ಅಂತರಾಷ್ಟ್ರೀಯ

ತನ್ನ ಟೀಂ ಸೋತರೂ ಅಫ್ಘಾನ್ ಆಟಗಾರರ ಖುಷಿಯಲ್ಲಿ ಭಾಗಿಯಾದ ಕ್ರಿಸ್ ಗೇಲ್!

Pinterest LinkedIn Tumblr

Nagpur: Afghanistan wicket keeper Mohammad Shahzad with West Indies player Chris Gayle after victory over West Indies during the ICC T20 World cup match played in Nagpur on Sunday. PTI Photo by Shashank Parade(PTI3_27_2016_000147A)

ನಾಗ್ಪುರ: ವಿಶ್ವಕಪ್ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಪರಾಭವಗೊಳಿಸಿದ ನಂತರ ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಆಟಗಾರರು ಖುಷಿಯಲ್ಲಿ ಕುಣಿಯುತ್ತಿದ್ದರೆ, ಕ್ರಿಸ್ ಗೇಲ್ ಕೂಡಾ ಅವರ ಜತೆ ಭಾಗಿಯಾಗಿದ್ದಾರೆ.

ಅಫ್ಘಾನ್ ಕ್ರಿಕೆಟಿಗರು ತನ್ನ ತಂಡವನ್ನು ಸೋಲಿಸಿದ್ದರೂ, ಅವರ ಗೆಲುವಿನ ಕ್ಷಣದಲ್ಲಿ ತಾನೂ ಭಾಗಿಯಾಗುವ ಮೂಲಕ ಕ್ರಿಸ್‌ಗೇಲ್ ಕ್ರಿಕೆಟ್ ಎಂಬುದು ಆಟವಷ್ಟೇ, ಅಲ್ಲಿ ಸೋಲು ಗೆಲವು ಇದ್ದದ್ದೇ. ಇಲ್ಲಿ ತಂಡಗಳ ನಡುವೆ ಯಾವುದೇ ಅಸಹನೆ, ದ್ವೇಷ ಇರುವುದಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಭಾನುವಾರ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನ ವೆಸ್ಟ್ ಇಂಡೀಸ್‌ನ್ನು 6 ರನ್‌ಗಳಿಂದ ಪರಾಭವಗೊಳಿಸಿತ್ತು. ಪಂದ್ಯ ಮುಗಿದ ನಂತರ ಅಫ್ಘಾನಿಸ್ತಾನದ ಆಟಗಾರರಿಗೆ ಅಭಿನಂದನೆ ತಿಳಿಸಲು ಕ್ರಿಸ್ ಗೇಲ್ ಮೈದಾನಕ್ಕಿಳಿದಿದ್ದರು.
ಅಲ್ಲಿ ಅಫ್ಘಾನ್ ಕ್ರಿಕೆಟಿಗರ ಜತೆ ಸ್ಟೆಪ್ ಹಾಕಿದ ಗೇಲ್ ನಂತರ ಸೆಲ್ಫೀ ಮತ್ತು ಗ್ರೂಪ್ ಫೋಟೋಗೆ ಪೋಸ್ ಕೊಟ್ಟು ಕೆಲವು ಸಂತೋಷದ ಕ್ಷಣಗಳನ್ನು ಕಳೆದರು.

Write A Comment