ಕನ್ನಡ ವಾರ್ತೆಗಳು

ಪಾರ್ಕ್ ಮಾಡಿದ್ದ ಕಾರಿನಲ್ಲಿ ಲಘು ಸ್ಫೋಟ :ಸ್ವಲ್ಪದರಲ್ಲೇ ಪಾರಾದ ದಂಪತಿಗಳು / ಕಿಡಿಡಿಗೇಡಿಗಳ ಕೃತ್ಯ ಶಂಕೆ..!

Pinterest LinkedIn Tumblr

Kadri_car_Expod_1

ಮಂಗಳೂರು, ಎಪ್ರಿಲ್, 18 : ಪಾರ್ಕ್ ಮಾಡಿದ್ದ ಕಾರೊಂದರ ಒಳಗೆ ಸಣ್ಣ ಪ್ರಮಾಣದ  (ಲಘು) ಸ್ಪೋಟ ಉಂಟಾಗಿದ್ದು, ದಂಪತಿಗಳು ಸ್ವಲ್ಪದರಲ್ಲೇ ಪ್ರಾಣಪಾಯದಿಂದ ಪಾರಾದ ಘಟನೆ ನಗರದ ಕದ್ರಿ ಜೋಗಿ ಮಠದ ಸಮೀಪ ಇಂದು ಸಂಜೆ ನಡೆದಿದೆ.

ಸೋಮವಾರ ಸಂಜೆ ನಗರದ ಉರ್ವ ಸ್ಟೋರ್ ಸಮೀಪದ ದಡ್ಡಲ್‌ಕಾಡ್ ನಿವಾಸಿಗಳಾದ ಮ್ಯಾಕ್ವೆಲ್ ಮೊಂತೆರೊ ಮತ್ತು ಪತ್ನಿ ಸರಿತಾ ತಮ್ಮ ಸ್ವಿಫ್ಟ್ ಕಾರಿನಲ್ಲಿ ಕದ್ರಿ ಜೋಗಿ ಮಠದ ಆವರಣದಲ್ಲಿರುವ ಗುಹೆ ವೀಕ್ಷಿಸಲು ಹೋಗಿದ್ದರು. ಹಿಂತಿರುಗಿ ಬರುವ ಸಂದರ್ಭ ದೂರದಲ್ಲೇ ಕಾರಿನ ಡೋರ್ ಓಪನ್ ಮಾಡುವ ನಿಟ್ಟಿನಲ್ಲಿ ತಮ್ಮ ಕಾರಿನ ಕೀ ಮೂಲಕ ಸೆಂಟ್ರಲ್ ಲಾಕ್ ಬಟನ್ ಅದುಮಿದ್ದಾರೆ. ತಕ್ಷಣ ಕಾರಿನ ಎದುರಿನ ಪ್ಯಾಸೆಂಜರ್ ಸೀಟಿನ ಬಳಿ ಸ್ಫೋಟದ ಶಬ್ದವೊಂದು ಕೇಳಿದ್ದು, ಬೆದರಿದ ಮ್ಯಾಕ್ಸ್‌ವೆಲ್ ಮೊಂತೆರೋ ಅವರು ತಕ್ಷಣ ಸ್ಥಳಕ್ಕೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

Kadri_car_Expod_2 Kadri_car_Expod_3 Kadri_car_Expod_4 Kadri_car_Expod_5 Kadri_car_Expod_6 Kadri_car_Expod_7 Kadri_car_Expod_8 Kadri_car_Expod_9 Kadri_car_Expod_10

Kadri_car_Expod_11 Kadri_car_Expod_12 Kadri_car_Expod_13

ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಬಾಂಬ್ ಪತ್ತೆ ದಳಕ್ಕೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಪೊಲೀಸರು ಹಾಗೂ ಬಾಂಬ್ ಪತ್ತೆ ದಳದ ತಂಡದವರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭ ಸ್ಫೋಟಕದ ವೈಯರ್‌ನ್ನು ಕಾರಿನ ಎಡ ಇಂಡಿಕೇಟರ್‌ಗೆ ಸಂಪರ್ಕಿಸಲಾಗಿತ್ತು. ಯಾರೋ ಕಿಡಿಡಿಗೇಡಿಗಳು ಕಾರನ್ನು ಸ್ಫೋಟಿಸುವ ಉದ್ದೇಶದಿಂದ ಕಾರಿನ ಇಂಡಿಕೇಟರ್‌ಗೆ ಈ ಸ್ಫೋಟಕದ ವೈಯರ್‌ನ್ನು ಸಂಪರ್ಕಿಸಿರಬೇಕೆಂದು ಶಂಕಿಸಲಾಗಿದೆ.

ಬಾಂಬ್ ನಿಷ್ಕ್ರಿಯ ದಳ, ಸ್ಫೋಟಕ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ತನಿಖೆ ಕೈಗೊಂಡಿದ್ದಾರೆ.  ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Write A Comment