ಕನ್ನಡ ವಾರ್ತೆಗಳು

ಪೊಲೀಸರಿಂದ ಸಮಸ್ಯೆಯಾವುತ್ತಿದೆಯೇ? ಚಿಂತೆ ಬಿಡಿ… ದೂರು ಪ್ರಾಧಿಕಾರಕ್ಕೆ ದೂರು ಸಲ್ಲಿಸಿ

Pinterest LinkedIn Tumblr

POLICECAP1

ಉಡುಪಿ: ಉಡುಪಿ ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರವು 11/12/2014 ರಿಂದ ಅಸ್ತಿತ್ವಕ್ಕೆ ಬಂದಿರುತ್ತದೆ. ಪೊಲೀಸ್ ಉಪಾಧೀಕ್ಷಕರು ಮತ್ತು ಅವರ ಅಧೀನ ಅಧಿಕಾರಿ/ಸಿಬ್ಬಂದಿಗಳು ಕರ್ತವ್ಯ ನಿರತ ಸಮಯ/ತನಿಖೆಯ ವೇಳೆಯಲ್ಲಿ ಗಂಭೀರ ದುರ್ನಡತೆ ತೋರಿಸಿದ ಪಕ್ಷದಲ್ಲಿ ಪ್ರಾಧಿಕಾರಕ್ಕೆ ನೇರವಾಗಿ ದೂರು ಸಲ್ಲಿಸಬಹುದಾಗಿದೆ. ಅಲ್ಲದೆ ಪೊಲೀಸರಿಂದ ಮಾರಣಾಂತಿಕ ಹಲ್ಲೆ ಮತ್ತು ಪೊಲೀಸ್ ಅಧೀನದಲ್ಲಿದ್ದಾಗ ಅತ್ಯಾಚಾರ ನಡೆದಂತಹ ಪ್ರಸಂಗಗಳಲ್ಲಿ ಜಿಲ್ಲಾ ದೂರು ಪ್ರಾಧಿಕಾರಕ್ಕೆ ದೂರು ಸಲ್ಲಿಸಬಹುದಾಗಿರುತ್ತದೆ. ದೂರು ಸಲ್ಲಿಸಬೇಕಾದ ವಿಳಾಸ:

ಪೊಲೀಸ್ ಅಧೀಕ್ಷಕರು,
ಉಡುಪಿ ಜಿಲ್ಲೆ,
ಪ್ರವಾಸಿ ಮಂದಿರದ ರಸ್ತೆ, ಬನ್ನಂಜೆ, ಉಡುಪಿ – 576 101.
ದೂರವಾಣಿ ಸಂಖ್ಯೆ: 0820 – 2534777
ಇ – ಮೇಲ್ ಐಡಿ spudp@ksp.gov.in

ಅಡಿಷನಲ್ ಎಸ್ಪಿ ಮತ್ತು ಮೇಲಿನ ಹುದ್ದೆಯ ಅಧಿಕಾರಿಗಳ ವಿರುದ್ಧ ಮೇಲೆ ತಿಳಿಸಿದಂತಹ ದೂರು ಸಲ್ಲಿಸುವಂತಿದ್ದಲ್ಲಿ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರಕ್ಕೆ ದೂರನ್ನು ಸಲ್ಲಿಸಬಹುದಾಗಿದ್ದು, ಅದರ ವಿಳಾಸ ಈ ಕೆಳಕಂಡಂತಿದೆ. ದೂರು ಸಲ್ಲಿಸಬೇಕಾದ ವಿಳಾಸ:

ಅಧ್ಯಕ್ಷರು,
ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರಿ,
ಕೊಠಡಿ ಸಂ: 36, ನೆಲಮಹಡಿ,
ವಿಕಾಸ ಸೌಧ, ಬೆಂಗಳೂರು -560 001.
ದೂರವಾಣಿ ಸಂಖ್ಯೆ. 080- 22386063/2203 4220.

 

(ಸಾಂದರ್ಭಿಕ ಚಿತ್ರ)

Write A Comment