
ವರದಿ ಹಾಗೂ ಚಿತ್ರಗಳು : ಸತೀಶ್ ಕಾಪಿಕಾಡ್
ಮಂಗಳೂರು, ಮಾ.12: ನಗರದ ಕದ್ರಿಹಿಲ್ಸ್‌ನಲ್ಲಿ ನಿರ್ಮಾಣಗೊಂಡಿರುವ, 40 ಅಂತಸ್ತುಗಳ ರಾಜ್ಯದ ಅತ್ಯಂತ ಎತ್ತರದ ವಸತಿ ಸಂಕೀರ್ಣ ‘ಪ್ಲಾನೆಟ್ ಎಸ್‌ಕೆಎಸ್’ ಶನಿವಾರ ಲೋಕಾರ್ಪಣೆಗೊಂಡಿತು.
ಈ ಯೋಜನೆಯ ಶಿಲಾನ್ಯಾಸ ಸಂದರ್ಭದಲ್ಲಿ ಉಪಸ್ಥಿತರಿದ್ದ ಕುಟುಂಬಸ್ಥರಾದ ಶ್ರೀಮತಿ ಸುಶೀಲಾ ಜನಾರ್ದನ ಶೆಟ್ಟಿ, ಶ್ರೀಮತಿ ಲೀಲಾವತಿ ಸುಧಾಕರ ಹೆಗ್ಡೆ, ಶ್ರೀಮತಿ ವಿಮಲಾ ಸೋಮೇಶ ಶೆಟ್ಟಿ ಅವರು ‘ಪ್ಲಾನೆಟ್ ಎಸ್‌ಕೆಎಸ್’ ( A.B.C ಬ್ಲಾಕ್ )ನ ಉದ್ಘಾಟನೆಯನ್ನು ನೆರವೇರಿಸಿದರು.
ಸಂಸದ ನಳಿನ್ ಕುಮಾರ್ ಕಟೀಲ್, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್, ಏರ್ಯ ಲಕ್ಷ್ಮೀ ನಾರಾಯಣ ಆಳ್ವ, ಕ್ರೈಡೈ ಅಧ್ಯಕ್ಷ ಡಿ.ಬಿ.ಮೆಹ್ತಾ, ಮಾಜಿ ಅಧ್ಯಕ್ಷರಾದ ಪುಷ್ಪರಾಜ್ ಜೈನ್, ಕೆ.ಸಿ.ನಾಯಕ್, ಉದ್ಯಮಿಗಳಾದ ಎ.ಜೆ.ಶೆಟ್ಟಿ, ಹರ್ಷದ್, ದೇವಾನಂದ ಶೆಟ್ಟಿ, ಗಣೇಶ್ ಶೆಟ್ಟಿ, ಡಾ. ಶಾಂತರಾಮ್ ಶೆಟ್ಟಿ ಹಾಗೂ ಮಂಗಳೂರು, ಬೆಂಗಳೂರು, ಮುಂಬಾಯಿ ಹಾಗೂ ದುಬಾಯಿಯ ಹಲವಾರು ಉದ್ಯಮಿಗಳು, ಬಿಲ್ಡರ್‌ಗಳು ಕಾರ್ಯಕ್ರಮಕ್ಕೆ ಆಗಮಿಸಿ ಅಭಿನಂದನೆ ಸಲ್ಲಿಸಿದರು.
ಪ್ಲಾನೆಟ್ ಎಸ್‌ಕೆಎಸ್’ ಯೋಜನೆಯ ಇನ್ನೋರ್ವ ಪ್ರವರ್ತಕ ಹಾಗೂ ಆರ್ಕಿಟೆಕ್ಟ್ ಸನತ್ ಕುಮಾರ್ ಶೆಟ್ಟಿ, ಶಶಿ ಕಿರಣ್ ಶೆಟ್ಟಿ ಅವರ ಪುತ್ರ ಪ್ಲಾನೆಟ್ ಎಸ್‌ಕೆಎಸ್’ನ ಸಹ ಪ್ರವರ್ತಕರಾದ ವೈಷ್ಣವ್ ಶೆಟ್ಟಿ ,ಶ್ರೀಮತಿ ಆರತಿ ಶಶಿಕಿರಣ್ ಶೆಟ್ಟಿ, ಆದರ್ಶ್ ಹೆಗ್ಡೆ, ಉಮೇಶ್ ಶೆಟ್ಟಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು,


ಗೌರವ ಸನ್ಮಾನ :
ಇದೇ ಸಂದರ್ಭದಲ್ಲಿ ಎಸ್‌ಕೆಎಸ್ ನೆಟ್‌ಗೇಟ್ ಎಲ್‌ಎಲ್‌ಪಿ ಹಾಗೂ ಪ್ಲಾನೆಟ್ ಎಸ್‌ಕೆಎಸ್ ಯೋಜನೆಯ ಪ್ರಧಾನ ಪ್ರವರ್ತಕ ಶಶಿಕಿರಣ ಶೆಟ್ಟಿ ಹಾಗೂ ಪ್ಲಾನೆಟ್ ಎಸ್‌ಕೆಎಸ್’ ಯೋಜನೆಯ ಇನ್ನೋರ್ವ ಪ್ರವರ್ತಕ ಹಾಗೂ ಆರ್ಕಿಟೆಕ್ಟ್ ಸನತ್ ಕುಮಾರ್ ಶೆಟ್ಟಿ ಇವರನ್ನು ಕ್ರೆಡೈ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಪ್ಲಾನೆಟ್ ಎಸ್‌ಕೆಎಸ್ ಬಗ್ಗೆ ಮಾಹಿತಿ ನೀಡಿದ ಎಸ್‌ಕೆಎಸ್ ನೆಟ್‌ಗೇಟ್ ಎಲ್‌ಎಲ್‌ಪಿ ಹಾಗೂ ಪ್ಲಾನೆಟ್ ಎಸ್‌ಕೆಎಸ್ ಯೋಜನೆಯ ಪ್ರಧಾನ ಪ್ರವರ್ತಕ ಶಶಿಕಿರಣ ಶೆಟ್ಟಿ ಅವರು, 2010ರ ಡಿ.15ರಂದು ಪ್ಲಾನೆಟ್ ಎಸ್‌ಕೆಎಸ್ ಯೋಜನೆಗೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಕಾಮಗಾರಿ ಆರಂಭಿಸಿ ನಾಲ್ಕೂವರೆ ವರ್ಷದಲ್ಲಿ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲು ನಿರ್ಧರಿಸಲಾಗಿತ್ತು. ಕೆಲವೊಂದು ಅಡಚಣೆಗಳ ನಡುವೆ ಐದು ವರ್ಷಗಳಲ್ಲಿ ಅತ್ಯಂತ ಸುಂದರ ವಿನ್ಯಾಸದಲ್ಲಿ ಪ್ರತಿಷ್ಠಿತ ಯೋಜನೆ ಪೂರ್ಣಗೊಂಡಿದೆ ಎಂದರು.
ಪ್ಲಾನೆಟ್ ಎಸ್‌ಕೆಎಸ್ ವಸತಿ ಸಮುಚ್ಚಯ ಯೋಜನೆ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಕದ್ರಿಹಿಲ್ಸ್‌ನ 4.55 ಎಕ್ರೆ ಪ್ರದೇಶದಲ್ಲಿ 125 ಮೀಟರ್ ಎತ್ತರದಲ್ಲಿ 9,20,000 ಚದರ ಅಡಿ ವಿಸ್ತೀರ್ಣದಲ್ಲಿ ಮೂರು ತಳ ಅಂತಸ್ತುಗಳು,ಒಂದು ನೆಲಮಹಡಿ ಮತ್ತು 36 ಅಂತಸ್ತುಗಳಲ್ಲಿ 171 ಫ್ಲಾಟ್‌ಗಳೊಂದಿಗೆ ನಿರ್ಮಾಣಗೊಂಡಿದೆ. 430 ಕಾರ್‌ಗಳ ಪಾರ್ಕಿಂಗ್ ಸೌಲಭ್ಯವನ್ನು ಹೊಂದಿದೆ.
ಈ ವಸತಿ ಸಮುಚ್ಚಯದಲ್ಲಿ ತಲಾ 3,300 ಚದರ ಅಡಿ ವಿಸ್ತೀರ್ಣದ 3 ಬೆಡ್‌ರೂಮ್‌ಗಳ 126 ಫ್ಲಾಟ್‌ಗಳು, ತಲಾ 6,600 ಚದರ ಅಡಿ ವಿಸ್ತೀರ್ಣದ 45 ಫ್ಲಾಟ್‌ಗಳು (21ರಿಂದ 36 ಅಂತಸ್ತುಗಳವರೆಗೆ) ನಿರ್ಮಾಣಗೊಂಡಿವೆ. ವಸತಿ ಸಮುಚ್ಚಯ ಲಾರ್ಸನ್ ಆ್ಯಂಡ್ ಟೂಬ್ರೊ ಲಿಮಿಟೆಡ್ ಕಂಪೆನಿಯ ಮೂಲಕ ನಿರ್ಮಾಣಗೊಂಡಿದೆ.
ಮಿತ್ಸುಬಿಶಿ ಕಂಪೆನಿಯ 7 ಲಿಫ್ಟ್‌ಗಳನ್ನು ಹೊಂದಿದ್ದು, ನಿರಂತರ ವಿದ್ಯುತ್ ಪೂರೈಕೆ, ತುರ್ತು ವೈದ್ಯಕೀಯ ಸೇವಾ ಸೌಲಭ್ಯ, ಆ್ಯಂಬುಲೆನ್ಸ್ ಹಾಗೂ ವಿಶಿಷ್ಟ ವಿನ್ಯಾಸದ ಕಿಟಕಿಗಳನ್ನು ಹೊಂದಿದೆ. ಇದಲ್ಲದೆ ಹೊನಲು ಬೆಳಕಿನ ಟೆನ್ನಿಸ್ ಕೋರ್ಟ್, ಒಳಾಂಗಣ ಬ್ಯಾಡ್ಮಿಂಟನ್ ಕೋರ್ಟ್, ಸ್ವಾಶ್ ಕೋರ್ಟ್, ಬಾಸ್ಕೆಟ್ ಬಾಲ್ ರಿಂಗ್, ಬಿಲಿಯರ್ಡ್ಸ್, ಕೇರಂ, ಟೇಬಲ್ ಟೆನ್ನಿಸ್, ಸ್ಪಾ, ಯೋಗ ಕೇಂದ್ರ, ಜಿಮ್,ಗಾಲ್ಫ್ , ಈಜುಕೊಳ, ಸಭಾಂಗಣ, ಸಿನೆಮಾ ಥಿಯೇಟರ್, ಜಾಗಿಂಗ್ ಮತ್ತು ಸ್ಕೇಟಿಂಗ್ ಟ್ರಾಕ್, ಸೂಪರ್ ಮಾರ್ಕೆಟ್, ಕಾಫಿ ಶಾಪ್, ಹೊರಾಂಗಣದ ವಿಶಾಲ ಪ್ರಾಂಗಣವನ್ನು ಹೊಂದಿದೆ. (ಪ್ಲಡ್‌ಲಿಟ್ ಟೆನ್ನಿಸ್ ಕೋರ್ಟ್, ಇಂಡೋರ್ ಬ್ಯಾಡ್‌ಮಿಂಟನ್ ಕೋರ್ಟ್, ಸ್ಕ್ವಾಶ್ ಕೋರ್ಟ್, ಬಾಸ್ಕೆಟ್‌ಬಾಲ್ ರಿಂಕ್, ಬಿಲಿಯರ್ಡ್, ಕೇರಂ, ಟೇಬಲ್ ಟೆನ್ನಿಸ್, ಸ್ಪಾ, ಯೋಗಾ ರೂಂ, ಜಿಮ್‌ನಿಂದ ಕೂಡಿದ ಕ್ಲಬ್ ಹೌಸ್ ಪ್ಲಾನೆಟ್ ಎಸ್‌ಕೆಎಸ್‌ನ ವಿಶೇಷತೆಯಾಗಿದೆ.ದೊಡ್ಡವರು ಮತ್ತು ಮಕ್ಕಳಿಗಾಗಿ ಗಾಲ್ಫ್ ಸಿಮ್ಯುಲೇಟರ್ ಮತ್ತು ಸ್ವಿಮ್ಮಿಂಗ್ ಪೂಲ್‌ಗಳು, ಮೀಟಿಂಗ್ ಹಾಲ್, ಸಿನೆಮಾ ಥಿಯೇಟರ್, ಜಾಗಿಂಗ್ ಮತ್ತು ಸ್ಕೇಟಿಂಗ್ ಟ್ರಾಕ್, ಸೂಪರ್ ಮಾರ್ಕೆಟ್, ಕಾಫಿ ಶಾಪ್, ಔಟ್‌ಡೋರ್ ಲ್ಯಾಂಡ್‌ಸ್ಕೇಪ್ ಟೆರೆಸ್ ಏರಿಯಾವನ್ನು ಈ ಕಟ್ಟಡ ಹೊಂದಿದೆ) ಎಂದು ಶಶಿಕಿರಣ್ ಶೆಟ್ಟಿ ತಿಳಿಸಿದರು.
ಪರಿಸರ ಸಹ್ಯ ಮತ್ತು ನವೀಕರಿಸಬಹುದಾದ ಇಂಧನ ವ್ಯವಸ್ಥೆ :
ಪ್ಲಾನೆಟ್ ಎಸ್‌ಕೆಎಸ್ ಕಟ್ಟಡದ ಆಂತರಿಕ ಮತ್ತು ಬಾಹ್ಯ ಪ್ರದೇಶಗಳು ಸೌರ ಮತ್ತು ಪವನ ಶಕ್ತಿ ಚಾಲಿತ ವ್ಯವಸ್ಥೆಯನ್ನು ಹೊಂದಿದ್ದು, ಹಸಿರು ಪರಿಸರ, ನೈಸರ್ಗಿಕ ಸೌರಶಕ್ತಿ, ಗಾಳಿಯಂತ್ರದೊಂದಿಗೆ ನಿರಂತರ ವಿದ್ಯುತ್ ಪೂರೈಕೆ, ಬಿಸಿನೀರು ವ್ಯವಸ್ಥೆಗಾಗಿ ಸೋಲಾರ್ ವಾಟರ್ ಹೀಟರ್‌ಗಳು ಮತ್ತು ತಾಪಮಾನ ನಿಯಂತ್ರಣಕ್ಕಾಗಿ ಆ್ಯಕ್ಟಿವ್ ಸಿಸ್ಟಮ್ ಹೀಟ್ ಪಂಪ್ ವ್ಯವಸ್ಥೆಯನ್ನೂ ಒದಗಿಸಲಾಗಿದೆ. ಎಲ್‌ಇಡಿ ಲೈಟ್ ಅಳವಡಿಸಲಾಗಿದ್ದು, ಅಪಾರ್ಟ್‌ಮೆಂಟ್‌ಗಳೆಲ್ಲವೂ ಗರಿಷ್ಠ ಪ್ರಾಕೃತಿಕ ಗಾಳಿ ಬೆಳಕಿನಿಂದ ಕೂಡಿರುವುದರಿಂದ ಕಡಿಮೆ ವಿದ್ಯುತ್ ಬಳಕೆಗೆ ಒತ್ತು ನೀಡಲಾಗಿದೆ.100 ಸಿಸಿ ಟಿ.ವಿ.ಯೊಂದಿಗೆ ಸುರಕ್ಷತಾ ವ್ಯವಸ್ಥೆ, ಬಯೋಮೆಟ್ರಿಕ್ ಲಾಕ್, ದಕ್ಷ ಮೇಲ್ವಿಚಾರಣಾ ವ್ಯವಸ್ಥೆಯನ್ನು ಹೊಂದಿದೆ. ಕಲುಷಿತ ನೀರಿನ ಮರುಬಳಕೆ, ಕೊಳಚೆ ನೀರು ಸಂಸ್ಕರಣಾ ಘಟಕ, ಸ್ವಯಂಚಾಲಿತ ಸಾವಯವ ತ್ಯಾಜ್ಯ ಪರಿವರ್ತಕ, ಮಳೆ ನೀರು ಕೊಯ್ಲು, ಸುಸ್ಥಿರ ಹಸಿರು ವಿನ್ಯಾಸ, ಹಣ್ಣಿನ ತೋಟ, ಅಡಿಕೆ ತೋಟ, 20,000 ಚದರ ಅಡಿ ವಿಸ್ತೀರ್ಣದ ಹಸಿರು ಹುಲ್ಲುಹಾಸಿನ ಅಂಗಳದೊಂದಿಗೆ ತೆಂಗಿನ ಮರಗಳ ಪ್ರಾಂಗಣವನ್ನು ಹೊಂದಿದ್ದು, ಸುತ್ತಮುತ್ತಲು ಹಸಿರು ಕಂಗೊಳಿಸುತ್ತದೆ ಎಂದು ಶಶಿಕಿರಣ್ ಶೆಟ್ಟಿ ತಿಳಿಸಿದರು.

ಉದ್ಘಾಟನೆಯಾಗುವ ಮೊದಲೇ ಪ್ರತಿಷ್ಠಿತ ಪ್ರಶಸ್ತಿ :
ಉದ್ಘಾಟನೆಯಾಗುವ ಮೊದಲೇ ಹಲವು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಪಾತ್ರವಾಗಿದೆ ಪ್ಲಾನೆಟ್ ಎಸ್‌ಕೆಎಸ್. 2011ರಲ್ಲಿ ಆರ್ಟಿಸ್ಟ್ಸ್ ಇನ್ ಕಾಂಕ್ರೀಟ್ ಅವಾರ್ಡ್ಸ್.2012 ರಲ್ಲಿ ಕ್ರೆಡೈ ಮೋಸ್ಟ್ ಎಮರ್ಜಿಂಗ್ ಡೆವಲಪರ್ಸ್ ಪ್ರಶಸ್ತಿ. 2014 ರಲ್ಲಿ ಬ್ರಿಟಿಶ್ ಸೇಫ್ಟಿ ಕೌನ್ಸಿಲ್‌ನಿಂದ ಇಂಟರ್‌ನ್ಯಾಶನಲ್ ಸೇಫ್ಟಿ ಅವಾರ್ಡ್. 2015 ರಲ್ಲಿ ಸಿಎನ್‌ಬಿಸಿ ಆವಾಝ್‌ನಿಂದ ಬೆಸ್ಟ್ ರೆಸಿಡೆನ್ಶಿಯನಲ್ ಪ್ರಾಜೆಕ್ಟ್ ಇನ್ ಟೈರ್ 2 ಸಿಟಿ ಅಂಡರ್ ಅಲ್ಟ್ರಾ ಲಕ್ಸುರಿ ಸೆಗ್ಮೆಂಟ್ ಪ್ರಶಸ್ತಿ. 2016 ರಲ್ಲಿ ಎಸಿಇಎಫ್‌ನಿಂದ ಬೆಸ್ಟ್ ಪ್ರಾಜೆಕ್ಟ್ ಪ್ರಶಸ್ತಿ ಎಸ್‌ಕೆಎಸ್‌ಗೆ ಬಂದಿದೆ ಎಂದು ಶಶಿಕಿರಣ್ ಶೆಟ್ಟಿ ತಿಳಿಸಿದರು.
ಪ್ಲಾನೆಟ್ ಎಸ್‌ಕೆಎಸ್ ವಿಶೇಷತೆಗಳು
* ಕಟ್ಟಡದ ಎತ್ತರ 125 ಮೀಟರ್ * 40 ಮಹಡಿಗಳು (3 ಬೇಸ್‌ಮೆಂಟ್‌ಗಳು, ಗ್ರೌಂಡ್ ಫ್ಲೋರ್ ಮತ್ತು 36 ಮಹಡಿಗಳು)
* 171 ಅಪಾರ್ಟ್‌ಮೆಂಟ್‌ಗಳು
* 430 ಕಾರುಗಳಿಗೆ ಪಾರ್ಕಿಂಗ್ ಸೌಲಭ್ಯ
* 3 ಬೆಡ್‌ರೂಂಗಳ (3300 ಚದರ ಅಡಿ ವಿಸ್ತೀರ್ಣ) 126 ಅಪಾರ್ಟ್‌ಮೆಂಟ್‌ಗಳು (ನೆಲಮಹಡಿಯಿಂದ 20ನೆ ಮಹಡಿವರೆಗೆ)
* ನಾಲ್ಕು ಬೆಡ್ ರೂಂಗಳ (6600 ಚದರ ಅಡಿ ವಿಸ್ತೀರ್ಣ) 45 ಅಪಾರ್ಟ್‌ಮೆಂಟ್‌ಗಳು (21ನೆ ಮಹಡಿಯಿಂದ 36ನೆ ಮಹಡಿವರೆಗೆ).
ಹೆಚ್ಚಿನ ಚಿತ್ರಗಳನ್ನು ನಿರೀಕ್ಷಿಸಿ..