ಕನ್ನಡ ವಾರ್ತೆಗಳು

ಕರವೇ ವತಿಯಿಂದ ಮಂಗಳೂರಿನಲ್ಲಿ ಕನ್ನಡಯೋತ್ಸವ ಆಚರಣೆ

Pinterest LinkedIn Tumblr

karave_twnhall_1

ಮಂಗಳೂರು,ಮಾ.14 :  ಕರ್ನಾಟಕ ರಕ್ಷಣಾ ವೇದಿಕೆ ದಕ್ಷಿಣ ಕನ್ನಡ ಜಿಲ್ಲಾ ಘಟಕ ಮತ್ತು ದಾಸ್ ಚಾರಿಟೇಬಲ್ ಸೇವಾ ಟ್ರಸ್ಟ್ ಇದರ 3ನೇ ವರ್ಷದ ಸಾಮಾಜಿಕ ಸೇವಾ ಕಾರ್ಯಕ್ರಮದಂಗವಾಗಿ ಭಾನುವಾರ ನಗರದ ಪುರಭವನದಲ್ಲಿ ಕನ್ನಡಯೋತ್ಸವ 2016 ರನ್ನು ಮಾಣಿಲ ಕ್ಷೇತ್ರದ ಮೋಹನದಾಸ ಸ್ವಾಮೀಜಿ ಹಾಗೂ ಮುಸ್ಲೀಂ ಧರ್ಮ ಗುರು ಮೌಲಾನ ಸಹದಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ರಾಜಕೀಯ ಪ್ರೇರಿತ ಶಕ್ತಿಗಳಿಂದ ದ.ಕ. ಜಿಲ್ಲೆಯಲ್ಲಿ ಕೋಮುಸಂಘರ್ಷ ಉಂಟಾಗುತ್ತಿದ್ದು, ಸಂಘರ್ಷವನ್ನು ಮೂಲೆಗುಂಪು ಮಾಡಿ ಜಿಲ್ಲೆಯ ಜನತೆ ಸ್ನೇಹಸೇತು ನಿರ್ಮಿಸಬೇಕೆಂದು ಮುಸ್ಲಿಂ ಧರ್ಮ ಗುರು ಶಾಫಿ ಸಅದಿ ಅವರು ಹೇಳಿದರು.

ಈ ವೇಳೆ ಆಶೀರ್ವಚನ ನೀಡಿದ ಮೋಹನದಾಸ ಸ್ವಾಮೀಜಿ ಮಾಣಿಲ ಅವರು ಮಾತನಾಡಿ, ಎತ್ತಿನಹೊಳೆ ಯೋಜನೆ ಮೂಲಕ ನೇತ್ರಾವತಿ ತಿರುವು ಅನುಷ್ಠಾನಗೊಳಿಸಲು ರಾಜಕಾರಣಿಗಳು ಪ್ರಯತ್ನಿಸುತ್ತಿದ್ದು, ಈ ಯೋಜನೆಯು ಅಜ್ಞಾನದ ಅಂಧಕಾರವಾಗಿದೆ. ಜನಪ್ರತಿನಿಧಿಗಳು ತಮ್ಮ ಬೊಕ್ಕಸ ಹೆಚ್ಚಿಸಲು ಮಾಡಿದ ಯೋಜನೆಯಾಗಿದೆ ಎಂದರು.

karave_twnhall_2 karave_twnhall_3 karave_twnhall_4 karave_twnhall_5 karave_twnhall_6 karave_twnhall_7 karave_twnhall_8 karave_twnhall_9 karave_twnhall_10 karave_twnhall_11

ದಾಸ್ ಚಾರಿಟೇಬಲ್ ಸೇವಾ ಟ್ರಸ್ಟಿಗಳಾದ ಅನಿಲ್ ದಾಸ್ , ಆಶಾಲತಾ ದಾಸ್, ಮೂಡ ಮಾಜಿ ಅಧ್ಯಕ್ಷ ಸುರೇಶ್ ಬಲ್ಲಾಳ್, ಸಮಾಜ ಸೇವಕ ಯಜ್ಞೇಶ್ ಬರ್ಕೆ, ಕರವೇ ಉಡುಪಿ ಮತ್ತು ದ.ಕ ಜಿಲ್ಲಾ ಉಸ್ತುವಾರಿ ತೇಗೂರು ಜಗದೀಶ್ ಅರಸು ಚಿಕ್ಕಮಂಗಳೂರು, ಕರವೇ ರಾಜ್ಯ ಪ್ರದಾನ ಸಂಚಾಲಕ ಬಸವರಾಜು ಪಡುಕೋಟೆ, ಮಹಿಳಾ ಘಟಕ ರಾಜ್ಯ ಉಪಾಧ್ಯಕ್ಷರು ಅಶ್ವಿನಿ ಗೌಡ, ರಾಜ್ಯ ಸಂಚಾಲಕಿ ಶಾರಿಕಾ, ಪ್ರಾಚಿ, ಚಲನಚಿತ್ರ ನಿರ್ಮಾಪಕ ಅಶುಬಿದ್ರ, ನಟಿ ಮೇಘನಾ ಮೊದಲಾದವರು ಉಪಸ್ಥಿತರಿದ್ದರು.

 

Write A Comment