ಕನ್ನಡ ವಾರ್ತೆಗಳು

ತೆಕ್ಕಟ್ಟೆಯಲ್ಲಿ ಬೃಹತ್ ‘ಹಿಂದೂ ಸಮಾಜೋತ್ಸವ’|ಇಂದು ಬಲಪಂಥೀಯವಾದಕ್ಕೆ ಬೆಲೆಯಿಲ್ಲ; ವಜ್ರದೇಹಿ ಶ್ರೀ

Pinterest LinkedIn Tumblr

ಕುಂದಾಪುರ: ದೇಶದಲ್ಲಿ ಎಡಪಂಕ್ತೀಯರಿಗೆ, ಸ್ವಯಂಘೋಷಿತ ಬುದ್ದಿಜೀವಿಗಳಿಗೆ ಸಿಕ್ಕುವ ಗೌರವಗಳು ಹಿಂದೂಗಳಿಗೆ ಸಿಗುತ್ತಿಲ್ಲ. ಜಾತಿಯಲ್ಲಿ ವಿಂಗಡಣೆಯಾಗುವ ಕಾರಣದಿಂದಾಗಿ ಹಿಂದೂಗಳ ಅಸ್ಥಿತ್ವ ಅಲುಗಾಡುತ್ತದೆ. ನಮ್ಮ ಕೂಗು ಬಲವಾಗಲು ಜಾತೀಯತೆಯನ್ನು ತೊಡೆದು ಹಾಕಬೇಕಿದೆ ಎಂದು ಶ್ರೀ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

ಅವರು ತೆಕ್ಕಟ್ಟೆಯಲ್ಲಿ ಭಾನುವಾರ ಸಂಜೆ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ತೆಕ್ಕಟ್ಟೆ ಘಟಕದ ವತಿಯಿಂದ ಹಮ್ಮಿಕೊಂಡ ವಿರಾಟ್ ಹಿಂದೂ ಸಮಾಜೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

Tekkatte_Virat_Hindu Samajotsava (22) Tekkatte_Virat_Hindu Samajotsava (21) Tekkatte_Virat_Hindu Samajotsava (24) Tekkatte_Virat_Hindu Samajotsava (16) Tekkatte_Virat_Hindu Samajotsava (15) Tekkatte_Virat_Hindu Samajotsava (13) Tekkatte_Virat_Hindu Samajotsava (5) Tekkatte_Virat_Hindu Samajotsava (8) Tekkatte_Virat_Hindu Samajotsava (9) Tekkatte_Virat_Hindu Samajotsava (36) Tekkatte_Virat_Hindu Samajotsava (38) Tekkatte_Virat_Hindu Samajotsava (34) Tekkatte_Virat_Hindu Samajotsava (6) Tekkatte_Virat_Hindu Samajotsava (1) Tekkatte_Virat_Hindu Samajotsava (3) Tekkatte_Virat_Hindu Samajotsava (7) Tekkatte_Virat_Hindu Samajotsava (2) Tekkatte_Virat_Hindu Samajotsava (10) Tekkatte_Virat_Hindu Samajotsava (18) Tekkatte_Virat_Hindu Samajotsava (23) Tekkatte_Virat_Hindu Samajotsava (25) Tekkatte_Virat_Hindu Samajotsava (30) Tekkatte_Virat_Hindu Samajotsava (29) Tekkatte_Virat_Hindu Samajotsava (26) Tekkatte_Virat_Hindu Samajotsava (27) Tekkatte_Virat_Hindu Samajotsava (28) Tekkatte_Virat_Hindu Samajotsava (37) Tekkatte_Virat_Hindu Samajotsava (14) Tekkatte_Virat_Hindu Samajotsava (12) Tekkatte_Virat_Hindu Samajotsava (11)

ತಾವು ಜಾಸ್ಥಿ ಕಲಿತಿದ್ದೇವೆಂಬ ದುರಹಂಕಾರ ಹೊಂದಿದ ಕೆಲವರು ಹಿಂದೂ ಧರ್ಮವನ್ನು ಅವಹೇಳನ ಮಾಡುವುದನ್ನೇ ಕಸುಬನ್ನಾಗಿ ಮಾಡಿಕೊಂಡಿದ್ದಾರೆ. ಹಿಂದೂ ಧರ್ಮವನ್ನು ಅವಹೇಲನ ಮಾಡಿ ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡವರೂ ಇದ್ದಾರೆ. ನಮ್ಮಲಿ ಬಲಪಂಥೀಯವಾದಕ್ಕೆ ಬೆಲೆಯಿಲ್ಲ, ಆದರೇ ಎಡಪಂಥೀಯ ವಾದಕ್ಕೆ ಮಾತ್ರ ಬೆಲೆ. ದೇಶದ್ರೋಹಿ ಕನ್ಹಯ್ಯ ಕುಮಾರ್ ಅಂತವರನ್ನೂ ಬೆಂಬಲಿಸುವಂತಹ ಕಾರ್ಯವೂ ನಮ್ಮಲ್ಲಿ ಆಗುತ್ತಿರುವುದು ವಿಷಾಧನೀಯ ಸಂಗತಿಯಾಗಿದೆ. ಕೆನರಾ ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆಗೆ ವಿರೋಧ ವ್ಯಕ್ತಪಡಿಸುವ ಕೆಲವು ಮಂದಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೋಮಾಂಸ ತಿನ್ನುತ್ತೇನೆ ಎಂಬ ಹೇಳಿಕೆ ನೀಡಿದಾಗ ಯಾಕೇ ಪ್ರತಿಭಟಿಸಿಲ್ಲ ಎಂಬುದು ಅರ್ಥವಾಗುತ್ತಿಲ್ಲ ಎಂದರು. ನರೇಂದ್ರ ಮೋದಿ ಹಿಂದೂ ಸಮಜಾದ ಯೋಗಿಯಾಗಿ ಕೇಂದ್ರದಲ್ಲಿ ಆಡಳಿತಕ್ಕೆ ಬಂದಿದ್ದು ಇನ್ನಾದರೂ ನಾವು ಬದಲಾಗಬೇಕಿದೆ ಎಂದು ಹೇಳಿದರು.

Tekkatte_Virat_Hindu Samajotsava (35)

ಹಿಂದೂಗಳಿಗೆ ಅಪಮಾನ ಮಾಡಿದರೇ ಜಾಗ್ರತೆ: ಗೋಪಾಲ್ ಜೀ
ಕೆಲವು ಧರ್ಮದ ಮತಾಂಧರು ಗೋ ಹತ್ಯೆ, ಲವ್ ಜಿಹಾದ್‌, ಮತಾಂತರ ಕಾರ್ಯದಲ್ಲಿ ತೊಡಗಿಸಿಕೊಂಡು ಹಿಂದೂ ಧರಮದ ಮೇಲೆ ಆಕ್ರಮಣ ಮಾಡುತ್ತಿದ್ದಾರೆ.ಅದಕ್ಕೆ ನಮ್ಮನ್ನಾಳುವ ರಾಜ್ಯ ಸರಕಾರವು ಸಾಥ್ ನೀಡುತ್ತಿದೆ. ಹಿಂದೂ ಯುವಕರನ್ನು ಕೆಣಕುವ, ಹಿಂದೂ ಸಮಾಜಕ್ಕೆ ಅಪಮಾನ ಮಾಡುವವರನ್ನು ಮನೆಗೆ ಕಳುಹಿಸುವ ಪ್ರತಿಜ್ನೆಯನ್ನು ಈ ಸಭೆ ಮಾಡಬೇಕಿದೆ. ಹಿಂದುತ್ವಕ್ಕೆ ಅಪಮಾನ ಮಾಡುವ ಹುನ್ನಾರ ನಡೆಯುತ್ತಿದೆ. ಗ್ರಾಮಗ್ರಾಮದ ಹಿಂದೂ ತರುಣರು ಇಂದು ಹಿಂದುತ್ವದ ಹಾಗೂ ಗೋ ರಕ್ಷಣೆಗೆ ಸಿದ್ದರಾಗಿದ್ದಾರೆ, ದೇಶದ ರಕ್ಷಣೆಗೆ ಎಲ್ಲಾ ಯುವಕರು ಕಠಿಬದ್ಧರಾಗಬೇಕಿದೆ. ದೇಶದ ಅಧಿಕಾರದಲ್ಲಿ ಬದಲಾವಣೆ ಬಂದ ಕಾರಣ ಹೊಟ್ಟೆ ಉರಿಯಿಂದ ಕೆಲವರು ಮಾಧ್ಯಮಗಳನ್ನು ಅಸ್ತ್ರ ಮಾಡಿಕೊಂಡು ಮಾಡಬಾರದ ಕೆಲಸಕ್ಕೆ ಮುಂದಾಗುತ್ತಿದ್ದಾರೆ.

Tekkatte_Virat_Hindu Samajotsava (20)

ಟಿಪ್ಪು ಜಯಂತಿ ಆಚರಣೆ ಅಸಾಧ್ಯ
ಹಿಂದೂ ಜನತೆ ಕರ್ನಾಟಕದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಸುತರಾಂ ಬಿಡುವುದಿಲ್ಲ. ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಮತಾಂತರವಾಧಿ, ದೇವಾಲಯಗಳನ್ನು ಧ್ವಂಸ ಮಾಡಿದ ಹೇಡಿಯ ಜಯಂತಿ ಆಚರಣೆ ಮಾಡುವುದು ಸೂಕ್ತವಲ್ಲ. ಒಂದೊಮ್ಮೆ ಮಾಡಲು ಹೊರಟಿದ್ದೇ ಆದರೇ ಕರ್ನಾಟಕದಲ್ಲಿ ಈ ಸರಕಾರ ಇರಲ್ಲ ಎಂದರು.

Tekkatte_Virat_Hindu Samajotsava (31)

ರಾಜ್ಯದಲ್ಲಿರುವುದು ಹಿಂದೂ ವಿರೋಧಿ ಸರಕಾರ: ಪಂಪ್‌ವೆಲ್
ಬಜರಂಗದಳ ರಾಜ್ಯ ಸಹಸಂಚಾಲಕ ಶರಣ್ ಪಂಪ್‌ವೆಲ್ ಮಾತನಾಡಿ, ರಾಜ್ಯದಲ್ಲಿ ಹಿಂದೂ ವಿರೋಧಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಹಿಂದೂಪರ ಸಂಘಟನೆಗಳ ಕಾರ್ಯವನ್ನು ಹತ್ತಿಕ್ಕಿ ಸುಳ್ಳು ಮೊಕದ್ದಮೆಗಳನ್ನು ದಾಖಲಿಸುವ ಷಡ್ಯಂತ್ರಗಳು ಎಗ್ಗಿಲ್ಲದೇ ನಡೆಯುತ್ತಿದೆ. ಆದರೇ ಶಾಂತಿ ಸಂಕೇತವಾದ ಕೇಸರಿ ಭಗವಧ್ವಜವನ್ನು ಬಳಸುವ ನಾವು ಅಹಿಂಸೆ, ದೇಶದ್ರೋಹವನ್ನು ಎಂದಿಗೂ ಮಾಡುವುದಿಲ್ಲ. ಇಂತಹ ಸಂಘಟಿತ ಹೋರಾಟ ನಮ್ಮ ಸಮಾಜದಲ್ಲಿ ನಡೆಯಬೇಕಿದೆ. ಸಮಾಜೋತ್ಸವ ಮೊದಲಾದ ಕಾರ್ಯಕ್ರಮಗಳ ಮೂಲಕ ಸಂಘಟನೆಯನ್ನು ಹತ್ತಿಕ್ಕುವ ಷಡ್ಯಂತ್ರವನ್ನು ತಡೆಯಬೇಕಿದೆ. ಹಿಂದೂ ಸಮಾಜದ ರಕ್ಷಣೆಗಾಗಿ ಜೈಲಿಗೆ ಹೋಗಲು ಸಿದ್ದರಿದ್ದೇವೆ ಎಂದರು.

Tekkatte_Virat_Hindu Samajotsava (19)

ಎಲ್ಲೆಡೆ ಹಿಂದುತ್ವದ ವಾದವಾಗಲಿ: ಬೈಕಾಡಿ
ವಿಶ್ವಹಿಂದೂ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಉಡುಪಿ ಜಿಲ್ಲೆಯ 243 ಗ್ರಾಮಗಳಲ್ಲಿ ವಿ.ಹಿಂ.ಪ. ಮತ್ತು ಭಜರಂಗದಳದ ಸಮೀತಿ ಮಾಡಿ ದೇಶಕ್ಕಾಗಿ, ನೆಲಕ್ಕಾಗಿ, ಹಿಂದುತ್ವಕ್ಕಾಗಿ ತ್ಯಾಗ ಮಾಡುವ ಹತ್ತು ಸಾವಿರ ಕಾರ್ಯಕರ್ತರನ್ನು ಸೃಷ್ಟಿಸುತ್ತೇವೆ. ದೇಶವಿರೋಧಿ ಚಟುವಟಿಕೆಗಳನ್ನು ಸವಾಲಾಗಿ ಸ್ವೀಕಾರ ಮಾಡುತ್ತೇವೆ. ಇಡೀ ದೇಶದ ಸೈನಿಕರಿಗೆ ಅಪಮಾನ ಮಾಡುವ ಮಾತನ್ನಾಡಿದ ಮಟ್ಟು ಅಂತವರ ವಿರುದ್ಧ ಸಮಾಜ ಸೆಡಿದೇಳಬೇಕಿದೆ. 1920-30 ಮಾರ್ಕಿಸ್ಟ್ ವಾದ, 1940 ರ ಸಂದರ್ಭ ಸಮಾಜವಾದ ಬಳಿಕ ಜಾತ್ಯಾತೀತವಾದವಿತ್ತು. ಆದರೇ ತೆಕ್ಕಟ್ಟೆಯ ಸಮಾಜೋತ್ಸವದ ಬಳಿಕ ಎಲ್ಲೇಡೆ ಹಿಂದುತ್ವದ ವಾದವಾಗಬೇಕಿದೆ ಎಂದರು.

ಇದೇ ಸಂದರ್ಭ ತಲ್ಲೂರಿನಲ್ಲಿ ವಿದ್ಯುತ್ ಶಾಕ್ ಅವಘಡಕ್ಕೆ ಬಲಿಯಾದ ಮನೋಜ್ ದೇವಾಡಿಗ, ಸುನೀಲ್ ಮೊಗವೀರ ಕುಟುಂಬಕ್ಕೆ ಪರಿಹಾರ ಧನವನ್ನು ವಿತರಿಸಲಾಯಿತು.

Tekkatte_Virat_Hindu Samajotsava (32)

ರತ್ನಾಕರ ಶೆಟ್ಟಿ ಬಡಾಮನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿ.ಹಿಂ.ಪ. ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ರತ್ನಾಕರ ಅಮೀನ್, ಬಜರಂಗದಳ ಜಿಲ್ಲಾ ಸಂಚಾಲಕರಾದ ಸುನೀಲ್ ಕೆ., ದಿನೇಶ್ ಮೆಂಡನ್, ಸಹಸಂಚಾಲಕ ಗಿರೀಶ್ ಕುಂದಾಪುರ, ತಾಲೂಕು ಸಂಚಾಲಕ ಸಂತೋಷ್ ಕುಂದಾಪುರ, ಜಿಲ್ಲಾ ಗೋ ರಕ್ಷಕ್ ಪ್ರಮುಖ್ ವಿಜಯ್ ಕುಮಾರ್ ಶೆಟ್ಟಿ, ಬಜರಂಗದಳ ತೆಕ್ಕಟ್ಟೆ ಘಟಕದ ಸಂಚಾಲಕ ಶ್ರೀನಾಥ್ ಶೆಟ್ಟಿ, ಮೋಹನದಾಸ್ ಶೆಟ್ಟಿ ಉಳ್ತೂರು ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿಶ್ವ ಹಿಂದೂ ಪರಿಷತ್ ತೆಕ್ಕಟ್ಟೆ ಘಟಕದ ಅಧ್ಯಕ್ಷ ರಜತ್ ತೆಕ್ಕಟ್ಟೆ ಸ್ವಾಗತಿಸಿದರು. ವಿನುಶ್ ಪ್ರಾರ್ಥಿಸಿದರು.

Tekkatte_Virat_Hindu Samajotsava (33) Tekkatte_Virat_Hindu Samajotsava (17)

ಬೃಹತ್ ಶೋಭಾಯಾತ್ರೆ
ಸಭಾ ಕಾರ್ಯಕ್ರಮಕ್ಕೂ ಮೊದಲು ತೆಕ್ಕಟ್ಟೆ ಮಹಾಲಿಂಗೇಶ್ವರ ದೇವಸ್ಥಾನದಿಂದ ಹೊರಟ ಶೋಭಾಯಾತ್ರೆ ಕುಂಭಾಶಿ ಆನೆಗುಡ್ಡೆ ಸ್ವಾಗತ ಗೋಪುರದವರೆಗೆ ಸಾಗಿ ತೆಕ್ಕಟ್ಟೆ ಪ್ರವೇಶಿಸಿದ್ದು ಈ ವೇಳೆ ವಿವಿಧ ಸ್ತಬ್ಧ ಚಿತ್ರಗಳು, ಕಳಶ ಹಿಡಿದ ಮಹಿಳೆಯರು ಸೇರಿದಂತೆ ಸಾವಿರಾರು ಜನರು ಪಾಲ್ಘೊಂಡಿದ್ದರು.

Tekkatte_Virat_Hindu Samajotsava (4)

ಬಿಗಿ ಭದ್ರತೆ
ಸಮಾಜೋತ್ಸವದ ಹಿನ್ನೆಲೆಯಲ್ಲಿ ತೆಕ್ಕಟ್ಟೆ, ಕುಂಭಾಸಿ, ಕೋಟ ಪರಿಸರದಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಕುಂಭಾಸಿ ಹಾಗೂ ಕೋಟ ಪರಿಸರದಲ್ಲಿ ಚೆಕ್ ಪೋಸ್ಟ್ ಮಾಡಿ ಹೋಗುವ ಬರುವ ವಾಹನಗಳ ಮೇಕೆ ನಿಗಾ ಇಡಲಾಗಿತ್ತು.

ಚಿತ್ರ,ವರದಿ- ಯೋಗೀಶ್ ಕುಂಭಾಸಿ

Write A Comment