ಕನ್ನಡ ವಾರ್ತೆಗಳು

‘ನಾನು ಸಾಯ್ತಿದ್ದೀನಿ, ಅಮ್ಮನಿಗೆ ಧೈರ್ಯ ಹೇಳು’- ಸ್ನೇಹಿತನಿಗೆ ಸಂದೇಶ ಕಳುಹಿಸಿ ಯುವಕ ಆತ್ಮಹತ್ಯೆ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ‘ನಾನು ಸಮಸ್ಯೆಯಲ್ಲಿರುವೆ, ಅದರಿಂದಾಗಿ ಮನನೊಂದಿರುವೆ, ಆದ್ದರಿಂದ ಸಾಯುವ ನಿರ್ಧಾರಕ್ಕೆ ಬಂದಿರುವೆ, ನನ್ನ ತಾಯಿಗೆ ಧೈರ್ಯ ತುಂಬು’ ಎಂದು ತನ್ನ ಸ್ನೇಹಿತನಿಗೆ ಸಂದೇಶ ಕಳುಹಿಸಿದ ಯುವಕನೋರ್ವ ಮನೆಯ ಹಿಂಬದಿಯಲ್ಲಿನ ಹಾಡಿಯ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂದ ಘಟನೆ ಸೋಮವಾರ ನಡೆದಿದೆ.

ಕುಂದಾಪುರ ತಾಲೂಕಿನ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಡ ಎಂಬಲ್ಲಿನ ನಿವಾಸಿ ಮಂಜುನಾಥ ಮಡಿವಾಳ (32) ಆತ್ಮಹತ್ಯೆಗೆ ಶರಣಾದ ವ್ಯಕ್ತಿ.

Nada_Manjunath_Suside (2) Nada_Manjunath_Suside (3) Nada_Manjunath_Suside (1)

ನಾಡಾ ನಿವಾಸಿ ಚಿಕ್ಕು ಮಡಿವಾಳ ಎನ್ನುವವರ ಏಕೈಕ ಪುತ್ರ ಮಂಜುನಾಥ ಮಡಿವಾಳ ಈ ಹಿಂದೆ ಬೆಂಗಳೂರಿನಲ್ಲಿ ಬೀಡಾ ಅಂಗಡಿ ನಡೆಸಿಕೊಂಡಿದ್ದು ಸುಮಾರು ಆರು ತಿಂಗಳ ಹಿಂದಷ್ಟೇ ಊರಿಗೆ ಆಗಮಿಸಿ ತಾಯಿಯೊಂದಿಗೆ ವಾಸವಿದ್ದರು. ಆದರೇ ಊರಿಗೆ ಬಂದ ಮೇಲೆ ಯಾವುದೇ ಕೆಲಸವನ್ನೂ ಮಾಡ ಇವರು ಹಣಕಾಸು ವಿಚಾರದಲ್ಲಿ ಕೊಂಚ ಮನಸ್ಸು ಕೆಡಿಸಿಕೊಂಡಿದ್ದರೆನ್ನಾಲಾಗಿದೆ. ತಾಯಿ ಚಿಕ್ಕು ಅವರೇ ಮನೆಯ ಸಂಪೂರ್ಣ ಜವಬ್ದಾರಿ ನಿರ್ವಹಣೆ ಮಾಡುತ್ತಿದರು.

ಮದುವೆ ನಿಶ್ಚಯವಾಗಿತ್ತು…..
ಇತ್ತೀಚೆಗಷ್ಟೇ ಮಂಜುನಾಥ ಅವರ ವಿವಾಹವೂ ನಿಶ್ಚಯವಾಗಿದ್ದು ಮೇ.2 ರಂದು ಮದುವೆ ಕೂಡ ನಡೆಯಬೇಕಿತ್ತು. ಈತನ್ಮಧ್ಯೆ ಹುಡುಗಿ ಕಡೆಯವರು ಲಗ್ನಪತ್ರಿಕೆ ಹಂಚುವ ಕಾರ್ಯವನ್ನು ಮಾಡಿದರೇ ಮಂಜುನಾಥ ಅವರ ಲಗ್ನಪತ್ರಿಕೆ ಮುದ್ರಣಕ್ಕೆ ನೀಡಿದ್ದು ಸೋಮವಾರ ಅದನ್ನು ಪಡೆದು ಹೆಂಚುವ ತಯಾರಿ ನಡೆಸಿದ್ದರು.

ಸ್ನೇಹಿತನಿಗೆ ಸಂದೇಶ…
ಸೋಮವಾರ ಮದುವೆ ಆಮಂತ್ರಣ ಪತ್ರಿಕೆ ಕೈಗೆ ಸಿಗುತ್ತದೆ ಹೆಂಚಬೇಕು ಎನ್ನುವ ಬಗ್ಗೆ ಆತ್ಮೀಯ ಸ್ನೇಹಿತರಲ್ಲಿ ಹೇಳಿಕೊಂಡಿದ್ದ ಮಂಜುನಾಥ ಮಾತ್ರ ಮಧ್ಯಾಹ್ನದವರೆಗೂ ಪತ್ತೆಯಿರದ್ದನ್ನು ಕಂಡು ಆತನ ಸ್ನೇಹಿತರು ಕರೆಮಾಡಿದರೂ ಯಾವುದೇ ಪ್ರತಿಕ್ರಿಯೆ ಲಭಿಸಿರಲಿಲ್ಲ. ಮನೆಯಲ್ಲಿ ಮಾಧ್ಯಹ್ನದ ಬಳಿಕ ಮಗ ಇಲ್ಲದ್ದನ್ನೂ ಕಂಡು ತಾಯಿಯೂ ದಿಗ್ಭ್ರಾಂತರಾಗಿದ್ದರು. ಈ ನಡುವೆಯೇ ಸ್ನೇಹಿತರೋರ್ವರ ಮೊಬೈಲಿಗೆ ಸಂದೇಶವೊಂದು ಮಂಜುನಾಥ್ ನಂಬರಿನಿಂದ ಬಂದಿದ್ದು ಅದರಲ್ಲಿ ತಾನೂ ಸಾಯುವುದಾಗಿ ಬರೆದಿದ್ದರು.

ಕೂಡಲೇ ಸ್ನೇಹಿತರೆಲ್ಲರೂ ಒಗ್ಗೂಡಿ ಎಲ್ಲೆಡೆ ಹುಡುಕಾಟ ನಡೆಸುವಾಗ ಮಂಜುನಾಥ ಅವರ ಮನೆ ಸಮೀಪ ಹಾಡಿಯಲ್ಲಿನ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಸದ್ಯ ಶವವನ್ನು ಕುಂದಾಪುರ ಶವಗಾರಕ್ಕೆ ರವಾನಿಸಲಾಗಿದೆ. ಯಾವುದೋ ಕಾರಣಕ್ಕಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ಮಂಜುನಾಥ್ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.

ಘಟನಾ ಸ್ಥಳಕ್ಕೆ ಗಂಗಿಳ್ಳಿ ಎಸ್.ಐ. ಸುಬ್ಬಣ್ಣ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ನಡೆಸುತ್ತಿದಾರೆ. ತಾ.ಪಂ. ಸದಸ್ಯ ಪ್ರವೀಣ ಶೆಟ್ಟಿ, ಗ್ರಾ.ಪಂ. ಸದಸ್ಯರು ಭೇಟಿ ಮೃತರ ಮನೆಗೆ ಭೇಟಿ ನೀಡಿದ್ದಾರೆ.

Write A Comment