
ಉಳ್ಳಾಲ,ಮಾ.08: ಪ್ರವಾದಿಯವರ ಮೇಲೆ ಗೌರವ ನಮಗೆ ಅಗತ್ಯವಾಗಿದೆ. ಪ್ರವಾದಿಯವರು ಎಲ್ಲರನ್ನು ಗೌರವದಿಂದ ಕಾಣುತ್ತಿದ್ದರು. ಅದೇ ರೀತಿ ಅವರಿಗೂ ಗೌರವ ಸಲ್ಲುತ್ತಿತ್ತು. ಅವರು ಅಜ್ಞಾನದ ಕಾಲದಲ್ಲಿ ಹೋರಾಡಿದ ಫಲದಿಂದ ಇಸ್ಲಾಂ ಇಂದು ಲೋಕದಲ್ಲಿ ನೆಲೆ ನಿಂತಿದೆ. ಇದಕ್ಕೆ ಕಾರಣಕರ್ತರಾದ ಪ್ರವಾದಿಯವರ ಮೇಲೆ ಗೌರವದಿಂದ ಸ್ವಲಾತ್ ಕಾರ್ಯಕ್ರಮ ನಡೆಸಬೇಕು ಎಂದು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಶಾಫಿ ಸಅದಿ ಹೇಳಿದರು.
ಅವರು ಎಸ್ಸೆಸ್ಸೆಫ್ ಮತ್ತು ತಖ್ವೀಯತುಲ್ ಇಸ್ಲಾಂ ಯೆಂಗ್‌ಮೆನ್ಸ್ ಎಸೋಸಿಯೇಶನ್ ಇದರ ಆಶ್ರಯದಲ್ಲಿ ಭಾನುವಾರ ಕಲ್ಕಟ್ಟದಲ್ಲಿ ನಡೆದ ೧೬ ನೇ ಸ್ವಲಾತ್ ವಾರ್ಷಿಕ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರವಾದಿಯವರ ಮೇಲೆ ಅವಹೇಳನ ಸಲ್ಲದು. ವಿಶ್ವಾಸ ಇಲ್ಲದವನು ಮುಸ್ಲಿಂ ಆಗಲಾರ. ಅವರ ಬೋಧನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಜೀವಿಸಿದಲ್ಲಿ ಬದುಕು ಯಶಸ್ಸು ಕಾಣಲು ಸಾದ್ಯ ಎಂದರು.

ಕಲ್ಕಟ್ಟ ಮಸೀದಿಯ ಮಾಜಿ ಖತೀಬ್ ಅಬ್ದುಲ್ಲ ಮುಸ್ಲಿಯಾರ್ ನೂಜಿ ದುವಾ ನೆರವೇರಿಸಿದರು. ಹಾಫಿಳ್ ಮುಹಮ್ಮಿಲ್ ಕಲ್ಕಟ್ಟ ಖಿರಾಅತ್ ಪಠಿಸಿದರು. ಕಲ್ಕಟ್ಟ ಮಸೀದಿಯ ಖತೀಬ್ ಕೆ.ಕೆ. ಮುಹಮ್ಮದ್ ಸಲೀಂ ಹನೀಫಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಅಸ್ಸಯ್ಯದ್ ಸಈದುದೀನ್ ತಂಙಳ್ ಕಡಲುಂಡಿ ಸ್ವಲಾತ್‌ನ ನೇತೃತ್ವ ವಹಿಸಿ ಉಪದೇಶ ನೀಡಿದರು. ಅಬ್ದುಲ್ ಕಬೀರ್ ಹಿಮಮಿ ಅಸ್ಸಖಾಫಿ ಕಾಸರಗೋಡ್ ಬುಖ್ಯ ಭಾಷಣ ಮಾಡಿದರು.
ಕೆಸಿಎಫ್ ದುಬೈ ಝೋನ್ ಅಧ್ಯಕ್ಷ ಮೆಹಬೂಬ್ ಸಖಾಫಿ ಕಿನ್ಯ, ಎಸ್‌ವೈಎಸ್ ಜಿಲ್ಲಾ ಸದಸ್ಯ ಇಸ್ಮಾಯಿಲ್ ಸಅದಿ ಕಿನ್ಯ, ಇಲ್ಯಾಸ್ ಜುಮಾ ಮಸೀದಿಯ ಉಪಾಧ್ಯಕ್ಷರಾದ ಮಹಮ್ಮದ್ ಕಂಡಿಕ , ಮೊಯಿದಿನ್ ಕುಂಞಿ ಕಲ್ಕಟ್ಟ, ದ.ಕ. ಜಿಲ್ಲಾ ಕೆಎಂಜೆಸಿ ಉಪಾಧ್ಯಕ್ಷ ಆಲಿಕುಂಞಿ ಪಾರೆ, ಮಂಜನಾಡಿ ಗ್ರಾ.ಪಂ. ಅಧ್ಯಕ್ಷ ಮುಹಮ್ಮದ್ ಅಸೈ, ಎಸ್‌ವೈಎಸ್ ದೇರಳಕಟ್ಟೆ ಸೆಂಟರ್ ಅಧ್ಯಕ್ಷ ಏಷ್ಯನ್ ಬಾವಾ ಹಾಜಿ, ಬಿ.ಎ. ಹಸನಬ್ಬ, ಜಿ.ಪಂ. ಮಾಜಿ ಸದಸ್ಯ ಎನ್.ಎಸ್.ಕರೀಂ, ಎಸ್ಸೆಸ್ಸೆಫ್ ಮಂಜನಾಡಿ ಸೆಕ್ಟರ್ ಅಧ್ಯಕ್ಷ ಇಬ್ರಾಹಿಂ ಅಹ್ಸನಿ, ಮಂಜನಾಡಿ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಕುಂಞಿಬಾವ ಕಲ್ಕಟ್ಟ,ಎಸ್‌ವೈಎಸ್ ಅಧ್ಯಕ್ಷ ಮಹಮ್ಮದ್ ಕಲ್ಕಟ್ಟ, ಪಂಚಾಯತ್ ಸದಸ್ಯರಾದ ಅಬ್ದುಲ್ ಖಾದರ್, ಅಶ್ರಫ್, ಕಲ್ಕಟ್ಟ ಜುಮ ಮಸೀದಿಯ ಕಾರ್ಯದರ್ಶಿ ಟಿ.ಎಚ್. ಹಸೈನಾರ್, ಕೋಶಾಧಿಕಾರಿ ಮುಹಮ್ಮದ್, ಪತ್ರಕರ್ತ ಬಶೀರ್ ಕಲ್ಕಟ್ಟ, ಮಹಮ್ಮದ್ ಮಾಸ್ಟರ್ ಕಲ್ಕಟ್ಟ, ಎಸ್ಸೆಸ್ಸೆಫ್ ಕಲ್ಕಟ್ಟ ಶಾಖೆಯ ಅಧ್ಯಕ್ಷ ರಝಾಕ್ ಮೊದಲಾದವರು ಉಪಸ್ಥಿತರಿದ್ದರು. ಕೆ.ಎ. ಅಬ್ದುಲ್ ರಹ್ಮಾನ್ ರಝ್ವಿ ಕಲ್ಕಟ್ಟ ಅತಿಥಿಗಳನ್ನು ಸ್ವಾಗತಿಸಿದರು. ಎಸ್ಸೆಸ್ಸೆಫ್ ಕಾರ್ಯದರ್ಶಿ ಮಹಮ್ಮದ್ ಶರೀಫ್ ವಂದಿಸಿದರು.