ಕನ್ನಡ ವಾರ್ತೆಗಳು

ನವೀಕೃತ ಪಿಸಿಯೋಥೆರಪಿ ಮತ್ತು ಡಿಇಐಸಿ ವಿಭಾಗ ಉದ್ಘಾಟನೆ.

Pinterest LinkedIn Tumblr

wenlock_phystphy_1

ಮಂಗಳೂರು,ಏ.19 : ವೆನ್ಲಾಕ್ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ನವೀಕೃತಗೊಂಡ ಫಿಸಿಯೋಥೆರಪಿ ಮತ್ತು ಡಿಸ್ಟ್ರಿಕ್ಟ್ ಅರ್ಲ್‌ ಇಂಟರ್ವೆನ್ಸನ್ ಸೆಂಟರ್(ಡಿಇಐಸಿ) ವಿಭಾಗದ ಉದ್ಘಾಟನಾ ಕಾರ್ಯಕ್ರಮ ಇಂದು ಬೆಳಗ್ಗೆ ನಡೆಯಿತು. ನವೀಕೃತಗೊಂಡ ಫಿಸಿಯೋಥೆರಪಿ ಮತ್ತು ಡಿಸ್ಟ್ರಿಕ್ಟ್ ಅರ್ಲ್‌ ಇಂಟರ್ವೆನ್ಸನ್ ಸೆಂಟರ್(ಡಿಇಐಸಿ) ವಿಭಾಗವನ್ನು ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ ಖಾದರ್ ಅವರು ಉದ್ಘಾಟಿಸಿದರು.

ಈ ಸಂಧರ್ಭದಲ್ಲಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ವೆನ್ ಲಾಕ್ ನ ಅಧೀಕ್ಷಕಿ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ.ರಾಜೇಶ್ವರಿ ದೇವಿ ಎಚ್,ಆರ್, ಕೆ‌ಎಂಸಿ ಡಿನ್ ಡಾ.ಎಂ ವಿ.ಪ್ರಭು , ಪ್ರಮುಖರಾದ ಡಾ.ಸಲ್ದಾನ, ಪ್ರೋ ಯು,ವಿ.ಶೆಣೈ, ಡಾ.ಬಾಲಕೃಷ್ಣ ರಾವ್, ಡಾ.ಲವೀನಾ, ಮುಹಮ್ಮದ್ ಕುಟ್ಟಿ, ಉಮಾ ರೈ ಪೂರ್ಣಿಮಾ, ದೀಪ್ತಿ ಮೊದಲಾದವರು ಉಪಸ್ಥಿತರಿದ್ದರು.

wenlock_phystphy_2 wenlock_phystphy_3 wenlock_phystphy_4 wenlock_phystphy_5 wenlock_phystphy_6 wenlock_phystphy_7 wenlock_phystphy_8 wenlock_phystphy_9 wenlock_phystphy_10 wenlock_phystphy_11 wenlock_phystphy_12wenlck_phsothary_15 wenlck_phsothary_16 wenlck_phsothary_17 wenlck_phsothary_18 wenlck_phsothary_20 wenlck_phsothary_21 wenlck_phsothary_19wenlock_phystphy_13 wenlock_phystphy_14

ವೆನ್ ಲಾಕ್ ಫಿಸಿಯೋಥೆರಪಿ ವಿಭಾಗ ರೋಟರಿ ಕ್ಲಬ್ ಸಹಯೋಗದೊಂದಿಗೆ 1965 ರಲ್ಲಿ ಆರಂಭವಾಗಿದ್ದು, ಪ್ರಸ್ತಿತ ಈ ವಿಭಾಗದಲ್ಲಿ ತುಂಬ ಹಳೆಯದಾದ ಉಪಕರಣಗಳಿದ್ದು, ಇದನ್ನು ಬದಲಾಯಿಸಿ,ರೋಟರಿ ಕ್ಲಬ್‌ನವರು ನೀಡಿರುವ ಅನುದಾನದಲ್ಲಿ ಆಧುನಿಕ ಉಪಕರಣಗಳನ್ನು ಇಲ್ಲಿ ವ್ಯವಸ್ಥೆ ಮಾಡಲಾಗಿದೆ. ಡಿಇಐಸಿ ವಿಭಾಗದಲ್ಲಿ ಎಲೆಕ್ಟ್ರೋ ಥೆರಪಿಯಂತೆ ಮಂಡಿ, ಸೊಂಟ, ಭುಜ, ಕುತ್ತಿಗೆ ಇತ್ಯಾದಿ ನೋವುಗಳನ್ನು ಶಮನಗೊಳಿಸಲಾಗುತ್ತದೆ. ಜತೆಗೆ ಎಕ್ಸರ್ಸೈಸ್ ಥೆರಪಿಯಂತೆ ರೇಂಜ್ ಆಫ್ ಮೂವ್ಮೆಂಟ್, ಸ್ಟ್ರೆಂತ್, ಎಂಡ್ಯೂರೆನ್ಸ್ ಪಡೆಯಬಹುದು ಇದರಿಂದ ರೋಗಿಯ ಮೊದಲಿನ ಹಾಗೆ ತನ್ನ ದೈನಂದಿನ ಚಟುವಟಿಕೆಗಳಲ್ಲಿ ತೊಡಗಲು ಸಹಾಯವಾಗುತ್ತದೆ. ಈಗಿನ ಅಧುನಿಕ ಹೈಟೇಕ್ ಯಂತ್ರಗಳ ಸಹಾಯದಿಂದ ಎರಡು ಅಥವಾ ಮೂರು ರೋಗಿಗಳಿಗೆ ಚಿಕಿತ್ಸೆ ನೀಡಬಹುದಾಗಿದೆ ಎಂದು ಡಾ.ರಾಜೇಶ್ವರಿ ದೇವಿ ಹೇಳಿದರು. .

Write A Comment