
ಮಂಗಳೂರು / ಉಳ್ಳಾಲ : ವೈದ್ಯಕೀಯ ವಿದ್ಯಾರ್ಥಿಗಳ ಕಾರು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಓರ್ವ ವಿದ್ಯಾರ್ಥಿ ಗಂಭೀರ ಗಾಯಗೊಂಡಿದ್ದು, ಇತರ ನಾಲ್ವರು ಅಲ್ಪಸ್ವಲ್ಪ ಗಾಯಗೊಂಡ ಘಟನೆ ದೇರಳಕಟ್ಟೆಯ ನಿತ್ಯಾನಂದನಗರ ಬಳಿಯ ಕ್ಷೇಮ ಕಾಲೇಜಿನ ಮುಂಭಾಗ ನಡೆದಿದೆ.
ಮ್ಯಾಥ್ಯು ವರ್ಗೀಸ್ (21)ಗೆ ಗಂಭೀರ ಪ್ರಮಾಣದ ಏಟು ತಗಲಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದಾನೆ, ಜಾಜ್‌ರ್ ರೋಹನ್ (21), ಕೌಶಿಕ್ ಥೋಮಸ್, ಸಂಶಾದ್ , ರಾಜೀವ್ ಎಂಬ ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಿದ್ದು, ಎಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇವರೆಲ್ಲರು ಕೇರಳ ಮೂಲದ ವಿದ್ಯಾರ್ಥಿಗಳೆಂದು ತಿಳಿದು ಬಂದಿದೆ.ಮ್ಯ್ಯಾಥ್ಯೂ ವರ್ಗೀಸ್, ಜಾರ್ಜ್ ರೋಹನ್, ಕೌಶಿಕ್ ಥೋಮಸ್, ಸಂಶದ್, ರಾಜೀವ್ ಐವರು ಕ್ಷೇಮ ಕಾಲೇಜಿನ ಎಮ್.ಬಿ.ಬಿ.ಎಸ್ ವಿದ್ಯಾರ್ಥಿಗಳು.


ಈ ಐವರು ವಿದ್ಯಾರ್ಥಿಗಳು ದೇರಳಕಟ್ಟೆಯ ಬಾರೊಂದರಲ್ಲಿ ಊಟ ಮುಗಿಸಿ ಕುತ್ತಾರು ಕಡೆಗೆ ಕಾರಿನಲ್ಲಿ ಹೊರಟಿದ್ದರು. ಎಲ್ಲಾ ವಿದ್ಯಾರ್ಥಿಗಳು ದೇರಳಕಟ್ಟೆಯ ಮೀಟಿಂಗ್ ಪಾಯಿಂಟ್ ಬಾರಿನಲ್ಲಿ ಕಂಠ ಪೂರ್ತಿ ಕುಡಿದು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.ದೇರಳಕಟ್ಟೆಯ ನಿತ್ಯಾನಂದನಗರ ಬಳಿಯ ಕ್ಷೇಮ ಕಾಲೇಜಿನ ಮುಂಭಾಗ ತಲುಪುತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ. ಪರಿಣಾಮ ಕಾರೊಳಗಿದ್ದ ಎಲ್ಲಾ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ಕಾರಿನಲ್ಲಿ ಮದ್ಯದ ಬಾಟಲುಗಳು ಪತ್ತೆಯಾಗಿವೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.