ಕನ್ನಡ ವಾರ್ತೆಗಳು

ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸ್ವಾರ್ಥರಹಿತ ಶಿಕ್ಷಣ ನೀಡುತ್ತಿರುವ ಶ್ರೀ ಗೋಕರ್ಣನಾಥೇಶ್ವರ ಕಾಲೇಜು : ಶ್ರೀ ಕೋಟ ಶ್ರಿನಿವಾಸ ಪೂಜಾರಿ

Pinterest LinkedIn Tumblr

gokarntha_college_day_1

ಮಂಗಳೂರು,ಮಾ.11 : ವಿದ್ಯೆಯನ್ನು ಮಾರಾಟಮಾಡಿ, ವ್ಯಾಪಾರೀಕರಣಗೊಳಿಸುತ್ತಿರುವ ಇಂದಿನ ಸಂದರ್ಭದಲ್ಲಿ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದ್ದು ಉನ್ನತ ಶಿಕ್ಷಣದಿಂದ ಅವಕಾಶ ವಂಚಿತರಾಗಬೇಕಾಗಿದ್ದ ಸಮಾಜದ ಕಟ್ಟಕಡೆಯ ಜನರಿಗೂ ಯಾವುದೇ ತರದ ಸ್ವಾರ್ಥ ಇಲ್ಲದೆ ಶಿಕ್ಷಣ ನೀಡುತ್ತಿರುವ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನಂತಹ ಸಮಾಜಮುಖಿ ಶಿಕ್ಷಣ ಸಂಸ್ಥೆಗಳು ಇಂದಿನ ಅಗತ್ಯವಾಗಿದೆ, ಕನಸುಗಳನ್ನು ಕಟ್ಟುವುದು ಸುಲಭ ಆದರೆ ಅವುಗಳನ್ನು ನನಸಾಗಿಸುವುದು ಬಹು ಕಷ್ಟ, ಆದರೆ ಈ ನಿಟ್ಟಿನಲ್ಲಿ ಮಾನ್ಯ ಬಿ ಜನಾರ್ಧನ ಪೂಜಾರಿಯವರು ತನ್ನ ಕನಸನ್ನು ಈ ಸಂಸ್ಥೆಯ ಮೂಲಕ ನನಸಾಗಿಸಿದ್ದಾರೆ. ಕಡು ಬಡತನದಲ್ಲಿ ಹುಟ್ಟಿದ ಮಗು ಕೂಡಾ ಶಿಕ್ಷಣ ಪಡೆಯುವುದು ಈ ಸಂಸ್ಥೆಯಿಂದ ಸಾಧ್ಯವಾಗಿದೆ. ಈ ದೇಶದಲ್ಲಿ ನಮ್ಮ ಜನರಿಗೆ ಯಾವ ರೀತಿಯ ಶಿಕ್ಷಣ ಬೇಕು ಎನ್ನುವ ಬಗ್ಗೆ ಕಳೆದ 60 ವರ್ಷಗಳಲ್ಲಿ ಚರ್ಚೆ ಮಾತ್ರ ನಡೆದಿದೆ. ಹಿರಿಯರು ಹಾಕಿಕೊಟ್ಟ ಯೋಜನೆ, ಯೋಚನೆಗಳಿಂದಾಗಿ ಕರಾವಳಿ ಜಿಲ್ಲೆಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಸಾಧನೆಗಳಾಗಿವೆ .

ಈ ರೀತಿ ನುಡಿದವರು ಮಾಜಿ ಸಚಿವರು ಹಾಗೂ ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ ಕೋಟ ಶ್ರಿನಿವಾಸ ಪೂಜಾರಿ ಯವರು. ಮಾ.09 ರಂದು ಸಂಜೆ ಕಾಲೇಜಿನ ಆವರಣದಲ್ಲಿ ಜರುಗಿದ ವಾರ್ಷಿಕೋತ್ಸವ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.

gokarntha_college_day_2

ವಿದ್ಯಾರ್ಥಿಗಳಿಂದ ಪ್ರಾರ್ಥನೆಯೊಂದಿಗೆ ಆರಂಭವಾದ ಸಭಾ ಕಾರ್ಯಕ್ರಮದಲ್ಲಿ ಸಂಚಾಲಕರಾದ ಶ್ರೀ ಯಸ್ ಜಯವಿಕ್ರ್‌ಮ್ ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ಪ್ರಾಂಶುಪಾಲರಾದ ಡಾ. ಗಂಗಾಧರ್ ಕಾಲೇಜಿನ ವಾರ್ಷಿಕ ವರದಿಯನ್ನು ಸಭೆಯ ಮುಂದಿಟ್ಟರು. ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ನವೀನ್‌ಚಂದ್ರ ಅತಿಥಿ ಸ್ಥಾನದಿಂದ ಮಾತನಾಡಿ ಶಿಕ್ಷಣದ ಅವಕಾಶವನ್ನು ನೀಡಿರುವ ಸಂಸ್ಥೆಯನ್ನು ಮರೆಯದಿರಿ ಎನ್ನುವ ಕಿವಿ ಮಾತನ್ನು ಹೇಳಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಉಪ ಕುಲಸಚಿವರಾದ ಶ್ರೀ ಪ್ರಭಾಕರ ನೀರ್‌ಮಾರ್ಗ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಅವರು ಮಾತನಾಡುತ್ತಾ ಬ್ರಹ್ಮ ಶ್ರೀ ನಾರಾಯಣ ಗುರುಗಳ ತತ್ವದಂತೆ ಸ್ಟಾಪಿಸಲ್ಪಟ್ಟು ಮುಂದುವರಿಯುತ್ತಿರುವ ಕಾಲೇಜು ಅತ್ತ್ಯತ್ತಮ ಶಿಕ್ಷಕ ವರ್ಗ ಹಾಗೂ ಸವಲತ್ತುಗಳನ್ನು ಹೊಂದಿದ್ದು ವಿದ್ಯಾರ್ಥಿಗಳಲ್ಲಿ ಜಾಗತಿಕ ಸವಾಲುಗಳನ್ನು ಎದುರಿಸುವ ಆತ್ಮ ವಿಶ್ವಾಸವನ್ನು ಮೂಡಿಸುತ್ತಿರುವುದು ಶ್ಲಾಘನೀಯ ಎಂದರು. ಶ್ರೀ ವೆಂಕಟೇಶ ಶಿವಭಕ್ತಿ ಯೋಗ ಸಂಘದ ಕಾರ್ಯದರ್ಶಿ ಶ್ರೀ ವಸಂತ ಕಾರಂದೂರು, ಆಡಳಿತ ಮಂಡಳಿಯ ಶ್ರೀ ಪ್ರವೀಣ್ ಕುಮಾರ್ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ವೇಧಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ನಾಯಕಿ ಕವಿತಾ ವಂದಿಸಿದರೆ, ಕು. ಸೌಮ್ಯಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ನಂತರ ವಿದ್ಯಾರ್ಥಿಗಳಿಂದ ವಿವಿದ ಮನರಂಜನಾ ಕಾರ್ಯಕ್ರಮಗಳು ಜರುಗಿದವು.

ಅಂದು ಪೂರ್ವಾಹ್ನ ನಡೆದ ದ್ವಜಾರೋಹನ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಯಸ್ ಆರ್ ಆರ್ ಇಂಡಸ್ಟ್ರೀಸ್ ನ ಶ್ರೀ ಶೈಲೇಂದ್ರ ವ ಸುವರ್ಣ ಹಾಗೂ ಕಾಲೇಜಿನ ಹಳೇ ವಿದ್ಯಾರ್ಥಿ ಚಾರ್ಟರ್ಡ್ ಅಕೌಂಟೆಂಟ್ ರಾಧೇಶ್ ಶೆಣೈ ಇವರುಗಳು ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದರು. ಶ್ರೀ ವೆಂಕಟೇಶ ಶಿವಭಕ್ತಿ ಯೋಗ ಸಂಘದ ಕಾರ್ಯದರ್ಶಿ ಶ್ರೀ ವಸಂತ ಕಾರಂದೂರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.

ದ್ವಜಾರೋಹಣ ಮಾಡಿ ಮಾತನಾಡಿದ ಶ್ರೀ ಶೈಲೇಂದ್ರ ವ ಸುವರ್ಣರು, ಯುವಜನತೆ ದುರಭ್ಯಾಸಗಳಿಂದ ದೂರವಿದ್ದು ತಾವು ಕಷ್ಟಪಟ್ಟು ಗಳಿಸಿದ್ದನ್ನು ಪೋಲು ಮಾಡದೆ ಉಳಿಸಿ ಸಮಾಜದ ಒಳಿತಿಗಾಗಿ ಬಳಸಬೇಕು, ಎಲ್ಲರನ್ನೂ ಸಹೋದರ ಸಹೋದರಿಯರಂತೆ ಕಾಣಬೇಕು. ಆಗ ನಮ್ಮ ಜೀವನ ಸಾರ್ಥಕ ವಾಗುತ್ತದೆ ಎಂದರು.

ಮುಖ್ಯ ಅಥಿತಿ ಸ್ಥಾನದಿಂದ ಮಾತನಾಡಿದ ಚಾರ್ಟರ್ಡ್ ಅಕೌಂಟೆಂಟ್ ಸಿ. ಎ. ರಾಧೇಶ್ ಶೆಣೈ, ಈ ಕಾಲೇಜು ನನ್ನ ಜೀವನದ ಗತಿಯನ್ನು ಬದಲಾಯಿಸಿದೆ, ತನ್ನಂತೆ ಹಲವಾರು ವಿದ್ಯಾರ್ಥಿಗಳ ಬದುಕನ್ನು ಕಟ್ಟುವ ಕೆಲಸವನ್ನು ಮಾಡುತ್ತಿದೆ. ಆದುದರಿಂದ ಈ ಕಾಲೇಜಿನೊಂದಿಗೆ ಭಾವನಾಥ್ಮಕ ಸಂಬಂಧವನ್ನು ಹೊಂದಿದ್ದೇನೆ. ನಾನೇನಾದರು ಸಾಧನೆಯನ್ನು ಮಾಡಿದ್ದರೆ ಅದಕ್ಕೆ ಈ ಕಾಲೇಜಿನ ಶಿಕ್ಷಕರ, ದಿವಂಗತ ಆನಂದರಂತ ಹಿರಿಯರ ಮಾರ್ಗದರ್ಶನ, ಪೊತ್ಸಾಹವೇ ಕಾರಣ. ವಿದ್ಯಾರ್ಥಿಗಳು ತಮ್ಮ ಜೀವನ ತಮ್ಮ ಹೆತ್ತವರಿಗೆ ಹಾಗೂ‌ಈ ಸಮಾಜಕ್ಕೆ ಅತ್ಯಮೂಲ್ಯವಾದುದ್ದು ಅನ್ನುವುದನ್ನು ಅರಿತು ಮುಂದುವರಿಯಬೇಕು. ಮುಂದೊಂದು ದಿನ ಸಾಧನೆಯನ್ನು ಮಾಡಿದಾಗ ತಮಗೆ ಬದುಕು ಕಟ್ಟಿ ಕೊಟ್ಟ ಕಾಲೇಜನ್ನು ಮರೆಯಬಾರದು ಎಂದರು.

ವಿದ್ಯಾರ್ಥಿಗಳಿಂದ ಪ್ರಾರ್ಥನೆಯೊಂದಿಗೆ ಆರಂಭವಾದ ಸಭಾ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ. ಗಂಗಾಧರ್ ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ಸಂಚಾಲಕರಾದ ಶ್ರೀ ಯಸ್ ಜಯವಿಕ್ರ್‌ಮ್, ಕಾಲೇಜು ಆಡಳಿತ ಮಂಡಳಿಯ ಶ್ರೀ ಜಗನ್ನಾಥ್, ಶ್ರೀ ಹರೀಶ್ ಕುಮಾರ್ ಇವರುಗಳು ಬಹುಮಾನ ವಿತರಿಸಿದರು. ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ನಾಗೇಂದ್ರ, ಮುರಲೀಧರ್, ಮೋಕ್ಷಿತ್, ಧೀಕ್ಷಾ ಶೆಟ್ಟಿ ಹಾಗೂ ಕವಿತಾ ಇವರುಗಳು ವೇಧಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂಘದ ಸಲಹೆಗಾರರಾದ ಡಾ. ಉಮ್ಮಪ್ಪ ಪೂಜಾರಿ ಕಾರ್ಯಕ್ರಮವನ್ನು ಸಂಯೋಜಿಸಿದ್ದರು. ವಿದ್ಯಾರ್ಥಿ ಸಂಘದ ಜೊತೆ ಕಾರ್ಯದರ್ಶಿ ಕು. ಧೀಕ್ಷಾ ಶೆಟ್ಟಿ ವಂದಿಸಿದರೆ, ವಿದ್ಯಾರ್ಥಿನಿ ಧೀಕ್ಷಿತಾ ಕಾರ್ಯಕ್ರಮ ನಿರ್ವಹಿಸಿದರು.

Write A Comment