ಕನ್ನಡ ವಾರ್ತೆಗಳು

ವಿದ್ವಾನ್ ಮಿತ್ರ ನಾರಾಯಣ ಬಂಗೇರರಿಗೆ ಅಭಿನಂದನಾ ಸಮಾರಂಭ

Pinterest LinkedIn Tumblr

Mumbai_abhinaden_1

ವರದಿ : ಈಶ್ವರ ಎಂ. ಐಲ್/ಚಿತ್ರ : ದಿನೇಶ್ ಕುಲಾಲ್

ಮುಂಬಯಿ: ವಿದ್ವಾನ್ ಮಿತ್ರಪಟ್ಣ ನಾರಾಯಣ ಬಂಗೇರ ಅವರಿಗೆ ಅಭಿನಂದನೆ ಸಮಾರಂಭವು ಮಾಟುಂಗ ಪಶ್ಚಿಮದ ಕರ್ನಾಟಕ ಸಂಘ ಮುಂಬಯಿ ಇದರ ಡಾ| ಎಂ. ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ಇತ್ತೀಚೆಗೆ ನಡೆಯಿತು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತೋನ್ಸೆ ವಿಜಯ ಕುಮಾರ್‌ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿ ಯಾಗಿ ವಿದ್ವಾನ್‌ ರಾಮದಾಸ ಉಪಾಧ್ಯ ರೆಂಜಾಳ, ಗೌರವಾನ್ವಿತ ಅತಿಥಿಗಳಾಗಿ ನಗರದ ಹಿರಿಯ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ, ನ್ಯಾಯವಾದಿ ಮೊಹಿದ್ದೀನ್‌ ಮುಂಡ್ಕೂರು, ಬಿಎಸ್‌ಕೆಬಿ ಅಸೋಸಿಯೇಶನ್‌ ಅಧ್ಯಕ್ಷ ಡಾ| ಸುರೇಶ್‌ ಎಸ್‌. ರಾವ್‌ ಕಟೀಲು, ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಅಜಿತ್‌ ಜಿ. ಸುವರ್ಣ, ಬಿಲ್ಲವರ ಅಸೋಸಿಯೇಶನ್‌ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್‌, ಖ್ಯಾತ ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ, ಮೊಗವೀರ ಬ್ಯಾಂಕಿನ ಕಾರ್ಯಾಧ್ಯಕ್ಷ ಸದಾನಂದ ಕೋಟ್ಯಾನ್‌, ಎಸ್‌ಎಂ ಶೆಟ್ಟಿ ಸಮೂಹ ಶಿಕ್ಷಣ ಸಂಸ್ಥೆಯ ಉಪಕಾರ್ಯಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು, ಮೊಗವೀರ ಬ್ಯಾಂಕಿನ ಉಪಕಾರ್ಯಾಧ್ಯಕ್ಷ ಸುರೇಶ್‌ ಆರ್‌. ಕಾಂಚನ್‌, ದಿನಕರ ಮಿತ್ರಪಟ್ಣ, ಜಯರಾಮ ಎ. ಶೆಟ್ಟಿ ವರ್ಲಿ ಉಪಸ್ಥಿತರಿದ್ದರು.

Mumbai_abhinaden_2 Mumbai_abhinaden_3 Mumbai_abhinaden_4 Mumbai_abhinaden_5

ವೇದಿಕೆಯಲ್ಲಿದ್ದ ಎಲ್ಲಾ ಅತಿಥಿಗಳು ನಾರಾಯಣ ಬಂಗೇರ ಮತ್ತು ಸುಶೀಲಾ ಬಂಗೇರ ದಂಪತಿಯನ್ನು ಸಮ್ಮಾನಿಸಿದರು. ವಿದ್ವಾನ್‌ ರಾಮದಾಸ ಉಪಾಧ್ಯಾಯ ಶುಭ ಹಾರೈಸಿದರು. ಸಂಜೀವ ಕೆ. ಸಾಲ್ಯಾನ್‌ ಅಭಿನಂದನ ಭಾಷಣಮಾಡಿದರು.

ಚಿನ್ನದ ಚೈನು, ಉಂಗುರ, ವಾಚು, ಪೆನ್ನು, ಇತ್ಯಾದಿಗಳನ್ನಿತ್ತು, ಶಾಲು ಹೊದೆಸಿ, ಮುಂಡಾಸು ತೊಡಿಸಿ, ಮಂಗಳೂರು ಮಲ್ಲಿಗೆಯ ಹಾರವನ್ನು ಹಾಕಿ ಅತ್ಯಾಕರ್ಷಕ ಸ್ಮರಣಿಕೆ, ಅಭಿನಂದನಾ ಫಲಕವನ್ನಿತ್ತು ದಂಪತಿಯನ್ನು ಅಭಿನಂದಿಸಿ ಗೌರವಿಸಿದರು.

ಜಗನ್ನಾಥ ಪುತ್ರನ್‌ ಪ್ರಾಸ್ತಾವಿಕ ನುಡಿ ಗಳನ್ನಾಡಿದರು. ದಯಾಸಾಗರ್‌ ಚೌಟ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ತೋನ್ಸೆ ವಿಜಯಕುಮಾರ್‌ ಶೆಟ್ಟಿ ನಿರ್ದೇಶನದ ಮೋಕ್ಷ ತುಳು ನಾಟಕ ಪ್ರದರ್ಶನಗೊಂಡಿತು.

Write A Comment