
ಮಂಗಳೂರು,ಮಾ.02 : ಮಂಗಳೂರಿನ ಸೀಮಾ ಶುಲ್ಕ ಇಲಾಖೆಯಲ್ಲಿ ಮುಖ್ಯ ಲೆಕ್ಕಾಧಿಕಾರಿಯಾಗಿ ನಿವೃತ್ತರಾದ ಶ್ರೀ ಕೆ.ಶೇಕ್ ಅಬ್ದುಲ್ ಕರೀಮ್ ಅವರಿಗೆ ಇಲಾಖೆಯಲ್ಲಿ ಅವರು ಸಲ್ಲಿಸಿದ ಉತ್ಕೃಷ್ಟ ಸೇವೆಗಾಗಿ 2015 ರ ಸಾಲಿನ ರಾಷ್ಟ್ರಪತಿಗಳ ಪದಕವು ಲಭಿಸಿದೆ.
ಈ ಪುರಸ್ಕಾರವನ್ನು ದಿನಾಂಕ 24-02-2016 ರಂದು ನವದೆಹಲಿಯಲ್ಲಿ ಜರಗಿದ ಸಮಾರಂಭದಲ್ಲಿ ಕೇಂದ್ರ ವಿತ್ತ ಸಚಿವ ಶ್ರೀ ಅರುಣ್ ಜೇತ್ಲೀ ಅವರು ಪ್ರದಾನ ಮಾಡಿದರು.
ಶ್ರೀ ಕರೀಮ್ ಅವರು ಕೋಟೆಕಾರಿನವರಾಗಿದ್ದು ,ಇಲಾಖೆಯಲ್ಲಿ ಅವರು 41 ವರ್ಷಗಳ ಕಾಲ ಸಲ್ಲಿಸಿದ ಅಮೋಘ ಸೇವೆಗಾಗಿ ಈ ಮಾನ್ಯತೆಯು ಅವರಿಗೆ ಸಂದಿದೆ.