ಕನ್ನಡ ವಾರ್ತೆಗಳು

ಎಸ್ಸೆಸ್ಸೆಫ್ ಕ್ಯಾಂಪಸ್ ಉಳ್ಳಾಲ ‘ಟೀನ್ ಮೀಟ್’

Pinterest LinkedIn Tumblr

ullala_teen_meet

ಮಂಗಳೂರು,ಮಾ.21: ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ ಫೆಡರೇಶನ್ ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಕ್ಯಾಂಪಸ್ ವತಿಯಿಂದ ಸಂಘಟನೆಯ ಕಾರ್ಯಾಲಯ ಸ್ಟುಡೆಂಟ್ಸ್ ಹೌಸ್‌ನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸಮ್ಮಿಲನ ‘ಟೀನ್ ಮೀಟ್’ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಉದ್ಘಾಟನೆಯನ್ನು ಸೆಯ್ಯಿದ್ ಮದನಿ ಕಾಲೇಜ್ ಆಫ್ ಇಸ್ಲಾಮಿಕ್ ಸೈನ್ಸ್ ಇದರ ವಿದ್ಯಾರ್ಥಿ ಹಸೈನಾರ್ ಮೇಲಂಗಡಿ ನೆರವೇರಿಸಿ, ನಂತರ ಮೌಲಿದ್ ಪಠಿಸಿ, ಇತ್ತೀಚೆಗೆ ನಮ್ಮನ್ನಗಲಿದ ತಸ್ಲೀಮ್ ಸಖಾಫಿಯವರ ಮೇಲೆ ತಹ್ಲೀಲ್ ಸಮರ್ಪನೆಗೆ ನೇತೃತ್ವ ನೀಡಿದರು. ಉಳ್ಳಾಲ ನಗರೆಸಭೆಗೆ ನೂತನಾಧ್ಯಕ್ಷರಾಗಿ ಆಯ್ಕೆಯಾದ ಹುಸೈನ್ ಕುಂಞ್ಙಮೋನುರವರನ್ನು ಇದೇ ವೇಳೆ ಸನ್ಮಾನಿಸಲಾಯಿತು ತದನಂತರ ಮಾತನಾಡಿ ಇದೊಂದು ಉತ್ತಮ ಕಾರ್ಯಕ್ರಮವಾಗಿದ್ದು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮತ್ತು ಆತ್ಮವಿಶ್ವಾಸ ವೃದ್ದಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದರು. ಖ್ಯಾತ ಮರ್ಕಝ್ ಇಹ್ರಾಮ್ ಸಂಸ್ಥೆಯ ತರಬೇತುದಾರರಾದ ಸೈಯ್ಯಿದ್ ಸೈಫುದ್ದೀನ್ ಸರ್ ವಿದ್ಯಾರ್ಥಿಗಳೊಂದಿಗೆ ದೇಹ ಫಿಟ್‌ನೆಸ್ ಕುರಿತು ಸಂವಾದ ನಡೆಸಿದರು. ಕ್ಯಾಂಪಸ್ ನಿರ್ದೇಶಕರಾದ ಮುಸ್ತಫಾ ಸರ್. ಪ್ರೊ. ಕಲೀಲ್ ಸಖಾಫಿ, ಮುಹ್ಸಿನ್ ಸರ್, ಅನ್ಸಾರ್ ಮಾಸ್ಟರ್ ಕೊಣಾಜೆ ಮತ್ತು ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಕೋಶಾಧಿಕಾರಿ ಇಲ್ಯಾಸ್ ಕೈಕೋ, ಅಹ್ಸನ್ ಮುಕ್ಕಚ್ಚೇರಿ, ಡಿವಿಶನ್ ಕ್ಯಾಂಪಸ್ ಕಾರ್ಯದರ್ಶಿ ಸಫೀರ್ ರೆಂಜಾಡಿ ಉಪಸ್ಥಿತರಿದ್ದರು.

ಹಫೀಝ್ ತೋಟ, ನೌಫಲ್ ಕೋಡಿ, ಸಲ್ಮಾನ್ ಅಕ್ಕೆರೆಕೆರೆ, ಸಮೀರ್ ಮುಕ್ಕಚ್ಚೇರಿ, ತಶ್ರೀಫ್ ಮೇಲಂಗಡಿ, ಹಿಲಾಲ್ ಬಸ್ತಿಪಡು, ಕಾರ್ಯಕ್ರಮದ ಯಶಸ್ಸಿಗಾಗಿ ದುಡಿದರು. ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ತಾಜುದ್ದೀನ್ ಹಳೆಕೋಟೆ ಕಾರ್ಯಕ್ರಮ ನಿರೂಪಿಸಿದರು.

Write A Comment