ಕನ್ನಡ ವಾರ್ತೆಗಳು

ಹಿಂದು ಧರ್ಮದ ಮೇಲಿನ ದೌರ್ಜನ್ಯ ತಡೆಯಲು ಗ್ರಾಮ ಗ್ರಾಮಗಳಲ್ಲಿ ಹಿಂದೂ ಸಂಘಟನೆಗಳ ಅಗತ್ಯ :ಒಡಿಯೂರು ಸ್ವಾಮೀಜಿ

Pinterest LinkedIn Tumblr

hindu_yuva_photo_1

ಮಂಗಳೂರು,ಫೆ.29: ಹಿಂದು ಯುವ ಸೇನೆ ಕಾವೂರು ಘಟಕದ ವತಿಯಿಂದ ರವಿವಾರ ಮಂಗಳೂರು ಹೊರವಲಯದ ಕಾವೂರು ಮೈದಾನದಲ್ಲಿ ಬೃಹತ್ ಹಿಂದೂ ಸಮಾವೇಶ ಜರಗಿತು.

ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಹಿಂದು ಧರ್ಮದ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ನಿಲ್ಲಬೇಕಾದರೆ ಪ್ರತೀ ಗ್ರಾಮ ಗ್ರಾಮಗಳಲ್ಲಿ ಹಿಂದೂ ಪರ ಸಂಘಟನೆಗಳ ಶಾಖೆಗಳು ಜನ್ಮ ತಾಳಬೇಕು ಎಂದರು.

hindu_yuva_photo_2 hindu_yuva_photo_3 hindu_yuva_photo_4 hindu_yuva_photo_5 hindu_yuva_photo_6

ಈ ಸಂದರ್ಭ ಯುವ ಭಾರತ್ ರಾಜ್ಯ ಪ್ರಭಾರಿ ನಿಕೇತ್ ರಾಜ್ ಅವರು ಓಂ ನಮೋ ಘಟಕವನ್ನು ಉದ್ಘಾಟಿಸಿದರು. ಬಳಿಕ ದಿಕ್ಸೂಚಿ ಭಾಷಣ ಮಾಡಿದ ಅವರು, ದೇಶಾದ್ಯಂತ ವಿಶ್ವವಿದ್ಯಾನಿಲಯಗಳಲ್ಲಿ ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವವರನ್ನು ಹುಡುಕಿ ಶೀಘ್ರ ಜೈಲಿಗೆ ತಳ್ಳುವ ಕೆಲಸ ಆಗಬೇಕು. ದಿಲ್ಲಿಯ ಜವಾಹಲ್ ಲಾಲ್ ವಿಶ್ವವಿದ್ಯಾನಿಲಯದ ಹೆಸರನ್ನು ಬದಲಾಯಿಸಿ ನೇತಾಜಿ ಸುಭಾಶ್ಚಂದ್ರ ಬೋಸ್ ಎಂದು ಮರು ನಾಮಕರಣ ಮಾಡಬೇಕೆಂದು ಎಂದು ಹೇಳಿದರು.

ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಜಗದೀಶ್ ಶೇಣವ, ಹಿಂದೂ ಜಾಗರಣ ವೇದಿಕೆಯ ರಾಜ್ಯ ಸಹಸಂಚಾಲಕ ಸತ್ಯಜಿತ್ ಸುರತ್ಕಲ್, ಶರಣ್ ಪಂಪ್ ವೆಲ್, ಯಶೋಧರ ಚೌಟ ಮೊದಲಾದವರು ಸಮಾವೇಶವನ್ನುದ್ದೇಶಿಸಿ ಮಾತನಾಡಿದರು.

Write A Comment