿರುವ ತಂತ್ರವಾಗಿದೆ ಎಂದು ಆರೋಪಿಸಿದ್ದಾರೆ.

Write A Comment