ಮನೋರಂಜನೆ

“ಗ್ರೇಟ್ ಖಲಿ”ಗೆ ಸವಾಲು ಹಾಕಿದ ಕೃಷ್ಣನ್ ಕುಮಾರ್ ! ನಕಲಿ ಕುಸ್ತಿ ಬಿಡಿ, ನನ್ನೊಂದಿಗೆ ನೈಜ ಕುಸ್ತಿಗೆ ಬನ್ನಿ: “ಭಾರತ ಮತ್ತು ಭಾರತೀಯರನ್ನು ಮೂರ್ಖರನ್ನಾಗಿಸುವುದನ್ನು ಬಿಡಿ”

Pinterest LinkedIn Tumblr

khali

ಡೆಹ್ರಾಡೂನ್: ಉತ್ತರಾಖಂಡ್ ನ ಹಲ್ದವಾನಿಯಲ್ಲಿ ಏರ್ಪಡಿಸಲಾಗಿದ್ದ ಪ್ರದರ್ಶನ ಪಂದ್ಯವೊಂದರಲ್ಲಿ ಎದುರಾಳಿ ಸ್ಪರ್ಧಿಗಳಿಂದ ಹೊಡೆತ ತಿಂದು, ಆಸ್ಪತ್ರೆ ಸೇರಿ ಸುದ್ದಿಗೆ ಗ್ರಾಸವಾಗಿದ್ದ ರೆಸ್ಲರ್ “ಗ್ರೇಟ್ ಖಲಿ”ಗೆ ಭಾರತದ ಕುಸ್ತಿ ಪಟುವೊಬ್ಬರು ಸವಾಲು ಹಾಕಿದ್ದಾರೆ.

ತಮ್ಮ ತಲೆಯಿಂದ ರಕ್ತ ಹರಿಸಿದ್ದ ಆಟಗಾರನ ವಿರುದ್ಧ ಮತ್ತೆ ಸ್ಪರ್ಧಿಸಿ ಸೇಡು ತೀರಿಸಿಕೊಂಡಿದ್ದ ಡಬ್ಲ್ಯೂಡಬ್ಲ್ಯೂಇ ಆಟಗಾರ ದಿ ಗ್ರೇಟ್ ಖಲಿಗೆ ಇದೀಗ ದೇಸೀ ಕ್ರೀಡಾಪಟು ಕೃಷ್ಣನ್ ಕುಮಾರ್ ಎಂಬುವವರು ಸವಾಲು ಹಾಕಿದ್ದು, “ನಕಲಿ ಕುಸ್ತಿ ಬಿಟ್ಟು, ನನ್ನೊಂದಿಗೆ ನೈಜ ಕುಸ್ತಿ ಮಾಡಿ” ಎಂದು ಹೇಳಿದ್ದಾರೆ.

ಈ ಕುರಿತಂತೆ ಖಾಸಗಿ ಮಾಧ್ಯಮವೊಂದ ಜೊತೆ ಮಾತನಾಡಿರುವ ಕೃಷ್ಣನ್ ಕುಮಾರ್, “ಸುಳ್ಳು ಕುಸ್ತಿಯಾಟವಾಡಿ ಭಾರತ ಮತ್ತು ಭಾರತೀಯರನ್ನು ಮೂರ್ಖರನ್ನಾಗಿಸುವುದನ್ನು ಬಿಡಿ. ನನ್ನೊಂದಿಗೆ ನೈಜವಾಗಿ ಕುಸ್ತಿಯಾಡಲು ಬನ್ನಿ. ನಿಜ ಹೇಳುವುದಾದರೆ ಪ್ರಪಂಚಕ್ಕೆ ಗೊತ್ತಿದೆ ನಿಜವಾದ ಕುಸ್ತಿ ಯಾವುದು ಎಂದು ಅವರು ಹೇಳಿದ್ದಾರೆ.

ಕೃಷ್ಣನ್ ಕುಮಾರ್ ಒಲಿಂಪಿಕ್ಸ್ ನಲ್ಲಿ 125 ಕೆಜಿ ತೂಕದ ಕುಸ್ತಿ ಪಂದ್ಯಾವಳಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು ಎಂದು ಪತ್ರಿಕೆ ವರದಿಯೊಂದು ವರದಿ ಮಾಡಿದೆ. ಇದೀಗ ಖಲಿ ಕುರಿತಂತೆ ಮಾತನಾಡಿರು ಕೃಷ್ಣ ಕುಮಾರ್, ಖಲಿ ಫೇಕ್ ಸ್ಟಂಟ್ ಮಾಡಿದ್ದಾರೆ. ಅಖಾಡದಲ್ಲಿ ಸುಳ್ಳು ಹಾಗೂ ನಕಲಿ ಕುಸ್ತಿಯನ್ನು ಪ್ರದರ್ಶಿಸುತ್ತಿದ್ದಾರೆ. ಅವರು ನಿಜಕ್ಕೂ ಕುಸ್ತಿ ಆಡುವುದೇ ಆದರೆ, ನಕಲಿ ಬಿಟ್ಟು ಅಸಲಿಯಾಗಿ ನನ್ನೊಂದಿಗೆ ಕುಸ್ತಿ ಮಾಡಲಿ ಎಂದು ಸವಾಲು ಹಾಕಿದ್ದಾರೆ.

Write A Comment