ಕನ್ನಡ ವಾರ್ತೆಗಳು

ಕುಂದಾಪುರ(ಗೋಪಾಡಿ): ಪತ್ನಿಯ ಶೀಲಶಂಕಿಸಿದ ಪತಿ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ

Pinterest LinkedIn Tumblr

ಉಡುಪಿ: ಸುಮಾರು ಐದು ವರ್ಷಗಳ ಹಿಂದೆ ಮದುವೆಯಾಗಿದ್ದ ಈ ಜೋಡಿಗಳ ದಾಂಪತ್ಯ ಜೀವನದಲ್ಲಿ ಏನು ಕಲಹವೋ ಏನೋ… ಆ ಒಂದು ಜೀವ ಮಾತ್ರ ವೇದನೆಯಲ್ಲಿಯೇ ಬಲಿಯಾಗಿದೆ. ಅಷ್ಟಕ್ಕೂ ಆತ ವಿಷ ಕುಡಿದು ಸಾಯುವ ನಿರ್ಧಾರಕ್ಕೆ ಬಂದಿದ್ದಕ್ಕೆ ಮುಖ್ಯ ಕಾರಣವೇ ಆತನ ಹೆಂಡತಿಯ ಬಗ್ಗೆ ಜನರು ಆಡಿಕೊಂಡ ಮಾತುಗಳು.

ಜೀವವೇ ಬೇಡ ಎನ್ನುವ ಜಿಗುಪ್ಸೆಗೊಳಗಾಗಿ ವಿಷ ಸೇವಿಸಿ ಆತ್ಮಹತ್ಯೆಗೆ ಮಾಡಿಕೊಂಡ ವ್ಯಕ್ತಿ ಗೋಪಾಡಿಯ ರಮೇಶ್ (33).

Gopadi_Ramesh_Suside

ಮೂಲತಃ ಗೋಪಾಡಿಯವರಾದ ಇವರು ಹಲವು ವರ್ಷಗಳ ಕಾಲ ಮೀನುಗಾರಿಕೆ ಕೆಲಸ ಮಾಡಿಕೊಂಡು ತನ್ನದೇ ಆದ ಸ್ವಂತ ಬೋಟ್ ಇಟ್ಟುಕೊಂಡಿದ್ದವರು. ಸುಮಾರು ೫ ವರ್ಷಗಳ ಹಿಂದೆ ಸಾಸ್ಥಾನ ಸಮೀಪದ ವೀಣಾ ಎಂಬಾಕೆಯನ್ನು ಮದುವೆಯಾದ ಇವರಿಗೆ ಓರ್ವ ಪುತ್ರ ಹಾಗೂ ಪುತ್ರಿ ಇದ್ದಾರೆ. ಮೂಲ ಮನೆಯಲ್ಲಿರಲು ಏನೋ ತೊಡಕಾದ ಕಾರಣಕ್ಕೆ ಮನೆ ತ್ಯಜಿಸಿ ಸಾಲಿಗ್ರಾಮದಲ್ಲಿ ಬಾಡಿಗೆ ಮನೆಯೊಂದರಲ್ಲಿ ಪತ್ನಿಯೊಂದಿಗೆ ಇದ್ದ ವೇಳೆಯೇ ಎರಡು ವರ್ಷಗಳ ಹಿಂದೆ ಇವರಿಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಈ ಗಲಾಟೆ ಮಿತಿ ಮೀರಿ ಆಸ್ಪತ್ರೆಗೆ ದಾಖಲಾಗಿದ್ದು ಮಾತ್ರವಲ್ಲದೇ ತಾನು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿಗೆ ಪ್ರತಿಯಾಗಿ ವೀಣಾ ಖುಟುಂಬಿಕರು ದೂರು ದಾಖಲಿಸಿದ ತರುವಾಯ ಎಲ್ಲಾ ವ್ಯಾಜ್ಯಗಳು ರಾಜಿಸಂಧಾನದ ಮೂಲಕ ಇತ್ಯರ್ಥಗೊಂಡಿತ್ತು.

ಇದೆಲ್ಲದರ ಬಳಿಕ ಇಬ್ಬರು ಸಾಸ್ತಾನದಲ್ಲಿ ಬಾಡಿಗೆ ಮನೆ ಮಾಡಿ ವಾಸಮಾಡಿಕೊಂಡಿದ್ದು ಕೆಲವೇ ತಿಂಗಳುಗಳಲ್ಲಿ ಮತ್ತೆ ಅದೇ ಮನಸ್ತಾಪ ಜಾಸ್ಥಿಯಾಗಿ ಆಕೆ ತನ್ನ ತವರು ಸೇರಿದ್ದಳು. ತರುವಾಯ ಎಲ್ಲವೂ ಅಸ್ಪಷ್ಟವಾಗಿತ್ತು. ಇಬ್ಬರ ನಡುವೇ ಹಾಗೂ ಮಕ್ಕಳಿಬ್ಬರ ನಡುವೆ ಯಾವುದೇ ಸಂಪರ್ಕವಿರಲಿಲ್ಲ. ಗಂಡ-ಹೆಂಡತಿಯ ವ್ಯಾಜ್ಯ ಸರಿಪಡಿಸಲು ಊರ ಮುಖಂಡರು ಪ್ರಯತ್ನಪಟ್ಟಿದ್ದಲ್ಲದೇ ಸಕಲ ಪ್ರಯತ್ನ ಮಾಡಿದ್ದರು.

ಆದರೇ ತನ್ನ ಹೆಂಡತಿ ಬಗ್ಗೆಗಿನ ಬೇಜಾರಿನಿಂದ ಕುಡಿತ ಆರಂಬಿಸಿದ ರಮೇಶ್ ಮಾತ್ರ ಯಾರ ಮಾತಿಗೂ ಕಿವಿಗೊಡದೇ ಮನೆಯಲ್ಲಿ ಕೀಟನಾಶಕ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇತ್ತ ಗಂಡ ಸತ್ತು ಬಿದ್ದರೂ ಹೆಂಡತಿಯಾಗಲೀ ಆಕೆ ಮನೆಯವರಾಗಲೀ ಶವಸಂಸ್ಕಾರಕ್ಕೂ ಬಾರಲಿಲ್ಲ ಎನ್ನುವುದು ರಮೇಶ್ ಮನೆಯವರ ಆರೋಪ.

ರಮೇಶ್ ಆತ್ಮಹತ್ಯೆ ಬಗ್ಗೆ ಕುಂದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Write A Comment