ಕನ್ನಡ ವಾರ್ತೆಗಳು

ಮಾ. 14: ಮಿನಿ ಉದ್ಯೋಗ ಮೇಳ

Pinterest LinkedIn Tumblr

job

ಮ೦ಗಳೂರು ಮಾರ್ಚ್.10:  ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಮಂಗಳೂರು ಇವರು ಮಾ. 14 ರಂದು ಬೆ.10 ರಿಂದ ಮ.3 ಗಂಟೆ ವರೆಗೆ ಮಹಾನಗರಪಾಲಿಕೆ ಕಟ್ಟಡ ಲಾಲ್‌ಬಾಗ್, ಮಂಗಳೂರು ಇಲ್ಲಿರುವ ಮಾನವ ಸಂಪನ್ಮೂಲ ಅಭಿವೃದ್ದಿ ಕೇಂದ್ರ(ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ) ಇಲ್ಲಿ ಮಿನಿ ಉದ್ಯೋಗ ಮೇಳ ವನ್ನು ಆಯೋಜಿಸಿಲಾಗಿದೆ.

ಇದರಲ್ಲಿ ಬಿ.ಎಫ್.ಎಸ್.ಐ ಸೆಕ್ಟರ್‌ನಲ್ಲಿ ಖಾಲಿಯಿರುವ ಹುದ್ದೆಗಳಿಗೆ ನೇರ ಸ೦ದರ್ಶನವನ್ನು ಏರ್ಪಡಿಸಿದ್ದು ಪದವೀಧರರು, ಸ್ನಾತಕೋತ್ತರ ಪದವೀಧರರು, ಡಿಪ್ಲೋಮಾ ಹಾಗೂ ಐಟಿ‌ಐ ಮಾಡಿದವರು 18 ರಿ೦ದ 29 ವರ್ಷದೊಳಗಿನ ಆಸಕ್ತ ಪುರುಷ ಅಭ್ಯರ್ಥಿಗಳು 2 ಪ್ರತಿ ಬಯೋಡಾಟ ಮತ್ತು ಪಾಸ್‌ಪೋರ್ಟ್ ಅಳತೆಯ 2 ಭಾವಚಿತ್ರದೊ೦ದಿಗೆ ವಿದ್ಯಾರ್ಹತೆಯ ಜೆರಾಕ್ಸ್ ಪ್ರತಿಯನ್ನು ತೆಗೆದುಕೊ೦ಡು ಈ ಮೇಳದಲ್ಲಿ ಭಾಗವಹಿಸಬಹುದಾಗಿದೆಯೆ೦ದು ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Write A Comment