ಕನ್ನಡ ವಾರ್ತೆಗಳು

ಎ.19 : ಶ್ರೀ ಕ್ಷೇತ್ರ ಕದ್ರಿಯಲ್ಲಿ ಪರ್ಜನ್ಯಜಪ : ಸಾಮೂಹಿಕ ಪ್ರಾರ್ಥನೆ

Pinterest LinkedIn Tumblr

kadri_temple_pics_1

ಮಂಗಳೂರು,ಎ.18 : ರಾಜ್ಯದ ಜನತೆ ‌ಎದುರಿಸುತ್ತಿರುವ ಬರ ಪರಿಸ್ಥಿತಿಯ ನಿವಾರಣೆಗಾಗಿ ಹಾಗೂ ಮಂಗಳೂರಿನ ಜನತೆ‌ ಎದುರಿಸುತ್ತಿರುವ ಜಲಕ್ಷಾಮದ ನಿವಾರಣೆಗಾಗಿ ಎ.19 ರಂದು ಶ್ರೀ ಕ್ಷೇತ್ರ ಕದ್ರಿಯಲ್ಲಿ ಪರ್ಜನ್ಯ ಜಪ ಹಾಗೂ ಸಾಮೂಹಿಕ ಪ್ರಾರ್ಥನೆ ಆಯೋಜಿಸಲಾಗಿದೆ.

ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಶ್ರೀ ಹರಿನಾಥ್ ಹಾಗೂ ಶ್ರೀ ಎ.ಜೆ. ಶೆಟ್ಟಿಯವರ ಮಾರ್ಗದರ್ಶನದಲ್ಲಿ ಜರಗಲಿರುವ ಈ ಕಾರ್ಯಕ್ರಮದಲ್ಲಿ ಸ್ಥಳೀಯ ಕಾರ್ಪೊರೇಟರ್‌ಗಳು, ಜನಪ್ರತಿನಿಧಿಗಳು, ಕ್ಷೇತ್ರದ ಆಡಳಿತಾಧಿಕಾರಿಗಳು, ಕಾರ್ಯನಿರ್ವಹಣಾಧಿಕಾರಿಗಳು, ಕ್ಷೇತ್ರದ ತಂತ್ರಿಗಳು ಹಾಗೂ ಭಕ್ತಾಧಿಗಳು ಭಾಗವಹಿಸಲಿರುವರೆಂದು ‌ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Write A Comment