ಕನ್ನಡ ವಾರ್ತೆಗಳು

6ನೇ ವಾರ್ಷೀಕೋತ್ಸವ ಸಂಭ್ರಮ ಆಚರಿಸಿದ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘ

Pinterest LinkedIn Tumblr

Gokarna_Alumini_day_1

ವರದಿ ಹಾಗೂ ಚಿತ್ರ ಸತೀಶ್ ಕಾಪಿಕಾಡ್

ಮಂಗಳೂರು,ಮಾ.05: ನಿಷ್ಟೆ, ಪ್ರಾಮಾಣಿಕತೆ ಹಾಗೂ ಕಠಿಣ ಪರಿಶ್ರಮದೊಂದಿಗೆ ಚಲದಿಂದ ಮುನ್ನುಗಿದ್ದರೆ ಯಾವೂದೇ ರೀತಿಯ ಸಾಧನೆ ಮಾಡಲು ಸಾಧ್ಯ ಎಂದು ಕಾಲೇಜಿನ ಹಿರಿಯ ವಿದ್ಯಾರ್ಥಿ, ತುಳು ವಿದ್ವಾಂಸ, ಪ್ರೋ.ಡಾ.ಗಣೇಶ್ ಅಮಿನ್ ಸಂಕಮಾರ್ ತಿಳಿಸಿದರು.

ಅವರು ಮಣ್ಣಗುಡ್ಡೆ – ಗಾಂಧಿನಗರದಲ್ಲಿರುವ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಸಂಭಾಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ 6ನೇ ವಾರ್ಷೀಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ನನ್ನ ಬದುಕಿನ ಎಲ್ಲಾ ಸಾಧನೆಗಳಿಗೆ ಮೂಲ ಕಾರಣ ನಾನು ಕಲಿತ ಈ ಗೋಕರ್ಣನಾಥೇಶ್ವರ ಕಾಲೇಜು. ಇದು ನನ್ನನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಕಾಲೇಜು. ಆಡಳಿತಾ ಮಂಡಳಿಯ ಪ್ರೋತ್ಸಾಹದಿಂದ ನಾನು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು. ಹಲವಾರು ಉತ್ತಮ ವಿದ್ಯಾರ್ಥಿಗಳನ್ನು, ಸಾಧಕರನ್ನು ರೂಪಿಸಿದ ಕಾಲೇಜು ಶ್ರೀ ಗೋಕರ್ಣನಾಥೇಶ್ವರ ಕಾಲೇಜು ಎಂದು ನಾನು ಹೆಮ್ಮೆಯಿಂದ ಹೇಳುತ್ತೇನೆ ಎಂದು ಅವರು ಹೇಳಿದರು.

ದಿನದಿಂದ ದಿನಕ್ಕೆ ನಮ್ಮ ಸಂಸ್ಕೃತಿಯನ್ನು ನಾವು ಮರೆಯುತ್ತಿದ್ದು, ನಮ್ಮ ನೈಜ್ಯ ಸಂಸ್ಕೃತಿ ನಶಿಸಿ ಹೋಗುತ್ತಿದೆ. ಒಂದೆಡೆ ಈಗಿನ ಕಲಿಕಾ ಪದ್ದತಿ ಕೂಡ ಬದಲಾಗುತ್ತಿದೆ. ಹಿಂದಿನ ಕಾಲದ ಕಲಿಕಾ ಪದ್ದತಿ ಅಷ್ಟು ಚೆನ್ನಾಗಿತ್ತು. ಬೋಧನ ಕ್ರಮ ಕಠಿಣವಾಗಿದ್ದರೂ ಸಾಧನೆ ಮಾಡಲು ಸುಲಭವಾಗುತ್ತಿತ್ತು. ಮೂವತ್ತು ವರ್ಷಗಳ ಹಿಂದಿನ ಕಲಿಕೆಯ ಅಧ್ಯಾಪಕರು ಈಗ ಕಾಣ ಸಿಗುತ್ತಿಲ್ಲ. ಯಾವೂದೇ ವಿದ್ಯಾರ್ಥಿಯನ್ನು ತಿದ್ದಿ ತೀಡುವ ಅಧ್ಯಾಪಕರು ಅಂದಿನ ಕಾಲದಲ್ಲಿದ್ದರು. ಪ್ರತಿಭಾನ್ವಿತ ಅಧ್ಯಾಪಕರು ಇದ್ದಾಗ ಕಲಿಯುವ ವಿದ್ಯಾರ್ಥಿಗಳ ಭವಿಷ್ಯ ಉಜ್ವಾಲವಾಗುವುದು ಎಂದು ಸಂಕಮಾರ್ ಹೇಳಿದರು.

Gokarna_Alumini_day_2 Gokarna_Alumini_day_3 Gokarna_Alumini_day_4 Gokarna_Alumini_day_5 Gokarna_Alumini_day_6 Gokarna_Alumini_day_7 Gokarna_Alumini_day_8 Gokarna_Alumini_day_9

ಸಂಘದ ಗೌರವಾಧ್ಯಕ್ಷರಾದ ಶ್ರೀಯುತ ನಂದಗೋಪಾಲ್ ಶೆಣೈ ಅವರು ಮಾತನಾಡಿ, ನಮ್ಮ ಏಳಿಗೆಗೆ ಸಹಾಯ, ಸಹಕಾರ ಮಾಡಿದವರ ಸ್ಮರಣೆ ಮಾಡದಿದ್ದರೂ ಪರವಾಗಿಲ್ಲ. ಆದರೆ ಸಹಕಾರ ಪಡೆದವರು ಸಮಾಜದಲ್ಲಿ ಗಣ್ಯ ವ್ಯಕ್ತಿಗಳಾಗಿ ಮೂಡಿ ಬಂದಾಗ ಇನ್ನೊಬ್ಬರ ಏಳಿಗೆಗೆ ಸಹಾಯ-ಸಹಕಾರ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ನಿವೃತ್ತ ಶಾರೀರಿಕ ನಿರ್ದೇಶಕರಾದ ಶ್ರೀಯುತ ಪುರುಷೋತ್ತಮ ಪೂಜಾರಿಯವರನ್ನು ಅತಿಥಿಗಳು ಶಾಲು ಹೊದಿಸಿ ಸನ್ಮಾನಿಸಿ, ಗೌರವಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪುರುಷೋತ್ತಮ ಪೂಜಾರಿಯವರು, ಗ್ರಾಮೀಣ ಪ್ರದೇಶದಿಂದ ಬಂದವನಾದರೂ ತಾನು ಸಿಕ್ಕಿದ ಅವಕಾಶವನ್ನು ಸದ್ಪಯೋಗಪಡಿಸಿಕೊಂಡು, ಚಲದಿಂದ ಸಾಧನೆ ಮಾಡಿದ್ದಕ್ಕೆ ಈ ಒಂದು ಗೌರವ ಲಭಿಸಿದೆ ಎಂದು ಹೇಳಿದರು.

ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘ ಹಲವಾರು ಚಟುವಟಿಕೆಗಳ ಜೊತೆಗೆ ಪ್ರತಿಭೆಗಳನ್ನು ಗುರುತಿಸುವ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಷಯ. ಈ ಕಾಲೇಜಿನಲ್ಲಿ ಹಲವಾರು ಕ್ರೀಡಾಳುಗಳು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಕಾಲೇಜು ಆಡಳಿತ ಮಂಡಳಿ ಹಾಗೂ ಹಿರಿಯ ವಿದ್ಯಾರ್ಥಿಗಳ ಸಂಘ ಒಟ್ಟು ಸೇರಿ ಕ್ರೀಡಾ ಕ್ಷೇತ್ರದಲ್ಲಿ ಈ ಕಾಲೇಜು ವಿವಿ ಮಟ್ಟದಲ್ಲಿ ಗುರುತಿಸುವಂತಹ ರೀತಿಯಲ್ಲಿ ಪ್ರಯತ್ನಿಸಬೇಕು ಎಂದು ಪುರುಷೋತ್ತಮ ಪೂಜಾರಿ ಸಲಹೆ ನೀಡಿದರು.

Gokarna_Alumini_day_10 Gokarna_Alumini_day_11 Gokarna_Alumini_day_12 Gokarna_Alumini_day_13 Gokarna_Alumini_day_14 Gokarna_Alumini_day_15 Gokarna_Alumini_day_16 Gokarna_Alumini_day_17 Gokarna_Alumini_day_18 Gokarna_Alumini_day_19 Gokarna_Alumini_day_20 Gokarna_Alumini_day_21 Gokarna_Alumini_day_22 Gokarna_Alumini_day_23 Gokarna_Alumini_day_24 Gokarna_Alumini_day_25 Gokarna_Alumini_day_26 Gokarna_Alumini_day_27 Gokarna_Alumini_day_28 Gokarna_Alumini_day_29 Gokarna_Alumini_day_30 Gokarna_Alumini_day_31 Gokarna_Alumini_day_32 Gokarna_Alumini_day_33 Gokarna_Alumini_day_34 Gokarna_Alumini_day_35 Gokarna_Alumini_day_36 Gokarna_Alumini_day_37 Gokarna_Alumini_day_38 Gokarna_Alumini_day_39 Gokarna_Alumini_day_40 Gokarna_Alumini_day_41 Gokarna_Alumini_day_42 Gokarna_Alumini_day_43 Gokarna_Alumini_day_44 Gokarna_Alumini_day_45 Gokarna_Alumini_day_46 Gokarna_Alumini_day_47 Gokarna_Alumini_day_48 Gokarna_Alumini_day_49 Gokarna_Alumini_day_50 Gokarna_Alumini_day_51 Gokarna_Alumini_day_52 Gokarna_Alumini_day_53 Gokarna_Alumini_day_54 Gokarna_Alumini_day_55 Gokarna_Alumini_day_56 Gokarna_Alumini_day_57 Gokarna_Alumini_day_58 Gokarna_Alumini_day_59 Gokarna_Alumini_day_60 Gokarna_Alumini_day_61 Gokarna_Alumini_day_62 Gokarna_Alumini_day_63 Gokarna_Alumini_day_64 Gokarna_Alumini_day_65 Gokarna_Alumini_day_66 Gokarna_Alumini_day_67 Gokarna_Alumini_day_68 Gokarna_Alumini_day_69 Gokarna_Alumini_day_70 Gokarna_Alumini_day_71 Gokarna_Alumini_day_72 Gokarna_Alumini_day_73 Gokarna_Alumini_day_74 Gokarna_Alumini_day_75 Gokarna_Alumini_day_76 Gokarna_Alumini_day_77 Gokarna_Alumini_day_78 Gokarna_Alumini_day_79 Gokarna_Alumini_day_80 Gokarna_Alumini_day_81 Gokarna_Alumini_day_82 Gokarna_Alumini_day_83 Gokarna_Alumini_day_84 Gokarna_Alumini_day_85 Gokarna_Alumini_day_86 Gokarna_Alumini_day_87 Gokarna_Alumini_day_88 Gokarna_Alumini_day_89 Gokarna_Alumini_day_90

ಕಾರ್ಯಕ್ರಮದಲ್ಲಿ ಹಲವಾರು ವಿಧ್ಯಾರ್ಥಿಗಳನ್ನು ಗುರುತಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ಇದೇ ಸಂದರ್ಭದಲ್ಲಿ ವಿವಿ ಮಟ್ಟದಲ್ಲಿ ೭ನೇ ರ್‍ಯಾಂಕ್ ಗಳಿಸುವ ಮೂಲಕ ಬಿಎಡ್‌ನಲ್ಲಿ ಸಾಧನೆ ಮಾಡಿದ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಕುಮಾರಿ ಲತಾ ಇವರನ್ನು ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಸಂಘದ ಗೌರವಾಧ್ಯಕ್ಷರಾದ ಶ್ರೀಯುತ ನಂದಗೋಪಾಲ್ ಶೆಣೈ ಇವರ ದೇಣಿಗೆಯಿಂದ ವರ್ಷಪ್ರತಿಯಂತೆ ಈ ಬಾರಿಯೂ ಸಂಘದ ವತಿಯಿಂದ ಅರ್ಹ ಬಡ ಪ್ರತಿಭಾನ್ವಿತ ಮಕ್ಕಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ಈ ವರ್ಷ ಕೂಡ ಗುರುತಿಸಿದ ಕಾಲೇಜಿನ ಹತ್ತು ವಿಧ್ಯಾರ್ಥಿಗಳಿಗೆ ೧,೮೦,೦೦೦ ಸಹಾಯ ಧನ ವಿತರಿಲಾಯಿತು.

ಕಾಲೇಜಿನ ಕರೆಸ್ಪಾಂಡೆಂಟ್ ಶ್ರೀ ಜೈವಿಕ್ರಮ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಸ್ಗ್ವಾಗತಿಸಿ, ಪ್ರಸ್ತ್ವಾವನೆಗೈದ ಸಂಘದ ಅಧ್ಯಕ್ಷ ನವೀನ್‌ಚಂದ್ರ ಬಿ. ಅವರು, ಸುಮಾರು 5 ವರ್ಷಗಳಿಂದ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘವನ್ನು ಪ್ರತಿನಿಧಿಸಿ ಸಂಘದ ಮೂಲಕ ಹಲವಾರು ಚಟುವಟಿಕೆಗಳನ್ನು ನಡೆಸುತ್ತಾ ಬಂದಿರುತ್ತೇವೆ. ಮಾತ್ರವಲ್ಲದೇ ಇದು ಕಾಲೇಜಿನ ಮಕ್ಕಳಿಗೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ನೆರವಾಗುವ ಮೂಲಕ ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ಕಂಕಣಬದ್ಧವಾಗಿರುವ ಸಂಘವಾಗಿದೆ.

ವ್ಯಕ್ತಿತ್ವ ವಿಕಸನ, ಸ್ಪರ್ದಾತ್ಮಕ ಪರೀಕ್ಷಾ ತಯಾರಿ, ನಾಯಕತ್ವ ತರಬೇತಿ ಹೀಗೆ ಹಲವಾರು ಕಾರ್ಯಕ್ರಮಗಳನ್ನು ಪ್ರತಿ ವರ್ಷ ನಡೆಸುತ್ತಾ ಮಕ್ಕಳ ಸಂರ್ಪೂಣ ಬೆಳೆವಣಿಗೆ ಸಹಕಾರಿಯಾಗಿ ಸಂಘ ಬೆಳೆಯುತ್ತಿದ್ದು ಮುಂದೆಯೂ ಕೂಡ ಸಂಘದ ಸೇವಾಕಾರ್ಯವನ್ನು ಮುಂದುವರಿಸುವತ್ತ ಗಮನ ನೀಡುತ್ತಿದ್ದೇವೆ ಎಂದು ಹೇಳಿದರು.

ಕಾಲೇಜಿನ ನಿರ್ದೇಶಕ ಡಾ.ಗಂಗಾಧರ್.ಬಿ., ಕಾಲೇಜು ಆಡಳಿತಾ ಮಂಡಳಿ ಸದಸ್ಯ ವಸಂತ್ ಕಾರಂದೂರ್, ಕಾಲೇಜಿನ ಸಲಹೆಗಾರರಾದ ಡಾ. ರೇಣುಕ, ಡಾ.ಉಮ್ಮಪ್ಪ ಪೂಜಾರಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ದಿನೇಶ್ ಕಲ್ಲಡ್ಕ ಸಂಘದ ವರದಿ ವಾಚಿಸಿದರು. ಡಾ. ದಿನಕರ್ ಪಚ್ಚನಾಡಿ ಹಾಗೂ ಶ್ರೀಮತಿ ಜಯಶ್ರಿ ಮೇಡಂ ಕಾರ್ಯಕ್ರಮ ನಿರ್ವಾಹಿಸಿದರು. ಸಂಘದ ಉಪಾಧ್ಯಕ್ಷ ಸುನೀಲ್ ದತ್ತ್ ಪೈ ವಂದಿಸಿದರು. ಸಹಕಾರ್ಯದರ್ಶಿ ವರದರಾಜ್, ಕೋಶಾಧಿಕಾರಿ ಧನಂಜಯ್ ನಾಯಕ್ ಉಪಸ್ಥಿತರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮ :

ಸಭಾ ಕಾರ್ಯಕ್ರಮದ ಬಳಿಕ ಹಿರಿಯ ವಿದ್ಯಾರ್ಥಿಗಳ ಸಂಘದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಸುನೀಲ್ ದತ್ತ್ ಪೈ ಹಾಗೂ ಜಯಶ್ರೀ ಇವರ ಗಾನ ಮಾಧುರ್ಯಾ ನೆರೆದಿದ್ದ ಸಂಗೀತಾ ಪ್ರೀಯರ ಮನಸೂರೆಗೊಂಡಿತ್ತು.

ವರದಿ ಹಾಗೂ ಚಿತ್ರ ಸತೀಶ್ ಕಾಪಿಕಾಡ್

Write A Comment