ಕನ್ನಡ ವಾರ್ತೆಗಳು

ಶಿಕ್ಷಣದ ವ್ಯಾಪಾರೀಕರಣದಿಂದಮಾನವೀಯ ಮೌಲ್ಯಗಳ ಕುಸಿತ:ಇಸ್ಮತ್ ಪಜೀರ್

Pinterest LinkedIn Tumblr

Ams_college_photo_1

ಕಡಬ,ಫೆ.25 : ಶಿಕ್ಷಣವು ಇಂದು ವ್ಯಾಪಾರೀಕರಣಗೊಳ್ಳುತ್ತಿದೆ,ಇದರಿಂದ ಜ್ಞಾನದಾಹವನ್ನು ನೀಗಿಸಬೇಕಾದ ಶಿಕ್ಷಣ ಸಂಸ್ಥೆಗಳು ಆಡಂಬರದ ಕೆಂದ್ರಗಳಾಗುತ್ತಿವೆ. ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯ ಕುಸಿಯುತ್ತಿದೆ. ಏಕರೂಪದ ಶಿಕ್ಷಣ ವ್ಯವಸ್ಥೆಯಿಂದ‌ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು‌ ಎಂದು ಯುವ ಲೇಖಕ ಹಾಗೂ ಮಾನವ ಹಕ್ಕುಗಳ ಹೋರಾಟಗಾರ‌ ಇಸ್ಮತ್ ಪಜೀರ್‌ ಅಭಿಪ್ರಾಯಪಟ್ಟಿದ್ದಾರೆ.

ಅವರು‌ ಏಮ್ಸ್ ಪ್ರಥಮ ದರ್ಜೆ ಕಾಲೇಜು ಕಡಬ ಇದರ ಬ್ಯಾರಿ ಸಂಘದ‌ ಆಶ್ರಯದಲ್ಲಿ ನಡೆದ ಶಿಕ್ಷಣದ ವ್ಯಾಪಾರೀಕರಣ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದ‌ ಅಧ್ಯಕ್ಷತೆಯನ್ನು ಪ್ರಾಂಶುಪಾಲೆ ಸೆಮಿರಾ ಕೆ ಎ ವಹಿಸಿದ್ದರು.

Ams_college_photo_2 Ams_college_photo_3 Ams_college_photo_4 Ams_college_photo_5

ಪತ್ರಕರ್ತ ಎಂ.ಆರೀಫ್‌ ಕಲ್ಕಟ್ಟ ಕಾರ್ಯಕ್ರಮ‌ ಉದ್ಘಾಟಿಸಿದರು. ವೇದಿಕಯಲ್ಲಿ ‌ಎಮ್ಸ್‌ಕಾಲೇಜಿನ ಗೌರವ ಸಲಹೆಗಾರ ಹಾಜಿ ರಫೀಕ್ ಮಾಸ್ಟರ್, ಉಪನ್ಯಾಸಕಿ ದೀಪಿಕಾ, ಬ್ಯಾರಿ ಸಂಘದ ಸಂಯೋಜಕ ಮಹಮ್ಮದ್‌ ಇಕ್ಬಾಲ್ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಅನ್ವತ್ ಬಾನು ಪ್ರಾರ್ಥಿಸಿ, ಮಹಮ್ಮದ್‌ಅಭಿಝಿರ್ ವಂದಿಸಿದರು, ಅಶಿಬಾ ಕಾರ್ಯಕ್ರಮ ನಿರ್ವಹಿಸಿದರು.

Write A Comment