ಕನ್ನಡ ವಾರ್ತೆಗಳು

ಉಡುಪಿಯಲ್ಲಿ ದೇವಾಡಿಗ ಸಾಧಕರು ಮತ್ತು ಪರಿಣಿತರಿಂದ ವಿಚಾರ ಸಂಕಿರಣ: ಇದು ಮಹಿಳಾ ದಿನದ ವಿಶೇಷ

Pinterest LinkedIn Tumblr

Vishva Devadiga_Womens_Day

ಉಡುಪಿ: ದೇವಾಡಿಗ ಯುವ ವೇದಿಕೆ (ರಿ.) ಇವರ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಉಡುಪಿಯ ಶಾರದಾ ಕಲ್ಯಾಣ ಮಂಟಪದಲ್ಲಿ ದೇವಾಡಿಗ ಸಮ್ಮೇಳನ ಅಂಗವಾಗಿ ವಿಶ್ವ ದೇವಾಡಿಗ ಮಹಿಳಾ ವಿಚಾರ ಸಂಕೀರಣ ಕಾರ್ಯಕ್ರಮ ಭಾನುವಾರ ನಡೆಯಿತು.

Udupi_Devadiga_Meet (2) Udupi_Devadiga_Meet (3) Udupi_Devadiga_Meet (1) Udupi_Devadiga_Meet (4) Udupi_Devadiga_Meet (5)

‘ಸಮಾಜದಲ್ಲಿ ಯುವ ಮಹಿಳೆಯರ ಪಾತ್ರ’

‘ಯೋಗ’-ಈ ವಿಚಾರದ ಬಗ್ಗೆ ನಡೆದ ಗೋಷ್ಟಿಯಲ್ಲಿ ಸೃಷ್ಟಿ ಪೌಂಡೇಶನ್ ನಿರ್ದೇಶಕಿ ಮಂಜರಿ ಚಂದ್ರ ವಿವರಿಸುತ್ತಾ, ದೈನಂದಿನ ಬದುಕಿನ ಜಂಜಾಟಗಳ ನಡುವೆ ಮಹಿಳೆಯರು ಯೋಗ-ಪ್ರಾಣಾಯಾಮಗಳಂತಹ ಸಹಜ ಕ್ರಿಯೆಯ ಮೂಲಕ ಒತ್ತಡಗಳನ್ನು ಕಮ್ಮಿಮಾಡೊಕೊಳ್ಳಬಹುದಲ್ಲದೇ ದೈಹಿಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಂಡು ಉತ್ತಮ ಜೀವನ ನಡೆಸಲು ಸಹಕಾರಿ ಎಂದರು.

‘ವ್ಯವಹಾರ ಕ್ಷೇತ್ರದಲ್ಲಿ ಮಹಿಳಾ ದಿಗ್ಗಜರು’- ಈ ವಿಚಾರಕ್ಕೆ ಸಂಬಂದಪಟ್ಟಂತೆ ಮಣಿಪಾಲ ವಿ.ವಿ.ಯ ಬಿಬಿ‌ಎ ವಿದ್ಯಾರ್ಥಿನಿ ಯಶಸ್ವಿ ಮೋಹನ್‌ದಾಸ್ ಮಾತನಾಡಿ, ವ್ಯಾವಹಾರಿಕಾ ಕ್ಷೇತ್ರಗಳಲ್ಲಿ ಮಹಿಳೆಯರು ತಮ್ಮ ಛಾಪು ಮೂಡಿಸಿದ್ದು, ನಮ್ಮ ಸಮಾಜದ ಮಹಿಳೆಯರು ಇದರತ್ತ ಆಸಕ್ತಿ ವಹಿಸಿ ಸಕ್ರೀಯವಾಗಿ ತೊಡಗಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

‘ಮಹಿಳಾ ಸಬಲೀಕರಣ’- ಈ ವಿಚಾರದ ಬಗ್ಗೆ ಮಾತನಾಡಿದ ಮಣಿಪಾಲ ವಿ.ವಿ.ಯ ಎಂಕಾಂ ವಿದ್ಯಾರ್ಥಿನಿ ದಾಮಿನಿ ದಾಮೋದರ್, ಹೊರಗಡೆ ದುಡಿದು ಮಹಿಳೆಯರು ಮನೆಗೆ ಬಂದಾಗ ಅವಳ ದೈನಂದಿನ ಮನೆಕೆಲಸದಲ್ಲಿ ಆಕೆಗೆ ಸಹಾಯ ಮಾಡಿ ಅವಳನ್ನು ಚೆನ್ನಾಗಿ ನೋಡಿಕೊಳ್ಳುವುದು ಸಬಲೀಕರಣದ ಮೊದಲ ಹೆಜ್ಜೆ ಎಂದು ಅಭಿಪ್ರಾಯಪಟ್ಟರು.

‘ಸ್ತ್ರೀ ಸ್ವಾತಂತ್ರ್ಯ ಮತ್ತು ಸಮಾನತೆ’- ಈ ವಿಚಾರದ ಬಗ್ಗೆ ಮಣಿಪಾಲ ವಿವಿ. ಸಂಶೋಧನಾ ವಿದ್ಯಾರ್ಥಿನಿ ನಮ್ರತಾ ಮಾತನಾಡಿ, ದೇವಿ ಪೂಜಕರಾಗಿರುವ ನಾವುಗಳು ಭ್ರೂಣ ಹತ್ಯೆಯನ್ನು ತೊಡೆದು ಹಾಕುವಲ್ಲಿ ಕಾರ್ಯೋನ್ಮುಖರಗಬೇಕಿದೆ. ಶಿಕ್ಷಣ ಹಾಗೂ ಆರ್ಥಿಕ ಸ್ವಾತಂತ್ರ್ಯದಿಂದ ಸ್ತ್ರೀ ಪುರುಷ ಸಮಾನತೆಗೆ ಭದ್ರ ಬುನಾದಿ ಸಾಧ್ಯ ಎಂದು ಅಭಿಪ್ರಾಯಪಟ್ಟರು.

‘ಸ್ವ ಉದ್ಯೋಗ ಕನಸು’- ಈ ವಿಚಾರದ ಬಗ್ಗೆ ಅಮಗಿ ಮೀಡಿಯಾ ಲ್ಯಾಬ್ಸ್ ಮಂಗಳೂರು ಇದರ ನಿಮಿಕಾ ರತ್ನಾಕರ್ ಮಾತನಾಡಿ, ಮಹಿಳೆಯರು ತಮ್ಮ ಬಿಡುವಿನ ಅವಧಿಯಲ್ಲಿ ಕಾಲಹರಣ ಮಾಡುವ ಬದಲು ಒಂದೆಡೆ ಸೇರಿ ಸಣ್ಣಪುಟ್ಟ ಗೃಹೋಪಯೋಗಿ ವಸ್ತುಗಳನ್ನು ತಯಾರಿಸುವ ಮೂಲಕ ತಮ್ಮ ಕೌಟುಂಬಿಕ ಆದಾಯವನ್ನು ಹೆಚ್ಚಿಸಿಕೊಳ್ಳಲು ಹಾಗೂ ಬದುಕನ್ನು ಭದ್ರಗೊಳಿಸಿಕೊಳ್ಳಲು ಸಾಧ್ಯವಿದೆ ಎಂದರು.

Devadiga_Meet_UDp (1) Devadiga_Meet_UDp (2) Devadiga_Meet_UDp (4) Devadiga_Meet_UDp (5) Devadiga_Meet_UDp (3)

ಮಧ್ಯಾಹ್ನದ ಗೋಷ್ಟಿ:
ಸವಾಲು ಮತ್ತು ಅವಕಾಶಗಳು; ಪರಿಣಿತರುಗಳಿಂದ
‘ರಾಜಕೀಯ ಸವಾಲುಗಳು ಮತ್ತು ಅವಕಾಶಗಳು’- ಈ ವಿಚಾರದ ಬಗ್ಗೆ ನಡೆದ ಗೋಷ್ಟಿಯಲ್ಲಿ ಖಂಬದಕೋಣೆ ಜಿಲ್ಲಾ ಜಿಲ್ಲಾಪಂಚಾಯತ್ ಸದಸ್ಯೆ ಗೌರಿ ದೇವಾಡಿಗ ಮಾತನಾಡಿ, ರಾಜಕೀಯದ ಬಲವಾದ ಹಿನ್ನೆಲೆಯಿಲ್ಲದಿದ್ದಲ್ಲಿ ಇಂದು ಹಲವಾರು ಸಮಸ್ಯೆಗಳು ಸವಾಲುಗಳನ್ನು ಎದುರಿಸಬೇಕಿದೆ. ಅಷ್ಟಾಗಿಯೂ ರಾಜಕೀಯದಲ್ಲಿ ಹಲವು ವಿಫುಲ ಅವಕಾಶಗಳಿದ್ದು ಅವುಗಳನ್ನು ನಾವು ಧೈರ್ಯವಾಗಿ ಸ್ವೀಕರಿಸಿ ಮುನ್ನೆಡೆದಾಗ ಮಾತ್ರವೇ ಯಶಸ್ಸು ಸಾಧ್ಯ ಎಂದರು.

‘ಕೇಳದ ಕೂಗು; ಭಾರತದಲ್ಲಿ ಭ್ರೂಣಹತ್ಯೆ ಮತ್ತು ಮಹಿಳಾ ಕಾನೂನು’- ಈ ವಿಚಾರದ ಬಗ್ಗೆ ಮಾತನಾಡಿದ ನ್ಯಾಯವಾದಿ ಹಾಗೂ ಉಚ್ಛ ನ್ಯಾಯಾಲಯದ ಶಿಕ್ಷಣ ಇಲಾಖೆಯ ಕಾನೂನು ಅಧಿಕಾರಿ ವನಿತಾ ಯು.ಎಮ್. ಬೆಂಗಳೂರು, ಸಮಾಜದಲ್ಲಿ ಬದುಕುವ ನಾವೆಲ್ಲರೂ ಕಾನೂನಿನ ಸೂಕ್ಷ್ಮಗಳನ್ನು ಅರಿಯಬೇಕು. ಕಾನೂನಿನ ಬಗ್ಗೆ ನಮಗಿರುವ ಅಜ್ಞಾನವೇ ನಾವು ಅನುಭವಿಸುವ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದರು.

‘ಮಹಿಳೆಯ ಯಶಸ್ಸಿಗೆ ಕುಟುಂಬದ ಪಾತ್ರ’- ಈ ವಿಚಾರದ ಕುರಿತಾಗಿ ಪುಣೆ ಡಾನ್ಸ್ ಸ್ಟುಡಿಯೋ ಸಂಸ್ಥಾಪಕಿ ಭಾವನಾ ಆರ್ ದೇವಾಡಿಗ ಮಾತನಾಡಿ, ಒಬ್ಬ ಮಹಿಳೆಯ ಯಶಸ್ಸಿನ ಹಿಂದೆ ಆಕೆಯ ಸಂಪೂರ್ಣ ಕುಟುಂಬವಿರುತ್ತದೆ. ಕುಟುಂಬದ ಪ್ರೋತ್ಸಾಹ ಸಹಕಾರವಿದ್ದರೇ ಎಂತಹಾ ಸಾಧನೆಯೂ ಸಾಧ್ಯ ಎಂದರು.

‘ಮಹಿಳೆ ಮತ್ತು ಮಾಧ್ಯಮ’- ಈ ಕುರಿತಾಗಿ ಸುವರ್ಣ ನ್ಯೂಸ್ ಕವರ್ ಸ್ಟೋರಿ ವಿಭಾಗದ ತನಿಖಾ ಪ್ರತಿನಿಧಿ ವಿಜಯಲಕ್ಷ್ಮಿ ಶಿಬರೂರು ಮಾತನಾಡಿ, ಮಕ್ಕಳನ್ನು ಮುದ್ದಿನಿಂದ ಸಾಕುಸಲಹುವ ಜೊತೆಗೆ ಅವರಿಗೆ ಇಷ್ಟವಾದ ಕಾರ್ಯಕ್ಷೇತ್ರದಲ್ಲಿ ಅವರನ್ನು ಮುಂದುವರಿಯಲು ಪ್ರೋತ್ಸಾಹಿಸಬೇಕು. ಧೈರ್ಯವೊಂದಿದ್ದರೇ ಏನನ್ನೂ ಸಾಧಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

‘ಸಹನಾಮಯಿ’- ಶೋಭಾ ಆರ್. ದೇವಾಡಿಗ ಬೆಳ್ಮಣ್ಣು ಈ ಕುರಿತಾಗಿ ಮಾತನಾಡುತ್ತಾ, ಮಹಿಳೆಯಲ್ಲಿರುವ ಸಹನಾಮಯಿ ವ್ಯಕ್ತಿತ್ವದ ಕುರಿತು ಎಳೆ ಎಳೆಯಾಗಿ ವಿವರಿಸಿದರು.

Write A Comment