ಕನ್ನಡ ವಾರ್ತೆಗಳು

ಅಪ್ರಾಪ್ತ ದಲಿತ ಬಾಲಕಿ ಅತ್ಯಾಚಾರ ಯತ್ನ ಪ್ರಕರಣ : ಉಪ್ಪಿನಂಗಡಿ ಎಸ್ಐ ಅಮಾನತಿಗೆ ಆಗ್ರಹ

Pinterest LinkedIn Tumblr

sc_st_sabhe_1

ಮಂಗಳೂರು,ಮಾ.02 : ಪುತ್ತೂರು ವ್ಯಾಪ್ತಿಯ ದಲಿತ ಬಾಲಕಿಯೊಬ್ಬಳ ಮೇಲಿನ ಅತ್ಯಾಚಾರ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸ್ ಠಾಣಾ ಎಸ್ಐ ನಿರ್ಲಕ್ಷ್ಯ ವಹಿಸಿದ್ದು, ಅವರನ್ನು ಕೂಡಲೇ ಅಮಾನತುಗೊಳಿಸಬೇಕು ಮತ್ತು ಎಸ್‌ಪಿ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಸಬೇಕೆಂದು ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮಾಸಿಕ ಅಹವಾಲು ಸ್ವೀಕಾರ ಸಭೆಯಲ್ಲಿ ದಲಿತ ನಾಯಕರು ಒತ್ತಾಯಿಸಿದರು.

ಜ.18ರಂದು ದಲಿತ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಯತ್ನ ನಡೆದು 20 ದಿನಗಳ ಬಳಿಕ ಚೈಲ್ಡ್ ಲೈನ್ ನಿರ್ದೇಶನದ ಮೇರೆಗೆ ಪ್ರಕರಣವನ್ನು ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ರಾಜಾರಾಂ ಬೆಳ್ತಂಗಡಿ, ವಿಷಯ ಪ್ರಾಸ್ತಾಪಿಸಿದರು.

sc_st_sabhe_2 sc_st_sabhe_3 sc_st_sabhe_4 sc_st_sabhe_5 sc_st_sabhe_6

ಈ ಪ್ರಕರಣದ ಬಗ್ಗೆ ಪೊಲೀಸ್ ವಿಚಾರಣೆ ಬಳಿಕ ಅದನ್ನು `ಪಿಟ್ಟಿ ಕೇಸ್’ ಎಂದು ದಾಖಲಿಸಿ ನ್ಯಾಯಾಲಯಕ್ಕೆ ಸಲ್ಲಿಸುವ ಮೂಲಕ ದಲಿತ ಬಾಲಕಿಯೊಬ್ಬಳ ಮೇಲಿನ ಅತ್ಯಾಚಾರ ಯತ್ನ ಪ್ರಕರಣವನ್ನು ತೀರಾ ನಿರ್ಲಕ್ಷ್ಯದಿಂದ ಪರಿಗಣಿಸಲಾಗಿದೆ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಪೊಲೀಸ್ ವರಿಷ್ಟಾಧಿಕಾರಿ ವಿನ್ಸೆಂರ್‍ ಶಾಂತ ಕುಮಾರ್ ಬೇಸರ ವ್ಯಕ್ತಪಡಿಸಿದರು.

Write A Comment