
ನವದೆಹಲಿ: ಈ ಬಾರಿಯ ರೈಲ್ವೆ ಬಜೆಟ್ನಲ್ಲಿ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ರೈಲ್ವೆ ಸೇವೆಗಳಲ್ಲಿ ತಂತ್ರಜ್ಞಾನದ ಅಳವಡಿಕೆಗೆ ಒತ್ತು ನೀಡಿದ್ದಾರೆ. ಪ್ರಯಾಣಿಕರಿಗೆ ಹೆಚ್ಚಿನ ಸೌಕರ್ಯಗಳನ್ನು ಕಲ್ಪಿಸುವ ಸಲುವಾಗಿ ಹೆಚ್ಚಿನ ನಿಲ್ದಾಣಗಳನ್ನು ಟೆಕ್ ಸ್ನೇಹಿ ನಿಲ್ದಾಣಗಳನ್ನಾಗಿ ಮಾಡಲು ಬಜೆಟ್ನಲ್ಲಿ ತೀರ್ಮಾನಿಸಲಾಗಿದೆ.
2000 ನಿಲ್ದಾಣಗಳಲ್ಲಿ ಲೈವ್ ಅಪ್ಡೇಟ್ ಲಭಿಸುವಂತೆ ಮಾಡಲು 20,000 ಡಿಸ್ಪ್ಲೇ ಸ್ಕ್ರೀನ್ಗಳು
100 ರೈಲ್ವೇ ನಿಲ್ದಾಣಗಳಲ್ಲಿ ಈ ವರ್ಷವೇ ವೈಫೈ ಸೌಲಭ್ಯ, 400 ನಿಲ್ದಾಣಗಳಲ್ಲಿ ಮುಂದಿನ ವರ್ಷ ವೈಫೈ ಸೌಲಭ್ಯ
1780 ಆಟೋಮ್ಯಾಟಿಕ್ ಟಿಕೆಟ್ ವೆಂಡಿಂಗ್ ಮೆಷಿನ್
ಟಿಕೆಟ್ಗಳಿಗೆ ಬಾರ್ಕೋಡ್
ಎಲ್ಲ ನಿಲ್ದಾಣಗಳಲ್ಲಿ ಸಿಸಿಟಿವಿ ಅಳವಡಿಕೆ
ಟಿಕೆಟ್ಗಾಗಿ ಮೊಬೈಲ್ ಆ್ಯಪ್
ದೂರು ನೀಡುವುದಕ್ಕೆ ಸಹಾಯವಾಗುವ ಮೊಬೈಲ್ ಆ್ಯಪ್
ರೈಲು ಸಮಯದ ಬಗ್ಗೆ ಪ್ರಯಾಣಿಕರಿಗೆ ತಿಳಿಸಲು ಎಸ್ಸೆಮ್ಮೆಸ್ ಅಲರ್ಟ್ ಸೌಕರ್ಯ
ಐಆರ್ಸಿಟಿಸಿ ವೆಬ್ಸೈಟ್ ಮೂಲಕ ಟಿಕೆಟ್ ಬುಕ್ ಮಾಡುವ ಹೊತ್ತಲೇ ಆಹಾರಕ್ಕೆ ಆರ್ಡರ್ ಮಾಡುವ ವ್ಯವಸ್ಥೆ
ಮೊಬೈಲ್ನಲ್ಲಿ 139 ಸಂಖ್ಯೆ ಡಯಲ್ ಮಾಡಿ ಟಿಕೆಟ್ ರದ್ದು ಮಾಡುವ ವ್ಯವಸ್ಥೆ
ದಿವ್ಯಾಂಗ (ವಿಕಲಾಂಗ)ರಿಗಾಗಿ ಬ್ಯಾಟರಿಯಿಂದ ಚಲಿಸುವ ಕಾರು ಮತ್ತು ಪೋರ್ಟರ್ ಸೇವೆ ಬುಕ್ ಮಾಡುವ ಸೌಲಭ್ಯ
ಪತ್ರಕರ್ತರಿಗೆ ಇ ಬುಕಿಂಗ್ ಮೂಲಕ ಟಿಕೆಟ್
ರೈಲುಗಳಲ್ಲಿ ಎಫ್ ಎಂ ರೇಡಿಯೋ
ಇಲ್ಲಿಯವರೆಗೆ 40 ನಿಲ್ದಾಣಗಳಲ್ಲಿ ಇ ಕ್ಯಾಟರಿಂಗ್ ಸೇವೆ ಇತ್ತು, ಇನ್ಮುಂದೆ 408 ನಿಲ್ದಾಣಗಳಲ್ಲಿ ಈ ಸೇವೆಯನ್ನು ನೀಡಲು ನಿರ್ಧಾರ.
ಎಲ್ಲ ಬೋಗಿಗಳಲ್ಲಿ ಜಿಪಿಎಸ್ ಸಿಸ್ಟಂ
ಎಸ್ಎಂಎಸ್ ಮೂಲಕ ಪ್ರಯಾಣಿಕರಿಗೆ ಸಹಾಯ ಮಾಡುವ ಕ್ಲೀನ್ ಮೈ ಕೋಚ್ ಸೇನೊ. ರೈಲಿನಲ್ಲಿ ಸುರಕ್ಷತೆಗಾಗಿ ಅಲರಾಂ ವ್ಯವಸ್ಥೆ ಕಲ್ಪಿಸುವ ವೈರ್ಲೆಸ್ ಎನೇಬಲ್ಡ್ ರಕ್ಷಕ್ ಡಿವೈಸ್ ಅಳವಡಿಕೆ
182 ಡಯಲ್ ಮಾಡುವ ಮೂಲಕ ದೂರು ದಾಖಲಿಸುವ ವ್ಯವಸ್ಥೆ, ಡಿಜಿಟಲ್ ಇಂಡಿಯಾ ಸಹಯೋಗದೊಂದಿಗೆ ರೈಲ್ವೇ ಸಚಿವಾಲಯದಿಂದ ಸಹಾಯ ವ್ಯವಸ್ಥೆ