ಮನೋರಂಜನೆ

ರಾಮ್ ಚರಣ್ ಉಪಾಸನ ದಾಂಪತ್ಯ ಬಿರುಕಿಗೆ ಕಾರಣವಾದ್ರ ಸಾನಿಯಾ?

Pinterest LinkedIn Tumblr

Charan_Sania

ಹೈದರಾಬಾದ್: ಟಾಲಿವುಡ್ ಮೆಗಸ್ಟಾರ್ ಚಿರಂಜೀವಿ ಪುತ್ರ ರಾಮ್ ಚರಣ್ ತೇಜಾ ಉಪಾಸನ ದಾಂಪತ್ಯದಲ್ಲಿ ಬಿರುಕು ಮಾಡಿದೆ. ಗೆಳತಿ ಸಾನಿಯಾ ಮಿರ್ಜಾರ ಜತೆ ರಾಮ್ ಚರಣ್ ಹೆಚ್ಚಾಗಿ ಓಡಾಡುತ್ತಿರುವುದೇ ಇದಕ್ಕೆಲ್ಲಾ ಕಾರಣ ಎಂದು ಹೇಳಲಾಗುತ್ತಿದ್ದು, ವಿಚ್ಛೇದನ ನೀಡುವಂತೆ ಉಪಾಸನ ಕಮಿನೇನಿ ಕೇಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಮ್ ಚರಣ್ ತೇಜಾ ಉಪಾಸನ 2012 ಜೂನ್ 14 ರಂದು ಅದ್ದೂರಿಯಾಗಿ ಮದ್ವೆಯಾಗಿ ವೈವಾಹಿಕ ದಾಂಪತ್ಯಕ್ಕೆ ಕಾಲಿರಿಸಿದ್ದರು. ಮದುವೆಯಾಗಿ ಮೂರು ವರ್ಷಗಳ ದಾಂಪತ್ಯ ಜೀವನ ವಿಚ್ಚೇದನ ಅಂತಕ್ಕೆ ಬಂದಿದ್ದು, ಇದಕ್ಕೆಲ್ಲಾ ಕಾರಣ ಟೆನ್ನಿಸ್ ಪ್ಲೇಯರ್ ಸಾನಿಯಾ ಮಿರ್ಜಾ ಅಂತ ಸುದ್ದಿ ಇದೆ .

ನಟ ರಾಮ್ ಚರಣ್- ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಇಬ್ಬರು ಐದು ವರ್ಷದ ಸ್ನೇಹಿತರು. ಇವರಿಬ್ಬರ ನಡುವಿನ ಸ್ನೇಹ ಸಂಬಂಧ ರಾಮ್ ಚರಣ್ ಪತ್ನಿ ಉಪಾಸನಗೆ ಇಷ್ಟ ಆಗುತ್ತಿಲ್ಲ. ಇನ್ನೂ ಪಾಕಿಸ್ತಾನಿ ಕ್ರಿಕೆಟರ್ ಶೋಯಬ್ ಮಲ್ಲಿಕ್ ಅವರನ್ನ ಮದ್ವೆಯಾಗಿರುವ ಸಾನಿಯಾ ಮಿರ್ಜಾ ಸಂಸಾರ ಮಾಡ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ, ಆದ್ರೆ ಪತಿ ಶೋಯಬ್ ಜೊತೆ ಜಗಳ ಮಾಡಿಕೊಂಡರೆ ನಟ ರಾಮ್ ಚರಣ್ ತೇಜಾ ಜೊತೆ ಫ್ರೀಟೈಮ್ ಕಳೆಯುತ್ತಾರೆ ಅನ್ನೋ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

ರಾಮ್ ಚರಣ್ ಉಪಾಸನಳನ್ನ ಬಿಟ್ಟು ಪ್ರತಿಯೊಂದು ಪಾರ್ಟಿಗೂ ಕೂಡ ಫ್ರೆಂಡ್ ಸಾನಿಯಾ ಜೊತೆ ಹೋಗುತ್ತಿರುವುದರಿಂದ ಉಪಾಸನ ರಾಮ್ ಚರಣ್ ವಿಚ್ಚೇದನ ಬೇಕು ಅಂತಾ ಕೇಳುತ್ತಿದ್ದಾರಂತೆ.

Write A Comment