ಕನ್ನಡ ವಾರ್ತೆಗಳು

ವೌಲ್ಯಮಾಪನಕ್ಕೆ ಖಾಸಗಿ ಉಪನ್ಯಾಸಕರ ನೇಮಕ :ಎಸ್‌ಎಫ್‌ಐ ಮತ್ತು ಡಿವೈಎಫ್‌ ಆಕ್ರೋಷ

Pinterest LinkedIn Tumblr

ಮಂಗಳೂರು, ಎ.18: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಯ ವೌಲ್ಯಮಾಪನಕ್ಕೆ ಖಾಸಗಿ ಉಪನ್ಯಾಸಕರನ್ನು ನೇಮಕ ಮಾಡಿರುವುದಕ್ಕೆ ಖಂಡನೆ ವ್ಯಕ್ತಪಡಿಸಿರುವ ಎಸ್‌ಎಫ್‌ಐ ಮತ್ತು ಡಿವೈಎಫ್‌ಐ ಸಂಘಟನೆಗಳು ಇದನ್ನು ವಿರೋಧಿಸಿ ಸೋಮವಾರ ಮಂಗಳೂರಿನಲ್ಲಿ ವೌಲ್ಯಮಾಪನ ಕೇಂದ್ರವಾಗಿರುವ ಶಾರದಾ ವಿದ್ಯಾಲಯದ ಎದುರು ಪ್ರತಿಭಟನೆ ನಡೆಸಿದರು.

ಪ್ರತಿಭನಟಕಾರರನ್ನುದ್ದೇಶಿಸಿ ಡಿವೈಎಫ್‌ಐ ದ.ಕ. ಜಿಲ್ಲಾ ಕಾರ್ಯದರ್ಶಿ ಸಂತೋಷ್‌ಕುಮಾರ್ ಬಜಾಲ್ ಮಾತನಾಡಿ, ವೇತನ ಹೆಚ್ಚಳಕ್ಕೆ ಆಗ್ರಹಿಸಿ ವೌಲ್ಯಮಾಪನ ಬಹಿಷ್ಕರಿಸಿ ಉಪನ್ಯಾಸಕರು ಧರಣಿ ನಡೆಸುತ್ತಿರುವುದರಿಂದ ವೌಲ್ಯಮಾಪನಕ್ಕೆ ಅಡ್ಡಿಯಾಗಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಉಪನ್ಯಾಸಕರನ್ನು ನಿಯೋಜಿಸಿದೆ. ಉಪನ್ಯಾಸಕರ ಬೇಡಿಕೆಗಳನ್ನು ಮನ್ನಿಸದೆ ವೌಲ್ಯಮಾಪನಕ್ಕೆ ಖಾಸಗಿ ಉಪನ್ಯಾಸಕರನ್ನು ನೇಮಕ ಮಾಡಿರುವ ಸರಕಾರದ ಈ ಕ್ರಮ ಸರಿಯಲ್ಲ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಡಿವೈಎಫ್‌ಐ ದ.ಕ. ಜಿಲ್ಲಾ ಉಪಾಧ್ಯಕ್ಷ ಇಮ್ತಿಯಾಝ್ ಬಿ.ಕೆ., ಎಸ್‌ಎಫ್‌ಐ ಮುಖಂಡರಾದ ನಿತಿನ್ ಕುತ್ತಾರ್, ಚರಣ್ ಶೆಟ್ಟಿ, ನವೀನ್ ಕೊಂಚಾಡಿ, ಹಂಝ ಕಿನ್ಯ ಮುಂತಾದವರು ಮಾತನಾಡಿದರು.

Write A Comment