ಕನ್ನಡ ವಾರ್ತೆಗಳು

ಕುಂದಾಪುರ: ಬಿಜೆಪಿ-ಹಾಲಾಡಿ ಜುಗಲ್‌ಬಂದಿ; ಕಾಂಗ್ರೆಸ್ ಸೇರಿತು ಮನೆ ಹಾದಿ; ಬೈಂದೂರಲ್ಲೂ ಬಿಜೆಪಿ ಹವಾ!

Pinterest LinkedIn Tumblr

ಕುಂದಾಪುರ: ‘ಗೆದ್ದಿತಣ್ಣಾ ಗೆದ್ದಿತೋ ಬಿಜೆಪಿ ಗೆದ್ದಿತೋ’ ‘ಬಿಜೆಪಿಗೆ ಜೈ’, ‘ಹಾಲಾಡಿ ಶ್ರೀನಿವಾಸ್ ಶೆಟ್ಟಿಯವರಿಗೆ ಜೈ’ ….ಇಷ್ಟೆಲ್ಲಾ ಜೈಕಾರಗಳು ಕೇಳಿಬಂದಿದ್ದು ಕುಂದಾಪುರದ ಭಂಡರ್ಕಾರ್ಸ್ ಕಾಲೇಜು ರಸ್ತೆಯಲ್ಲಿ. ಹೌದು. ಮತಎಣಿಕೆ ಕಾರ್ಯ ಆರಂಭವಾಗಿ ವಿವಿಧ ಕ್ಷೇತ್ರಗಳ ಫಲಿಂತಾಶಗಳ ಘೋಷಣೆಗಳು ಹೊರಬೀಳೂತ್ತಿದ್ದಂತೆಯೇ ನೆರೆದ ಕಾರ್ಯಕರ್ತರ ಹರ್ಷೋದ್ಘಾರ ಮುಗಿಲುಮುಟ್ಟಿತ್ತು.

ಕುಂದಾಪುರ ವಿಧಾನಸಭಾ ಕ್ಷೇತ್ರದ ಐದು ಜಿಲ್ಲಾಪಂಚಾಯತ್ ಕ್ಷೇತ್ರಗಳಲ್ಲಿ ಐದು ಬಿಜೆಪಿ ತನ್ನ ಪ್ರಾಬಲ್ಯವನ್ನು ಸಾಧಿಸಿತು. ಮಂದರ್ತಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಹೆಗ್ಡೆ ತನ್ನ ಎದುರಾಳಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ದ 5800ಕ್ಕೂ ಅಧಿಕ ಮತಗಳ ಅಂತರದಲ್ಲಿ ಜಯಭೇರಿ ಬಾರಿಸಿದ್ದಾರೆ. ಇನ್ನು 21ತಾಲೂಕುಪಂಚಾಯತ್ ಪೈಕಿ 20 ಕ್ಷೇತ್ರಗಳು ಬಿಜೆಪಿ ಪಡೆದುಕೊಂಡರೇ ಕುಂಭಾಸಿ ಒಂದು ಕ್ಷೇತ್ರ ಮಾತ್ರ ಕಾಂಗ್ರೆಸ್ ಪಾಲಾಗಿದೆ. ಬೈಂದೂರು ವಿಧಾನಸಭಾ ಕ್ಷೇತ್ರದ 7 ಜಿ.ಪಂ. ಕ್ಷೇತ್ರಗಳಲ್ಲಿ 5 ಜಿ.ಪಂ. ಕ್ಷೇತ್ರಗಳನ್ನು ಬಿಜೆಪಿ ತೆಕ್ಕೆಗೆ ಸೇರಿಸಿಕೊಂಡರೇ 2 ಕ್ಷೇತ್ರಗಳಿಗೆ ಕಾಂಗ್ರೆಸ್ ತ್ರಪ್ತಿಪಟ್ಟುಕೊಂಡಿದೆ. ಬಹು ಪ್ರತೀಷ್ಟೆಯ ಕಣವಾಗಿದ್ದ ಬೈಂದೂರು ಜಿಲ್ಲಾಪಂಚಾಯತ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿ ಎದುರು ಬಿಜೆಪಿಯ ಶಂಕರ್ ಪೂಜಾರಿ ಜಯ ಈ ಚುನಾವಣೆ ಹೈಲೆಟ್ಸ್. ಕಾಂಗ್ರೆಸ್ ಕಾವ್ರಾಡಿ ಹಾಗೂ ಖಂಬದಕೋಣೆ ಕ್ಷೇತ್ರಗಳ ಪಾಲಿಗೊದಗಿದೆ.

ZP,TP_Winnig Candidate_Kndpr (3)

(ಕುಂದಾಪುರ್ ವಿಧಾನಸಭಾ ಕ್ಷೇತ್ರದ ಬಿಜೆಪಿ  ಜಿ.ಪಂ ಸದಸ್ಯರು ಕ್ರಮವಾಗಿ- ಶ್ರೀಲತಾ ಶೆಟ್ಟಿ, ಸುಪ್ರೀತಾ ಕುಲಾಲ್, ಲಕ್ಷ್ಮೀ ಮಂಜು ಬಿಲ್ಲವ, ಪ್ರತಾಪ್ ಹೆಗ್ಡೆ, ರಾಘವೇಂದ್ರ ಕಾಂಚನ್)

ಕುಂದಾಪುರದಲ್ಲಿ ಬಿಜೆಪಿ-ಹಾಲಾಡಿಯ ಹವಾ?!
ಜಿಲ್ಲಾಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆ ಟಿಕೇಟ್ ಹಂಚಿಕೆಯ ವೇಳೆ ಬಿಜೆಪಿ ಪಕ್ಷ ಹಾಲಾಡಿ ಶ್ರೀನಿವಾಸ್ ಶೆಟ್ಟಿಯವರ ಆಪ್ತರು ಎನ್ನುವ ಕಾರಣಕ್ಕಾಗಿ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕೆಲವು ಗೊಂದಲಗಳುಂಟಾಗಿ ಹಲವರು ರಾಜಿನಾಮೆ ನೀಡಿದ್ದರು. ಬಳಿಕ ಒಂದು ಹಂತದಲ್ಲಿ ಎಲ್ಲವೂ ಸರಿಗೊಂಡು ಬಿಜೆಪಿಯ ಕಮಲ ಚಿಹ್ನೆಯಿಂದ ಐವರು ಕಣಕ್ಕಿಳಿದಿದ್ದರು. ರಾಜಕೀಯ ವಿಶ್ಲೇಷಕರ ಪ್ರಕಾರ ಕುಂದಾಪುರದ ಐದು ಕ್ಷೇತ್ರಗಳು ಬಿಜೆಪಿಗೆ ಪಾಲಾಗುವ ನಿರೀಕ್ಷೆಯೂ ಇತ್ತು.ಅಂತೆಯೇ ಬಿಜೆಪಿ ಹಾಗೂ ಹಾಲಾಡಿ ಜುಗಲ್ ಬಂದಿಯಲ್ಲಿ ಬಿಜೆಪಿ ಪ್ರಚಂಡ ಗೆಲುವು ಸಾಧಿಸಿದೆ.

ZP,TP_Winnig Candidate_Kndpr (2)

(ಬೈಂದೂರು ವಿ.ಕ್ಷೇತ್ರದ ಬಿಜೆಪಿ  ಜಿ.ಪಂ ಸದಸ್ಯರು- ಬಾಬು ಹೆಗ್ಡೆ, ಸುರೇಶ್ ಬಟವಾಡಿ, ತಾರನಾಥ ಶೆಟ್ಟಿ, ಶಂಕರ ಪೂಜಾರಿ, ಶೋಭಾ ಪುತ್ರನ್ )

ZP,TP_Winnig Candidate_Kndpr (1)

(ಬೈಂದೂರು ವಿ.ಕ್ಷೇತ್ರದ ಕಾಂಗ್ರೆಸ್  ಜಿ.ಪಂ ಸದಸ್ಯರು- ಗೌರಿ ದೇವಾಡಿಗ, ಜ್ಯೋತಿ ಎಂ)

ಬೈಂದೂರಲ್ಲಿ ಬಿಜೆಪಿಗೆ ಮಣೆ ಹಾಕಿದ ಮತದಾರ!
ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿಯವರ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ನೆಲಕ್ಕಚ್ಚಿದೆ. ಹಲವು ಮುಖಂಡರ ತವರಾದ ಬೈಂದೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಧೂಳಿಪಟವಾಗಿರುವುದು ಎಲ್ಲರಿಗೂ ಮುಜುಗರದ ವಿಚಾರವಾಗಿದೆ. ಈ ಮೊದಲು ಬಿಜೆಪಿಯಲ್ಲಿದ್ದ ಗೌರಿ ದೇವಾಡಿಗ ಕಾಂಗ್ರೆಸಿಗೆ ಸೇರ್ಪಡೆಗೋಂಡು ಕಾಂಗ್ರೆಸ್ ಮುಖಂಡರಾದ ಶಾರದಾ ಬಿಜೂರು ಅವರ ಪುತ್ರಿ ಪ್ರಿಯದರ್ಶಿನಿ ದೇವಾಡಿಗ ಎದುರು ಸ್ಪರ್ಧೆಗಿಳಿದಿದ್ದು ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು, ಇಂದು ನಡೆದ ಮತಎಣಿಕೆಯಲ್ಲಿ ಗೌರಿದೇವಾಡಿಗ(ಕಾಂಗ್ರೆಸ್) ಗೆಲುವು ಸಾಧಿಸಿದ್ದಾರೆ.

Udupi_Election_Winners (5) Udupi_Election_Winners (13) Udupi_Election_Winners (2) Udupi_Election_Winners (9)

Udupi_Election_Winners (6)

Udupi_Election_Winners (14) Udupi_Election_Winners (16) Udupi_Election_Winners (15) Udupi_Election_Winners (17) Udupi_Election_Winners (4) Udupi_Election_Winners (3) Udupi_Election_Winners (1) Udupi_Election_Winners (7) Udupi_Election_Winners (8) Udupi_Election_Winners (10) Udupi_Election_Winners (12) Udupi_Election_Winners (18) Udupi_Election_Winners (11)

ಕುಂದಾಪುರ ತಾಲೂಕಿನ ಜಿ.ಪಂ. ಅಭ್ಯರ್ಥಿಗಳು

ಪಡೆದ ಮತ ಹಾಗೂ ಗೆಲುವಿನ ಅಂತರ

ಶಿರೂರು ಜಿಪಂ ಕ್ಷೇತ್ರ:- ಬಟವಾಡಿ ಸುರೇಶ್ ಬಜೆಪಿ- ಮತ-9657 , ಎಸ್. ಮದನ್ ಕುಮಾರ್ (ಕಾಂ.)7907, ರಾಜು ದೇವಾಡಿಗ(ಜೆಡಿ‌ಎಸ್)181, ರವೀಂದ್ರ ವಿ.ಕೆ. (ಪಕ್ಷೇತರ)531, ಸುರಯ್ಯ ಬಾನು (ಪಕ್ಷೇತರ)80, ಸೈಯದ್ ಅಬ್ದುಲ್ ಖಾದರ್117 (ಪಕ್ಷೇತರ)— ಗೆಲುವಿನ ಅಂತರ- 1660
ಬೈಂದೂರು ಜಿಪಂ ಕ್ಷೇತ್ರ:-ಶಂಕರ ಪೂಜಾರಿ (ಬಿಜೆಪಿ)ಮತ-12115  ರಾಜು ಪೂಜಾರಿ (ಕಾಂಗ್ರೆಸ್)ಮತ- 10,753.  ಗೆಲುವಿನ ಅಂತರ- 1362
ಕಂಬದಕೋಣೆ ಜಿಪಂ ಕ್ಷೇತ್ರ:- ಗೌರಿ ದೇವಾಡಿಗ (ಕಾಂಗ್ರೆಸ್)ಮತ- 9670, ಪ್ರಿಯದರ್ಶಿನಿ ದೇವಾಡಿಗ (ಬಿಜೆಪಿ)-8846, ರೇವತಿ ಪೂಜಾರ್‍ತಿ (ಜೆಡಿ‌ಎಸ್)377  ಗೆಲುವಿನ ಅಂತರ- 824
ತ್ರಾಸಿ ಜಿಪಂ ಕ್ಷೇತ್ರ:ಶೋಭಾ ಜಿ.ಪುತ್ರನ್ (ಬಿಜೆಪಿ)ಮತ- 8929, ಸಾಧು ಎಸ್.ಬಿಲ್ಲವ (ಕಾಂಗ್ರೆಸ್) 8300, ಯಮುನಾ ಎಸ್.ಪೂಜಾರಿ (ಸಿಪಿ‌ಎಂ) 1227. ಗೆಲುವಿನ ಅಂತರ-625
ವಂಡ್ಸೆ ಜಿಪಂ ಕ್ಷೇತ್ರ:- ಕೆ.ಬಾಬು ಶೆಟ್ಟಿ (ಬಿಜೆಪಿ)ಮತ-10,476. ಹರ್ಕೂರು ಮಂಜಯ್ಯ ಶೆಟ್ಟಿ (ಕಾಂಗ್ರೆಸ್) 10,320. ಸುರೇಶ್ ಕಲ್ಲಾಗರ (ಸಿಪಿ‌ಐ(ಎಂ)1419. ಗೆಲುವಿನ ಅಂತರ- 156
ಕಾವ್ರಾಡಿ ಜಿಪಂ ಕ್ಷೇತ್ರ:- ಜ್ಯೋತಿ ಎಂ. (ಕಾಂಗ್ರೆಸ್)ಮತ-8382, ಸುಶೀಲಾ (ಬಿಜೆಪಿ)7633 ಪೂರ್ಣಿಮಾ (ಸಿಪಿ‌ಐ(ಎಂ)1272.  ಗೆಲುವಿನ ಅಂತರ- 745
ಕೋಟೇಶ್ವರ ಜಿಪಂ ಕ್ಷೇತ್ರ:ಲಕ್ಷ್ಮೀ ಮಂಜು ಬಿಲ್ಲವ (ಬಿಜೆಪಿ)ಮತ-10,948. ಗೀತಾ ಶಂಭು ಪೂಜಾರಿ (ಕಾಂಗ್ರೆಸ್)6523, ಎಚ್.ಜ್ಯೋತಿ ಉಪಾಧ್ಯ (ಸಿಪಿ‌ಎಂ)1264. ಗೆಲುವಿನ ಅಂತರ- 4425
ಬೀಜಾಡಿ ಜಿಪಂ ಕ್ಷೇತ್ರ:- ಶ್ರೀಲತಾ ಸುರೇಶ್ ಶೆಟ್ಟಿ (ಬಿಜೆಪಿ)ಮತ-11,249. ಜ್ಯೋತಿ ಎ.ಶೆಟ್ಟಿ (ಕಾಂಗ್ರೆಸ್)8798.  ಗೆಲುವಿನ ಅಂತರ- 2451.
ಸಿದ್ದಾಪುರ ಜಿಪಂ ಕ್ಷೇತ್ರ:- ಹಾಲಾಡಿ ತಾರಾನಾಥ ಶೆಟ್ಟಿ (ಬಿಜೆಪಿ)ಮತ- 12,336. ಸಂಪಿಗೇಡಿ ಸಂಜೀವ ಶೆಟ್ಟಿ (ಕಾಂಗ್ರೆಸ್)10278.   ಗೆಲುವಿನ ಅಂತರ- 2058.
ಹಾಲಾಡಿ ಜಿಪಂ ಕ್ಷೇತ್ರ:- ಸುಪ್ರೀತಾ ಉದಯ ಕುಲಾಲ್ (ಬಿಜೆಪಿ)ಮತ-13,226. ಆಶಾಲತಾ ಚಂದ್ರಶೇಖರ್ (ಕಾಂಗ್ರೆಸ್)9865. ಗೆಲುವಿನ ಅಂತರ-3361.

ಕುಂದಾಪುರ ವಿಧಾನಸಭಾಕ್ಷೇತ್ರದ ಮಂದರ್ತಿ- ಬಿಜೆಪಿಯ ಪ್ರತಾಪ್ ಹೆಗ್ಡೆ. ಕೋಟ ಕ್ಷೇತ್ರದ ಬಿಜೆಪಿ ಅಬ್ಯರ್ಥಿ ರಾಘವೇಂದ್ರ ಕಾಂಚನ್

ಕುಂದಾಪುರ-ಬೈಂದೂರು ತಾ.ಪಂ. ಕ್ಷೇತ್ರದ ವಿಜೇತರು ಮತ್ತು ಪಕ್ಷ

1)ಶಿರೂರು 1: ದಸ್ತಗಿರಿ ಮೌಲಾನಾ (ಬಿಜೆಪಿ), 2) ಶಿರೂರು 1: ಪುಷ್ಪರಾಜ್ ಶೆಟ್ಟಿ (ಬಿಜೆಪಿ), 3)ಪಡುವರಿ: ಗಿರಿಜಾ ಖಾರ್ವಿ (ಬಿಜೆಪಿ), 4)ಯಡ್ತರೆ: ಸುಜಾತ ದೇವಾಡಿಗ (ಬಿಜೆಪಿ), 5)ಬೈಂದೂರು: ಮಾಲಿನಿ.ಕೆ (ಬಿಜೆಪಿ), 6) ಉಪ್ಪುಂದ: ಪ್ರಮೀಳಾ.ಕೆ.ದೇವಾಡಿಗ (ಕಾಂಗ್ರೆಸ್), 7)ಬಿಜೂರು: ಜಗದೀಶ ದೇವಾಡಿಗ (ಕಾಂಗ್ರೆಸ್), 8) ಕೊಲ್ಲೂರು; ಗ್ರೀಷ್ಮಾ ಗಿರಿಧರ ಭಿಡೆ (ಕಾಂಗ್ರೆಸ್), 9) ಕಾಲ್ತೋಡು: ಎಚ್.ವಿಜಯ ಶೆಟ್ಟಿ (ಕಾಂಗ್ರೆಸ್), 10)ಕಂಬದಕೋಣೆ: ಮಹೇಂದ್ರ ಪೂಜಾರಿ (ಬಿಜೆಪಿ), 11) ಕಿರಿಮಂಜೇಶ್ವರ: ಶ್ಯಾಮಲ.ಎಸ್.ಕುಂದರ್ (ಬಿಜೆಪಿ), 12) ಮರವಂತೆ: ಜಗದೀಶ ಪೂಜಾರಿ (ಕಾಂಗ್ರೆಸ್), 13) ನಾಡಾ: ಪ್ರವೀಣ್ ಕುಮಾರ ಕಡ್ಕೆ (ಬಿಜೆಪಿ), 14) ಆಲೂರು: ಇಂದಿರಾ ಶೆಟ್ಟಿ (ಬಿಜೆಪಿ), 15) ತ್ರಾಸಿ: ನಾರಾಯಣ.ಕೆ.ಗುಜ್ಜಾಡಿ (ಬಿಜೆಪಿ), 16) ಗಂಗೊಳ್ಳಿ: ಸುರೇಂದ್ರ ಖಾರ್ವಿ (ಬಿಜೆಪಿ), 17) ವಂಡ್ಸೆ: ಉದಯ.ಜಿ.ಪೂಜಾರಿ (ಕಾಂಗ್ರೆಸ್), 18) ಕರ್ಕುಂಜೆ : ಎಚ್.ಸತೀಶ್.ಪೂಜಾರಿ (ಕಾಂಗ್ರೆಸ್), 19) ಹಳ್ಳಿಹೊಳೆ: ಪೂರ್ಣಿಮಾ (ಬಿಜೆಪಿ), 20) ಸಿದ್ದಾಪುರ: ಎಸ್.ಕೆ.ವಾಸುದೇವ ಪೈ (ಕಾಂಗ್ರೆಸ್), 21) ಆಜ್ರಿ: ದೇವದಾಸ ಶೆಟ್ಟಿ (ಬಿಜೆಪಿ), 22) ಕಾವ್ರಾಡಿ: ಅಂಬಿಕಾ (ಕಾಂಗ್ರೆಸ್), 23) ಹೆಮ್ಮಾಡಿ: ರಾಜು ದೇವಾಡಿಗ (ಕಾಂಗ್ರೆಸ್), 24) ತಲ್ಲೂರು: ಕರುಣ್ ಪೂಜಾರಿ (ಬಿಜೆಪಿ), 25) ಶಂಕರನಾರಾಯಣ: ಉಮೇಶ್ ಶೆಟ್ಟಿ ಕಲ್ಗೆದ್ದೆ (ಬಿಜೆಪಿ), 26) ಬಸ್ರೂರು: ರಾಮ್ ಕಿಶನ್ ಹೆಗ್ಡೆ (ಬಿಜೆಪಿ), 27) ಕೋಣಿ: ಚಂದ್ರಲೇಖಾ ಸುರೇಶ್ ಪೂಜಾರಿ (ಬಿಜೆಪಿ), 28) ಕೋಟೇಶ್ವರ: ಎ.ರೂಪ.ಬಿ.ಪೈ (ಬಿಜೆಪಿ), 29) ಹಂಗಳೂರು: ಸ್ವಪ್ನ ಮೊಗವೀರ (ಬಿಜೆಪಿ), 30) ಬೀಜಾಡಿ: ವೈಲೆಟ್ ಬರೆಟ್ಟೊ (ಬಿಜೆಪಿ), 31) ಕುಂಭಾಸಿ : ಜ್ಯೋತಿ.ವಿ.ಪುತ್ರನ್ (ಕಾಂಗ್ರೆಸ್), 32) ಬೇಳೂರು: ಶ್ರೀಲತಾ ಮಹೇಶ್ ಹೆಗ್ಡೆ (ಬಿಜೆಪಿ), 33) ಕಾಳಾವರ: ಶೈಲಶ್ರೀ.ಎಸ್.ಶೆಟ್ಟಿ (ಬಿಜೆಪಿ), 34) ಮೊಳಹಳ್ಳಿ: ಜಯಶ್ರೀ ಸುಧಾಕರ ಮೊಗವೀರ (ಬಿಜೆಪಿ), 35)  ಹಾರ್ದಳ್ಳಿ : ಸವಿತಾ.ಎಸ್.ಮೊಗವೀರ (ಬಿಜೆಪಿ), 36) ಅಮಾಸೆಬೈಲು: ಜ್ಯೋತಿ ಪೂಜಾರ್ತಿ (ಬಿಜೆಪಿ), 37) ಬೆಳ್ವೆ: ಎಸ್.ಚಂದ್ರಶೇಖರ ಶೆಟ್ಟಿ (ಬಿಜೆಪಿ)

Write A Comment