ಕನ್ನಡ ವಾರ್ತೆಗಳು

ಝಾಕಿರ್ ನಾಯ್ಕ್ ಎರಡನೇ ಬಾರಿಯ ಮಂಗಳೂರು ಭೇಟಿಗೆ ರಾಜ್ಯ ಸರ್ಕಾರ ನಿರಾಕರಣ.

Pinterest LinkedIn Tumblr

Zakir_naik_ban

ಮಂಗಳೂರು, ಏ.11 : ವಿದ್ವಾಂಸ ಡಾ. ಝಾಕೀರ್ ನಾಯ್ಕ್ ಅವರ ಮಂಗಳೂರು ಕಾರ್ಯಕ್ರಮಕ್ಕೆ ಎರಡನೇ ಬಾರಿಯೂ ರಾಜ್ಯ ಸರ್ಕಾರ ಅನುಮತಿ ನಿರಾಕರಿಸಿದೆ. ಕಳೆದ ಡಿಸೆಂಬರ್‌ನಲ್ಲಿ ನಡೆಯಬೇಕಿದ್ದ ಕಾರ್ಯಕ್ರಮಕ್ಕೂ ಅನುಮತಿ ನೀಡಿರಲಿಲ್ಲ. ಡಿಸೆಂಬರ್ 27 ರಂದು ಮಂಗಳೂರು ನೆಹರೂ ಮೈದಾನದಲ್ಲಿ ಝಾಕಿರ್ ಅವರ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಆದರೆ ಆ ವೇಳೆ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಯಕ್ರಮ ಮುಂದೂಡುವಂತೆ ಪೊಲೀಸ್ ಆಯುಕ್ತರ ವಿನಂತಿಯ ಹಿನ್ನೆಲೆಯಲ್ಲಿ ಜ.2 ರಂದು ನಿಗದಿಪಡಿಸಿ ಪ್ರಚಾರ ನಡೆಸಲಾಗಿತ್ತು.

ಆದರೆ ಆ ವೇಳೆ ಕಾರ್ಯಕ್ರಮದ ವಿರುದ್ಧ ವಿಎಚ್‌ಪಿ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಹೀಗಾಗಿ ಮಾರ್ಚ್‌ನಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ನೀಡುವುದಾಗಿ ಅಂದು ಬೆಂಗಳೂರಿಗೆ ಭೇಟಿ ನೀಡಿದ್ದ ಸಂಘಟಕರಾದ ಸೌತ್ ಕರ್ನಾಟಕ ಸಲಫಿ ಮೂವ್ ಮೆಂಟ್ ನಿಯೋಗಕ್ಕೆ ಗೃಹಸಚಿವರು ಭರವಸೆ ನೀಡಿದ್ದರು. ಹೀಗಾಗಿ ಎಪ್ರಿಲ್‌ನಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ಕೋರಿ ಮತ್ತೆ ನಿಯೋಗ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಮತ್ತು ಗೃಹಸಚಿವರನ್ನು ಭೇಟಿ ಮಾಡಿತ್ತು. ಆದರೆ ಕಾಂಗ್ರೆಸ್‌ನ ಕೆಲವು ಮುಸ್ಲಿಂ ಮುಖಂಡರ ವಿರೋಧ, ಗುಪ್ತಚರ ಇಲಾಖೆ ಮಾಹಿತಿ, ಸಿಎಂ ಸಲಹೆಗಾರರ ಸಲಹೆ ಇತ್ಯಾದಿ ವಿಚಾರಗಳನ್ನು ಮುಂದಿಟ್ಟುಕೊಂಡು ಮಂಗಳೂರಿನಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದರು.

Write A Comment