ಕನ್ನಡ ವಾರ್ತೆಗಳು

ಜಿಲ್ಲಾದ್ಯಂತ ಮತಎಣಿಕೆ ಆರಂಭ; ಬಿಗು ಬಂದೋಬಸ್ತ್; ಅಭ್ಯರ್ಥಿಗಳ ಎದೆಯಲಿ ಢವಢವ.!

Pinterest LinkedIn Tumblr

ಉಡುಪಿ: ಜಿಲ್ಲೆಯ ಮೂರು ತಾಲೂಕು ಕೇಂದ್ರಗಳಲ್ಲಿ ಮಂಗಳವಾರ ಬೆಳಗ್ಗೆ 8 ಗಂಟೆಗೆ ಜಿ.ಪಂ./ತಾ.ಪಂ. ಚುನಾವಣೆ ಮತ ಎಣಿಕೆ ಆರಂಭವಾಗಿದೆ. 8 ಕ್ಕೆ ಮತಯಂತ್ರಗಳನ್ನು ಇರಿಸಿದ್ದ ಭದ್ರತಾ ಕೊಠಡಿ (ಸ್ಟ್ರಾಂಗ್‌ರೂಂ) ತೆರೆಯಲಾಗಿದ್ದು. ಆರಂಭದಲ್ಲಿ ಅಂಚೆ ಮತಗಳ ಎಣಿಕೆ ನಡೆದಿದೆ.

ಉಡುಪಿಯ ಸೈಂಟ್ ಸಿಸಿಲೀಸ್ ಶಾಲೆ, ಕುಂದಾಪುರದ ಭಂಡಾರ್‌ಕಾರ್‍ಸ್ ಕಾಲೇಜು, ಕಾರ್ಕಳದ ಸರಕಾರಿ ಕಾಲೇಜಿನಲ್ಲಿ ಮತಯಂತ್ರಗಳನ್ನು ಬಿಗು ಪೊಲೀಸ್ ಕಾವಲಿನೊಂದಿಗೆ ಮತಎಣಿಕೆ ಕಾರ್ಯ ಚುರುಕು ಗತಿಯಲ್ಲಿ ಸಾಗುತ್ತಿದೆ.

Election_Counting_Udp (5) Election_Counting_Udp (10) Election_Counting_Udp (4) Election_Counting_Udp (9) Election_Counting_Udp (7) Election_Counting_Udp (3) Election_Counting_Udp (8) Election_Counting_Udp (11) Election_Counting_Udp (6) Election_Counting_Udp (1) Election_Counting_Udp (2)

ಪ್ರತಿ ಜಿ.ಪಂ. ಕ್ಷೇತ್ರಕ್ಕೆ 3 ಮೇಜು ಮತ್ತು ತಾ.ಪಂ.ಗೆ ಒಂದು ಮೇಜು ವ್ಯವಸ್ಥೆಗೊಳಿಸಲಾಗಿದೆ. ಬೆಳಗ್ಗೆ ಬೇಗ ಪಕ್ಷಗಳ ಏಜೆಂಟರು, ನಾಯಕರು ಮತ ಎಣಿಕೆ ಕೇಂದ್ರಗಳಿಗೆ ಆಗಮಿಸಿದ್ದು ವಿದ್ಯುನ್ಮಾನ ಮತಯಂತ್ರಗಳಲ್ಲಿ ಮತದಾನ ನಡೆದ ಪರಿಣಾಮ ಜನರ ಕುತೂಹಲ ಬಹಳ ಬೇಗ ತಣಿಯಲಿದೆ. . ಮಧ್ಯಾಹ್ನದವರೆಗೆ ಮತ ಎಣಿಕೆ ಕೇಂದ್ರಗಳ ಹೊರಗೆ ಬಿಗು ವಾತಾವರಣ, ಇನ್ನೊಂದೆಡೆ ಸಂಭ್ರಮ ವಾತಾವರಣ ಏರ್ಪಡಲಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಿಗು ಬಂದೋಬಸ್ತ್ ಏರ್ಪಡಿಸಲಾಗಿದೆ.

ಉಡುಪಿ ಜಿಲ್ಲೆಯ ಜಿ.ಪಂ.ನ 26 ಕ್ಷೇತ್ರಗಳ ಮತ ಎಣಿಕೆಗೆ 78 ಮತ್ತು ತಾ.ಪಂ.ಗಳ 98 ಕ್ಷೇತ್ರಗಳ ಮತ ಎಣಿಕೆಗೆ 98 ಮೇಜುಗಳನ್ನು ಅಳವಡಿಸಲಾಗಿದೆ. ಉಡುಪಿ ತಾಲೂಕಿನಲ್ಲಿ 11 ಜಿ.ಪಂ. ಮತ್ತು 41 ತಾ.ಪಂ. ಕ್ಷೇತ್ರ, ಕುಂದಾಪುರ ತಾಲೂಕಿನ 10 ಜಿ.ಪಂ. ಮತ್ತು 37 ತಾ.ಪಂ. ಕ್ಷೇತ್ರ, ಕಾರ್ಕಳ ತಾಲೂಕಿನ 5 ಜಿ.ಪಂ. ಮತ್ತು 20 ತಾ.ಪಂ. ಕ್ಷೇತ್ರಗಳಿಗೆ ಸಭಾಂಗಣ ಮತ್ತು ಕೊಠಡಿಗಳಲ್ಲಿ ಮತ ಎಣಿಕೆ ನಡೆಯಲಿದೆ. ಜಿ.ಪಂ., ತಾ.ಪಂ.ಗೆ ಪ್ರತ್ಯೇಕವಾಗಿ ಪ್ರತಿ ಮೇಜಿಗೆ ಒಬ್ಬರು ಮೇಲ್ವಿಚಾರಕರು, ಒಬ್ಬರು ಸಹಾಯಕರನ್ನು ನಿಯೋಜಿಸಲಾಗಿದೆ. ಅಂಚೆ ಮತಪತ್ರಗಳ ಎಣಿಕೆ ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ನಡೆಯಲಿದೆ. ಫಲಿತಾಂಶ ಪ್ರಕಟನೆಗೆ ಬೇಕಾದ ವ್ಯವಸ್ಥೆಗಳನ್ನು ಮಾಡಲಾಗಿದೆ.

ಯಾವುದೇ ಅಹಿತಕಾರಿ ಘಟನೆಗಳು ನಡೆಯದಂತೆ ಮುಂಜಾಗರೂಕತಾ ಕ್ರಮವಾಗಿ ಮಂಗಳವಾರ (ಫೆ. 23)ರಂದು ಜಿಲ್ಲೆಯಾದ್ಯಂತ ವಿಜಯೋತ್ಸವ ಆಚರಣೆ ನಡೆಸುವುದನ್ನು ನಿರ್ಬಂಧಿಸಲಾಗಿದ್ದು ಮದ್ಯಪಾನ ಮಾರಾಟವನ್ನು ನಿಷೇದಿಸಲಾಗಿದೆ.

Write A Comment