ಕನ್ನಡ ವಾರ್ತೆಗಳು

ಕಾಳಿಂಗನಿಗೂ ಬಾಯಾರಿಕೆ: ಹೊನ್ನಾವರದಲ್ಲಿ ಮಿನರಲ್ ವಾಟರ್ ಕುಡಿದ ಕಾಳಿಂಗ ಸರ್ಪ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)
ಉತ್ತರಕನ್ನಡ: ಇದು ಬಿರು ಬೇಸಿಗೆಯ ಸಮಯ. ನೀರಿನ ದಾಹವನ್ನು ಯಾರ ಕೈಯಲ್ಲೂ ತಡೆಯಲು ಕಷ್ಟವಾಗುತ್ತಿದೆ. ಅಂತೆಯೇ ಪ್ರಾಣಿ-ಪಕ್ಷಿ, ಉರಗ, ಸರಿಸ್ರಪಗಳಿಗೂ ಈ ದಾಹ ಬೇಸಿಗೆಯ ಬಿಸಿ ತಟ್ಟಿದೆ. ಯಾಕೇ ಅಂತಿರಾ….ಈ ಸಣ್ಣದೊಂದು ವರದಿ ಓದಿ.

HonnavaraKing Cobra_Drinking Water (1) HonnavaraKing Cobra_Drinking Water (4) HonnavaraKing Cobra_Drinking Water (3) HonnavaraKing Cobra_Drinking Water (2)

ಇತ್ತೀಚೆಗೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ಕಿಯ ಉರಗ ತಜ್ಞ ನಾಗರಾಜನ ಶೇಟ್ ಅವರು ತಾಲೂಕಿನ ಚಿಕ್ಕ ಹಳ್ಳಿಯಾದ ಹಡಿನಬಾಳ ಗ್ರಾಮದ ವೆಂಕಟೇಶ ನಾಯ್ಕ ಅವರ ತೋಟಕ್ಕೆ ಬಂದಿದ್ದ ಸುಮಾರು 11 ಅಡಿ ಉದ್ದದ ಕಾಳಿಂಗ ಸರ್ಪವನ್ನು ಹಿಡಿದಿದ್ದಾರೆ. ಇದೇ ವೇಳೆ ಬೇಸಿಗೆಯ ಬಿಸಿಲಿನ ಹೊಡೆತಕ್ಕೆ ನೀರಡಿಕೆಯಿಂದ ಬಳಲುತ್ತಿದ್ದ ಕಾಳಿಂಗ ಸರ್ಪಕ್ಕೆ ನಾಗರಾಜ ಶೇಟ್ ಬಾಟಲಿಯಿಂದ ಹಾವಿಗೆ ನೀರು ಕುಡಿಸಿರುವುದು ಅಲ್ಲಿ ಸೇರಿದ್ದ ಜನರಿಗೆ ನೋಡಲು ಸೋಜಿಗವೆನಿಸಿತ್ತು.

ಕೊನೆಗೂ ನೀರು ಕುಡಿದ ಕಾಳಿಂಗವನ್ನು ಸಾರ್ವಜನಿಕರಿಗೆ ಅಪಾಯವಾಗದಂತೆ ರೀತಿಯಲ್ಲಿ ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ.

ಹೊನ್ನಾವರದ ಆರ್.ಕೆ. ಸ್ಟುಡಿಯೋ ಮಾಲೀಕರಾದ ರಾಘವೇಂದ್ರ ಅವರು ಈ ಎಕ್ಸ್-ಕ್ಲ್ಯೂಸಿವ್ ಫೋಟೋ ಕ್ಲಿಕ್ಕಿಸಿದ್ದು ಈ ಫೋಟೋಗಳು ‘ಕನ್ನಡಿಗ ವರ್ಲ್ಡ್’ಗೆ ಲಭ್ಯವಾಗಿದೆ.

Write A Comment