ಕನ್ನಡ ವಾರ್ತೆಗಳು

ಮಾರ್ಚ್ 5ರಿಂದ 8 – ಸೂಟರ್‌ಪೇಟೆ ಶ್ರೀ ಕೋರ್ದಬ್ಬು ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ

Pinterest LinkedIn Tumblr

sutarpete_temple_photo

ಸೂಟರ್‌ಪೇಟೆ: ಅತೀ ಪುರಾತನ ಬಬ್ಬುಸ್ವಾಮಿ ಕ್ಷೇತ್ರಗಳಲ್ಲಿ ಒಂದಾಗಿರುವ ಸೂಟರ್‌ಪೇಟೆ ಶ್ರೀ ಕೋರ್ದಬ್ಬು ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ ಮಾರ್ಚ್ 5 ರಿಂದ 8ರವರೆಗೆ ನಡೆಯಲಿದೆ. ವಿಶಿಷ್ಠ ಭೂತರಾಧನೆಯ ಪರಂಪರೆಯನ್ನು ಉಳಿಸಿಕೊಂಡು ಬಂದಿರುವ ಶ್ರೀ ಕ್ಷೇತ್ರವು ಇತ್ತೀಚೆಗೆ ಪುನರ್ ನಿರ್ಮಾಣಗೊಂಡು ಬ್ರಹ್ಮಕಲಶೋತ್ಸವದಲ್ಲಿ ಸಂಪನ್ನಗೊಂಡಿದೆ.ಇದೀಗ ವರ್ಷಾವಧಿ ಉತ್ಸವಕ್ಕೆ ಶ್ರೀ ಕ್ಷೇತ್ರವು ಅಣಿಯಾಗಿದೆ.

ಮಾರ್ಚ್ 5ರಂದು ಬೆಳಿಗ್ಗೆ ಹೋಮ ಮತ್ತು ಶ್ರೀ ಬಬ್ಬುಸ್ವಾಮಿ, ಪಂಜುರ್ಲಿ, ಗುಳಿಗ ದೈವಗಳ ದರ್ಶನ ಸೇವೆಯೊಂದಿಗೆ ಭಂಡಾರ ಏರುವುದು, ಮಧ್ಯಾಹ್ನ ಸ್ಥಳದ ಗುಳಿಗ ದೈವದ ನೇಮ, ರಾತ್ರಿ ಭಗವಾನ್ ಶ್ರೀ ಬಬ್ಬುಸ್ವಾಮಿ ಹಾಗೂ ತನ್ನಿಮಾನಿಗ ನೇಮೋತ್ಸವ ನಡೆಯಲಿದೆ.

ಮಾರ್ಚ್ 6 ರಂದು ಸಂಜೆ ರಾಹುಗುಳಿಗ ನೇಮ, ರಾತ್ರಿ ಶ್ರೀ ಪಂಜುರ್ಲಿ,ಗುಳಿಗ ನೇಮೋತ್ಸವ ಮಾರ್ಚ್ 7 ರಂದು ಮಧ್ಯಾಹ್ನ ಧರ್ಮ ದೈವದ ನೇಮ ,ರಾತ್ರಿ ಸುಬ್ಬಿಗುಳಿಗ ಹಾಗೂ ಸುಬ್ಯಮ್ಮ ನೇಮೋತ್ಸವ ನಡೆಯಲಿದೆ.

ಮಾರ್ಚ್ 8ರಂದು ಮಧ್ಯಾಹ್ನ ಸಂಕಳೆ ಗುಳಿಗ ನೇಮ ರಾತ್ರಿ ಶ್ರೀ ಕೊರಗಜ್ಜ ನೇಮ ಹಾಗೂ ಭಂಡಾರ ಇಳಿಯುವುದು.

ಸತ್ಯನಾರಾಯಣ ಪೂಜೆ:
ಮಾಚ್  4 ರಂದು ವರ್ಷಂಪ್ರತಿ ನಡೆಯುವಂತೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯು ಶ್ರೀ ಕ್ಷೇತ್ರದಲ್ಲಿ ಸಂಜೆ6ಗಂಟೆಗೆ ನಡೆಯಲಿದೆ.ಸಾರ್ವಜನಿಕ ಅನ್ನಸಂತರ್ಪಣೆಯು ಉತ್ಸವದ ಪ್ರತೀ ದಿನವು ಶ್ರೀ ಕ್ಷೇತ್ರದಲ್ಲಿ ನಡೆಯಲಿದೆ ಎಂದು ದೈವಸ್ಥಾನದ ಗುರಿಕಾರರಾದ ಶ್ರೀ ಎಸ್.ರಾಘವೇಂದ್ರ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Write A Comment