ಕನ್ನಡ ವಾರ್ತೆಗಳು

ಏ. 19 : ವೆನ್‌ಲಾಕ್ ಆಸ್ಪತ್ರೆಯಲ್ಲಿ ನವೀಕೃತ ಪಿಸಿಯೋಥೆರಪಿ ಮತ್ತು ಡಿಇಐಸಿ ವಿಭಾಗ ಅರಂಭ.

Pinterest LinkedIn Tumblr

wenlock_rajeshvari_1

ಮಂಗಳೂರು,ಏ.18 : ವೆನ್ಲಾಕ್ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ನವೀಕೃತಗೊಂಡ ಫಿಸಿಯೋಥೆರಪಿ ಮತ್ತು ಡಿಸ್ಟ್ರಿಕ್ಟ್ ಅರ್ಲ್‌ ಇಂಟರ್ವೆನ್ಸನ್ ಸೆಂಟರ್(ಡಿಇಐಸಿ) ವಿಭಾಗ ಏ. 19ರಂದು ಉದ್ಘಾಟನೆಗೊಳ್ಳಲಿದೆ ಎಂದು ಆಸ್ಪತ್ರೆಯ ಅಧೀಕ್ಷಕಿ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ. ರಾಜೇಶ್ವರಿದೇವಿ ಹೇಳಿದ್ದಾರೆ.

ಅವರು ಸುದ್ದಿಗಾರರೊಂದಿಗೆ ಮಾತನಾಡಿ ಫಿಸಿಯೋಥೆರಪಿ ವಿಭಾಗವು ಸುಮಾರು 19 ವರ್ಷಗಳಿಂದ ಸತತ ಸೇವೆಯನ್ನು ನೀಡುತ್ತಾ ಬಂದಿದ್ದು, ತನ್ನದೇ ಅದ ವಿಶಿಷ್ಟ ಸೇವೆಯಿಂದ ಲಕ್ಷಾಂತರ ರೋಗಿಗಳ ಬದುಕಿಗೆ ಕಾಯಕಲ್ಪವನ್ನು ನೀಡಿದೆ. ಫಿಸಿಯೋಥೆರಪಿ ಮತ್ತು ಡಿಇಐಸಿ ವಿಭಾಗದಲ್ಲಿ ಹಳೆಯದಾದ ಉಪಕರಣಗಳಿದ್ದು, ಇದನ್ನು ಬದಲಾಯಿಸಲಾಗಿದೆ. ರೋಟರಿ ಕ್ಲಬ್‌ನವರು ನೀಡಿರುವ ಅನುದಾನದಲ್ಲಿ ಆಧುನಿಕ ಉಪಕರಣಗಳನ್ನು ಇಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದರು.

wenlock_rajeshvari_2 wenlock_rajeshvari_3

ಡಿಇಐಸಿ ಉದ್ಘಾಟನೆಯನ್ನು ಮಾನ್ಯ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ ಖಾದರ್ ಅವರು ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.

ಡಿಇಐಸಿ ವಿಭಾಗದಲ್ಲಿ ಎಲೆಕ್ಟ್ರೋ ಥೆರಪಿಯಂತೆ ಮಂಡಿ, ಸೊಂಟ, ಭುಜ, ಕುತ್ತಿಗೆ ಇತ್ಯಾದಿ ನೋವುಗಳನ್ನು ಶಮನಗೊಳಿಸಲಾಗುತ್ತದೆ. ಜತೆಗೆ ಎಕ್ಸರ್ಸೈಸ್ ಥೆರಪಿಯಂತೆ ರೇಂಜ್ ಆಫ್ ಮೂವ್ಮೆಂಟ್, ಸ್ಟ್ರೆಂತ್, ಎಂಡ್ಯೂರೆನ್ಸ್ ಪಡೆಯಬಹುದು ಇದರಿಂದ ರೋಗಿಯ ಮೊದಲಿನ ಹಾಗೆ ತನ್ನ ದೈನಂದಿನ ಚಟುವಟಿಕೆಗಳಲ್ಲಿ ತೊಡಗಲು ಸಹಾಯವಾಗುತ್ತದೆ. ಈಗಿನ ಅಧುನಿಕ ಹೈಟೇಕ್ ಯಂತ್ರಗಳ ಸಹಾಯದಿಂದ ಎರಡು ಅಥವಾ ಮೂರು ರೋಗಿಗಳಿಗೆಚಿಕಿತ್ಸೆ ನೀಡಬಹುದಾಗಿದೆ ಎಂದು ಹೇಳಿದರು.

Write A Comment