ಕನ್ನಡ ವಾರ್ತೆಗಳು

ಎಪ್ರಿಲ್ 1ರಿಂದ,45 ದಿನಗಳ ಕ್ರಿಕೆಟ್ ಕೋಚಿಂಗ್ ಬೇಸಿಗೆ ಶಿಬಿರ

Pinterest LinkedIn Tumblr

criket_coching_class

ಮಂಗಳೂರು,ಮಾ.28: ಕ್ರಿಕೆಟ್ ಇತಿಹಾಸದಲ್ಲಿ ಮಂಗಳೂರು ಹಾಗೂ ಉಡುಪಿ ಜಿಲ್ಲೆಗಳನ್ನೊಳಗೊಂಡ ಮಂಗಳೂರು ಪ್ರೀಮಿಯರ್ ಲೀಗ್ ನಡೆಸಿಕೊಟ್ಟ ಕರ್ನಾಟಕ ರೀಜನಲ್ ಕ್ರಿಕೆಟ್ ಅಕಾಡಮಿಯು ನಿಗದಿ ಪಡೆಸಿದಂತೆ ಎಪ್ರಿಲ್ 1 ರಿಂದ,45 ದಿನಗಳ ಕ್ರಿಕೆಟ್ ಕೋಚಿಂಗ್ ಬೇಸಿಗೆ ಶಿಬಿರವು 4 ಕಡೆಗಳಲ್ಲಿ ನಡೆಸಲಿರುತ್ತದೆ.

ಕೆ‌ಆರ್‌ಸಿ‌ಎ ಕ್ರಿಕೆಟ್ ಬೇಸಿಗೆ ಶಿಬಿರ
ಮಂಗಳೂರಿನಲ್ಲಿ ಕಳೆದ ಬಾರಿ ನಡೆಸಿದ ಬೇಸಿಗೆ ಶಿಬಿರದಲ್ಲಿ ಅತ್ಯದಿಕ 150ಆಟಗಾರರನ್ನು ತರಬೇತುಪಡಿಸಿದ ಕೆ‌ಆರ್‌ಸಿ‌ಎ ಮಂಗಳೂರಿನ ಪದುವ ಹೈಸ್ಕೂಲ್ ಮೈದಾನ ನಂತೂರಿನಲ್ಲಿ ತರಬೇತಯನ್ನು ನೀಡುತ್ತಿದೆ ಅದೇ ರೀತಿ ಸುರತ್ಕಲ್‌ನ ಸೇಕ್ರೆಡ್ ಹಾರ್ಟ್ ಚರ್ಚ್ ಮೈದಾನ, ಹೆಜಮಾಡಿಯ ರಾಜೀವ್ ಗಾಂಧಿ ಮೈದಾನದಲ್ಲೂ ಹಾಗೂ ದಂಡತೀರ್ಥ ಸ್ಕೂಲ್ ಮೈದಾನ ಕಾಪುವಿನಲ್ಲಿ ತರಬೇತಿಯನ್ನು ಪಡೆದುಕೊಳ್ಳಬಹುದು.

ತರಬೇತುದಾರದು:
ನುರಿತ ತರಬೇತುದಾರರ ತಂಡದಲ್ಲಿ ಈ ಬಾರಿ ರಣಜಿ ಕ್ರಿಕೆಟ್ ಆಟಗಾರರು ಆಗಿರುವಂತಹ ಪ್ರಕಾಶ್ ಕರ್ಕೇರ ಹಾಗೂ ಆರಿಫ್ ಮುಕ್ಕರವರೂ ಸೇರಿಕೊ೦ಡಿರುವುದು ಕ್ರೀಡಾ ಪಟುಗಳಿಗೆ ಉತ್ಸಾಹ ತುಂಬುತ್ತದೆ ಎಂದು ತರಬೇತುದಾರರಾದ ಸಿರಾಜ್‌ರವರ ಅನಿಸಿಕೆ. ನುರಿತ ತರಬೇತುದಾರರನ್ನೊಳಗೊಂಡ ತಂಡದಿಂದ ತರಬೇತಿಯನ್ನು ಪಡೆಯಲು ಇಚ್ಚಿಸುವ ಯಾವುದೇ ಪ್ರಾಯದ ಕ್ರಿಕೆಟ್ ಆಸಕ್ತರು ತಮ್ಮ ಹೆಸರನ್ನು ನೊಂದಾಯಿಸಕೊಳ್ಳಬಹುದಾಗಿ ಪ್ರಕಟನೆಯಲ್ಲಿ ಸಿರಾಜುದ್ದೀನ್, ಇಮ್ತಿಯಾಜ಼ ಹಾಗೂ ಕೆನ್ಯೂಟ್ ರವರು ತಿಳಿಸಿರುತ್ತಾರೆ.

ಹುಡುಗಿಯರಿಗೆ ಉಚಿತ ತರಬೇತಿ:
ಬೇಸಿಗೆ ಶಿಬಿರ ಆಸಕ್ತಿಯುಳ್ಳ ಎಲ್ಲಾ ವಯೋಮಿತಿಯ ಹುಡುಗಿಯರಿಗೆ ಉಚಿತ ತರಬೇತಿಯನ್ನು ನೀಡುತ್ತಿರುವುದು ವಿಶೇಷತೆಯಾಗಿದೆ.

ಆಯ್ಕೆ ಪ್ರಕ್ರಿಯೆ:
ಇದೇ ಮೇ 1 ಹಾಗೂ 2ರಂದ ಆಟಗಾರರ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು ಎಲ್ಲಾ ವಿಭಾಗದಲ್ಲಿ ಆಯ್ಕೆಗೊಂಡ 20 ಆಟಗಾರರಿಗೆ ಉಚಿತ ಕ್ರಿಕೆಟ್ ಕಿಟ್ ಹಾಗೂ 1ವರ್ಷದ ಉಚಿತ ತರಬೇತಿಯನ್ನು ನೀಡಲಿದ್ದಾರೆ.

ಆಸಕ್ತಿಯುಳ್ಳವರು 1ನೇ ಮಹಡಿ ಭಾರತ್ ಬಿಲ್ಡಿಂಗ್, ಪೋಸ್ಟ್ ಆಫಿಸ್‌ನ ಹತ್ತಿರ, ಪಿ.ಎಂ ರಾವ್ ರೋಡ್, ಹಂಪನಕಟ್ಟೆ, ಮಂಗಳೂರು – 575001.
ದೂರವಾಣಿ ಸಂಖ್ಯೆ :0824- 4232652 ನ್ನು ಸಂಪರ್ಕಿಸಬಹುದು.

Write A Comment