ಕನ್ನಡ ವಾರ್ತೆಗಳು

ಮಾರ್ಚ್ 4,6 – ಭಾರತದ ಅತಿದೊಡ್ಡ ಮೀನುಹಬ್ಬ: ರಾಷ್ಟ್ರೀಯ ಮತ್ಸ್ಯಮೇಳ 2016

Pinterest LinkedIn Tumblr

Mathsyamela_fish_Festival

ಮಂಗಳೂರು,ಮಾ.02: ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯ, ಮೀನುಗಾರಿಕೆ ಮಹಾವಿದ್ಯಾಲಯ, ಮಂಗಳೂರು ಮತ್ತು ಮೀನುಗಾರಿಕೆ ಇಲಾಖೆ, ಕರ್ನಾಟಕ ಸರ್ಕಾರ, ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ, ಹೈದರಾಬಾದ್, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ನಿಯಮಿತ, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಮತ್ಸ್ಯಮೇಳ 2016 ನ್ನು ಮಾರ್ಚ್ 04-06, ರಂದು ನಗರದ ಟಿ.ಎಂ.ಎ. ಪೈ ಇಂಟರ್ ನ್ಯಾಷನಲ್ ಕನ್ವೆನ್ಷನ್ ಸೆಂಟರ್, ಅಯೋಜಿಸಲಾಗಿದೆ.

ಈ ಮೇಳದ ಮುಖ್ಯ ಉದ್ದೇಶ ಮೀನುಗಾರಿಕೆ ರಂಗದಲ್ಲಾಗುತ್ತಿರುವ ಆವಿಷ್ಕಾರಗಳು, ಅಭಿವೃದ್ಧಿ, ವೈಜ್ಞಾನಿಕ ಯಶೋಗಾಥೆಗಳು, ರೈತರ ಆವಿಷ್ಕಾರಗಳನ್ನು ಮತ್ತು ಈ ರಂಗದಲ್ಲಿರುವ ಅವಕಾಶಗಳನ್ನು ಜನರಿಗೆ ಪರಿಚಯಿಸುವ ಸಲುವಾಗಿ, ಈ ಮೇಳವನ್ನು ರಾಷ್ಟ್ರೀಯ ಮಟ್ಟದಲ್ಲಿ ಅಯೋಜಿಸಲು ತೀರ್ಮಾನಿಸಿಲಾಗಿದೆ.

ದೇಶದ ಮೀನಿನ ಉತ್ಪಾದನೆಯನ್ನು ಹೆಚ್ಚಿಸಲು ಶಿಕ್ಷಣ ಸಂಸ್ಥೆಗಳು, ಸಂಶೋಧನಾ ಕೇಂದ್ರಗಳು ಮತ್ತು ಇತರೆ ಸಂಘ ಸಂಸ್ಥೆಗಳ ಸಾಂಘಿಕ ಕನಸು, ಜ್ಞಾನದ ಸಹಕಾರ ಮತ್ತು ಸಮನ್ವಯ ಕಾರ್ಯಾಚರಣೆಯಿಂದ ಮೀನುಗಾರಿಕೆ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಿದಲ್ಲಿ ಆಹಾರ ಉತ್ಪಾದನೆಯ ಹೆಚ್ಚಳದ ಜೊತೆಗೆ ಉದ್ಯೋಗ ಸೃಷ್ಟಿಸುವಲ್ಲಿ, ಗ್ರಾಮೀಣ ಅಭಿವೃದ್ಧಿಯಲ್ಲಿ ಮತ್ತು ಅಪೌಷ್ಟಿಕತೆ ನೀಗಿಸುವಲ್ಲಿ ಸಫಲರಾಗಬಹುದು. ಇದಕ್ಕೆ ಅಗತ್ಯವಿರುವ ಸಮನ್ವಯತೆಯನ್ನು ತರಲು ಈ ಮೇಳದ ಎರಡನೇ ದಿನ ಎರಡನೇ ನೀಲಿಕ್ರಾಂತಿ: ಮುಂದಿನ ಹಾದಿ ಎಂಬ ವೈಜ್ಞಾನಿಕ ವಿಚಾರ ಸಂಕಿರಣವನ್ನು ಅಹ್ವಾನಿತರಿಗೆ ಮಾತ್ರ ಆಯೋಜಿಸಲಾಗಿದೆ.

ಈ ಕಾರ್ಯಕ್ರಮವನ್ನು ಶ್ರೀ ಅಭಯಚಂದ್ರ ಜೈನ್, ಮೀನುಗಾರಿಕೆ ಮತ್ತು ಯುವಸಬಲೀಕರಣ ಸಚಿವರು, ಕರ್ನಾಟಕ ಸರ್ಕಾರ ಇವರು ಉದ್ಘಾಟಿಸಲಿದ್ದು, ಶ್ರೀ. ಬಿ ರಮಾನಾಥ ರೈ, ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಸಚಿವರು ಹಾಗೂ ಜಿಲ್ಲ ಉಸ್ತುವಾರಿ ಸಚಿವರು, ಸನ್ಮಾನ್ಯ ಯು.ಟಿ. ಖಾದರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಉಪಸ್ಥಿತರಿರುತ್ತಾರೆ. ಶ್ರೀ. ಜೆ.ಆರ್ ಲೋಬೋ, ಶಾಸಕರು, ಮಂಗಳೂರು ದಕ್ಷಿಣ ಕ್ಷೇತ್ರ ಹಾಗೂ ಅಧ್ಯಕ್ಶರು, ರಾಜ್ಯ ವಿಧಾನ ಮಂಡಲದ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಇವರು ಅಧ್ಯಕ್ಷತೆ ವಹಿಸಲಿದ್ದಾರೆ.

ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕರು, ಕರ್ನಾಟಕ, ಶ್ರೀಮತಿ ಶಕುಂತಳಾ ಟಿ. ಶೆಟ್ಟಿ, ಮಾನ್ಯ ಶಾಸಕರು, ಪುತ್ತೂರು ವಿಧಾನ ಸಭಾ ಕ್ಷೇತ್ರ ಹಾಗೂ ಸಂಸದೀಯ ಕಾರ್ಯದರ್ಶಿ, ಕನ್ನಡ ಸಂಸ್ಕ್ರತಿ ಇಲಾಖೆ, ಶ್ರೀ ನಳಿನ್ ಕುಮಾರ್ ಕಟೀಲ್, ಲೋಕಸಭಾ ಸದಸ್ಯರು, ದಕ್ಷಿಣ ಕನ್ನಡ ಜಿಲ್ಲೆ, ಶ್ರೀ ಬಿ.ಎ ಮೊಹಿಯುದ್ದೀನ್ ಬಾವಾ, ಶಾಸಕರು, ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ, ಶ್ರೀ ಕೆ ವಸಂತ ಬಂಗೇರ, ಶಾಸಕರು, ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ, ಶ್ರೀ ಎಸ್. ಅಂಗಾರ, ಶಾಸಕರು, ಸುಳ್ಯ ವಿಧಾನ ಸಭಾ ಕ್ಷೇತ್ರ, ಶ್ರೀ ಐವನ್ ಡಿಸೋಜ, ಶಾಸಕರು, ವಿಧಾನ ಪರಿಷತ್, ಶ್ರೀ ಕೆ. ಪ್ರತಾಪ ಚಂದ್ರ ಶೆಟ್ಟಿ, ಶಾಸಕರು, ವಿಧಾನ ಪರಿಷತ್, ಶ್ರೀ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕರು, ವಿಧಾನ ಪರಿಷತ್, ಶ್ರೀಮತಿ ಜೆಸಿಂತಾ ವಿಜಯ ಆಲ್ಫ್ರೇಡ್, ಮಹಾಪೌರರು, ಮಂಗಳೂರು ಮಹಾನಗರ ಪಾಲಿಕೆ, ಡಾ. ಸಿ. ವಾಸುದೇವಪ್ಪ, ಕುಲಪತಿಗಳು, ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ, ಶ್ರೀ ಎ.ಬಿ.ಇಬ್ರಾಹಿಂ, ಭಾ.ಆ.ಸೇ., ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ ಜಿಲ್ಲೆ, ಶ್ರೀಮತಿ ಪಿ.ಐ ಶ್ರೀವಿದ್ಯಾ, ಭಾ.ಆ.ಸೇ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ್, ದ.ಕ. ಜಿಲ್ಲೆ, ಶ್ರೀ ಹಿರಿಯಣ್ಣ, ಚೇರ್ಮನ್, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ನಿಯಮಿತ, ಮಂಗಳೂರು, ಶ್ರೀ. ಹೆಚ್. ಎಸ್. ವೀರಪ್ಪಗೌಡ, ನಿರ್ದೇಶಕರು, ಮೀನುಗಾರಿಕೆ ಇಲಾಖೆ, ಡಾ. ಗೋಪಾಲಕೃಷ್ಣ, ಕ.ಆ.ಸೇ., ಆಯುಕ್ತರು, ಮಹಾನಗರ ಪಾಲಿಕೆ, ಮಂಗಳೂರು, ಶ್ರೀ. ವಿ.ಕೆ ಶೆಟ್ಟಿ,ವ್ಯವಸ್ಥಾಪಕ ನಿರ್ದೇಶಕರು, ಕ.ಮೀ.ಅ.ನಿ.ನಿ, ಮಂಗಳೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಮತ್ಸ್ಯಮೇಳ 2016  ರ ಆಕರ್ಷಣೆಗಳು: 
1.ಮೀನುಗಾರಿಕೆ ರಂಗದ ಶೈಕ್ಷಣಿಕ ಸಂಸ್ಥೆಗಳು, ಉದ್ಯಮ ಸಂಸ್ಥೆಗಳು
2.ಮೀನಿನ ಆಹಾರ ಮತ್ತು ಖಾದ್ಯಮಳಿಗೆಗಳು
3.ನೇಚರ್ ಅಕ್ವೇರಿಯಂ ಮತ್ತು ಮೃದ್ವಂಗಿಗಳ ಪ್ರದರ್ಶನ
4.ಪಶ್ಚಿಮ ಘಟ್ಟದ ಮೀನುಗಳ ಪ್ರದರ್ಶನ
5.ತಾಜಾ ಮೀನು ಮತ್ತು ಅಲಂಕಾರಿಕ ಮೀನುಗಳ ಪ್ರದರ್ಶನ ಮತ್ತು ಮಾರಾಟ
6.ಮೀನಿನ ಖಾದ್ಯ ತಯಾರಿಕೆ ಸ್ಪರ್ಧೆ (ದಿನಾಂಕ ೦೪ ಮಾತ್ತು ೦೫ ಮಾರ್ಚ್)
7. (05.03.2016 ) ರಂದು ಬೆಳಗ್ಗೆ 9.30 ಕ್ಕೆ ರಾಷ್ಟ್ರೀಯ ಮೀನುಗಾರಿಕೆ ಸಮಾವೇಶ (ಆಹ್ವಾನಿತರಿಗೆ ಮಾತ್ರ)
8.ಪಿಲಿಕುಳದಲ್ಲಿ ದಿನಾಂಕ 6.03.2016 ರಂದು ಗಾಳಶಿಕಾರಿ ಸ್ಪರ್ಧೆ ಮತ್ತು ಡೆರಿಕ್ ಡಿಸೋಜ, ನುರಿತ ಶಿಕಾರಿ ತಜ್ಞರೊಡನೆ ಸಮಾಲೋಚನೆ
ಅರ್ಧ ಮ್ಯಾರಥಾನ್: ಮೀನಿಗಾಗಿ ಓಟ (ಕಾರ್ಪೋರೇಷನ್ ಬ್ಯಾಂಕ್ ಸಹಯೋಗದೊಂದಿಗೆ ಈಗಾಗಲೇ ೨೮.೦೨.೨೦೧೬ ರಂದು ೩೦೦ ಜನ ವಿದ್ಯಾರ್ಥಿಗಳು ಓಡಿ ಕಾರ್ಯಕ್ರಮ ಯಶಸ್ವಿಯಾಗಿ ನೆಡೆದಿದೆ)

ಮೀನುಗಾರಿಕೆ ರಂಗದ ಉದ್ಯೋಗಾವಕಾಶಗಳ ಬಗ್ಗೆ ಸಲಹೆ
ದಿನಾಂಕ 06.03.2016 ರಂದು ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನೆಡೆಯಲಿದ್ದು ಕರ್ನಾಟಕ ಸರ್ಕಾರದ ಅರಣ್ಯ ಸಚಿವರು ಮತ್ತು ಜಿಲ್ಲ ಉಸ್ತುವಾರಿ ಸಚಿವರಾದ ಶ್ರೀ ರಮಾನಾಥ ರೈ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ.

ಪಶು ಸಂಗೋಪನೆ ಸಚಿವರಾದ ಶ್ರೀ ಎ. ಮಂಜು, ಮೀನುಗಾರಿಕೆ ಸಚಿವರಾದ ಶ್ರೀ ಅಭಯಚಂದ್ರ ಜೈನ್, ಆರೋಗ್ಯ ಸಚಿವರಾದ ಶ್ರೀ. ಯು.ಟಿ. ಖಾದರ್, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕರು, ಕರ್ನಾಟಕ, ಶ್ರೀ ನಳಿನ್‌ಕುಮಾರ್ ಕಟೀಲ್, ಲೋಕಸಭಾ ಸದಸ್ಯರು, ದಕ್ಷಿಣ ಕನ್ನಡ ಜಿಲ್ಲೆ, ಶ್ರೀ ಬಿ.ಎ ಮೊಹಿಯುದ್ದೀನ್ ಬಾವಾ, ಶಾಸಕರು, ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ, ಶ್ರೀ ಐವನ್ ಡಿಸೋಜ, ಶಾಸಕರು, ವಿಧಾನ ಪರಿಷತ್, ಶ್ರೀಮತಿ ಜೆಸಿಂತಾ ವಿಜಯ ಆಲ್ಫ್ರೇಡ್, ಮಹಾಪೌರರು, ಮಂಗಳೂರು ಮಹಾನಗರ ಪಾಲಿಕೆ, ಡಾ. ಸಿ. ರೇಣುಕಾಪ್ರಸಾದ್, ಕುಲಪತಿಗಳು, ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ, ಶ್ರೀ ಎ.ಬಿ. ಇಬ್ರಾಹಿಂ, ಭಾ.ಆ.ಸೇ, ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ ಜಿಲ್ಲೆ, ಶ್ರೀಮತಿ ಪಿ.ಐ. ಶ್ರೀವಿದ್ಯಾ, ಭಾ.ಆ.ಸೇ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ್, ದ.ಕ. ಜಿಲ್ಲೆ, ಶ್ರೀ ಹಿರಿಯಣ್ಣ, ಚೇರ್ಮನ್, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ನಿಯಮಿತ, ಮಂಗಳೂರು, ಶ್ರೀ. ಹೆಚ್. ಎಸ್. ವೀರಪ್ಪಗೌಡ, ನಿರ್ದೇಶಕರು, ಮೀನುಗಾರಿಕೆ ಇಲಾಖೆ, ಡಾ. ಹೆಚ್.ಎಂ. ಜಯಪ್ರಕಾಶ್, ಕುಲಸಚಿವರು, ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ, ಶ್ರೀ. ವಿ.ಕೆ ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ನಿಯಮಿತ, ಮಂಗಳೂರು, ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

Write A Comment